ಬಂಟ್ವಾಳ: ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕರ್ನಾಟಕದ ಮೂರನೇ ಮಿನಿ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಜೂಡೋ ಮಾರ್ಷಲ್ ಆರ್ಟ್ ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿದ್ದ ಕಲ್ಲಡ್ಕ ಶ್ರೀರಾಮ ವಿದ್ಯಾಸಂಸ್ಥೆಯ 6ನೇ ತರಗತಿ ವಿದ್ಯಾಥಿನಿ ಅನನ್ಯ ಎ. ಆರ್. ಕಂಚಿನ ಪದಕದೊಂದಿಗೆ ತೃತೀಯ ಸ್ಥಾನವನ್ನು ಗೆದ್ದುಕೊಂಡಿದ್ದಾರೆ. ಅಶೋಕ ಕುಮಾರ್ ಬರಿಮಾರು ಮತ್ತು ಕೆ ಪಿ ಎಸ್ ಸಿ ಮೊಂಟೆ ಪದವು ಪ್ರೌಢ ಶಾಲೆ ದೈಹಿಕ ಶಿಕ್ಷಣ ಶಿಕ್ಷಕಿ ರೋಹಿಣಿ ಬಿ ಅವರ ಪುತ್ರಿ ಯಾಗಿದ್ದು ಪೊಳಲಿಯ ಸರ್ವಮಂಗಳ ಸಭಾಂಗಣದಲ್ಲಿ ಜೂಡೋ ಮಾರ್ಷಲ್ ಆರ್ಟ್ ತರಬೇತುದಾರ ರಾಜೇಶ್ ಬ್ರಹ್ಮರಕೂಟ್ಲು ಅವರಿಂದ ತರಬೇತಿಯನ್ನು ಪಡೆಯುತ್ತಿದ್ದಾರೆ. ವಿದ್ಯಾವಿಲಾಸ ಶಾಲೆಯಾಡಳಿತ ಮಂಡಳಿಯ ಸುಬ್ರಾಯ ಕಾರಂತ್ ಸಹಕರಿಸಿದ್ದಾರೆ.
| ಪುರಸಭಾ ವ್ಯಾಪ್ತಿಯ ಜನರಲ್ಲಿ ಸಹಕಾರಕ್ಕೆ ಪ್ರಾಜೆಕ್ಟ್ ಡೈರೆಕ್ಟರ್ ಸಂತೋಷ್ ಕುಮಾರ್ ಮನವಿ | ನೀರು ಶುದ್ಧೀಕರಣ ಘಟಕಕ್ಕೆ ಭೇಟಿ,…