ನರಿಕೊಂಬುವಿನಲ್ಲಿ ಓಂ ಶ್ರೀ ಗೆಳೆಯರ ಬಳಗ ಮತ್ತು ಓಂ ಶ್ರೀ ಮಹಿಳಾ ಮಂಡಳಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ನವಜೀವನ ಗೇಮ್ಸ್ ಕ್ಲಬ್, ಎಂವೈಸಿ ಮರ್ದೋಳಿ, ಶ್ರೀದೇವಿ ಯುವಕ ಮಂಡಲ, ಸಂಯುಕ್ತ ಆಶ್ರಯದಲ್ಲಿ ರಸ್ತೆ ಬದಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.
ಕಾಪಿಕಾಡ್ ನ ಶ್ರೀದೇವಿ ಯುವಕ ಬಳಿಯಿಂದ ಪಾಣೆಮಂಗಳೂರುವರೆಗೆ ಸ್ವಚ್ಛತಾ ಕಾರ್ಯಕ್ರಮ ನಡೆಸಲಾಯಿತು. ಓಂ ಶ್ರೀ ಗೆಳೆಯರ ಬಳಗದವರು ಉಪಾಹಾರ ವ್ಯವಸ್ಥೆ ಮಾಡಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಓಂ ಶ್ರೀ ಗೆಳೆಯರ ಬಳಗದ ಅಧ್ಯಕ್ಷ ಕಿರಣ್ ಆಟ್ಲೂರು ಮಾತನಾಡಿ ಮುಂದಿನ ವರ್ಷ ನವಜೀವನದ ಮುಂದಾಳತ್ವದಲ್ಲಿ ಈ ಸ್ವಚ್ಛತಾ ಕಾರ್ಯಕ್ರಮ ನಡೆಯಲಿದೆ ಎಂದರು,
ಉದ್ಯಮಿ ಉಮೇಶ್ ನೆಲ್ಲಿಗುಡ್ಡೆ, ಶ್ರೀದೇವಿ ಯುವಕ ಮಂಡಲ ನಾಯಿಲ ಕಾಪಿಕಾಡ್ ಅಧ್ಯಕ್ಷ ಲೋಕೇಶ್ ಬೋರುಗುಡ್ಡೆ, ನವಜೀವನ ಗೇಮ್ಸ್ ಕ್ಲಬ್ ಅಧ್ಯಕ್ಷ ಸುಧೀರ್ ವಿದ್ಯಾನಗರ, ನವಜೀವನ ಹನುಮಾನ್ ಮಂದಿರ ಅಧ್ಯಕ್ಷ ಶರತ್ ವಿದ್ಯಾನಗರ, ಎಂವೈಸಿ ಮರ್ದೋಳಿಯ ಚರಣ್ ಕುಮಾರ್, ಓಂಶ್ರೀ ಮಹಿಳಾ ಮಂಡಳಿ ಅಧ್ಯಕ್ಷೆ ನಳಿನಿ ಶುಭಕರ ಉಪಸ್ಥಿತರಿದ್ದರು.
Be the first to comment on "ನಮ್ಮ ಊರು ಸ್ವಚ್ಛ ಊರು: ನರಿಕೊಂಬಿನಲ್ಲಿ ಸ್ವಚ್ಛತಾ ಕಾರ್ಯಕ್ರಮ"