ಬಂಟ್ವಾಳ: ಸರಕಾರದ ಪಂಚಗ್ಯಾರಂಟಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಹಲವರು ಯೋಜನೆಯಿಂದ ಹೊರಗುಳಿದಿದ್ದು, ಇದರ ಕುರಿತು ಸಮರ್ಪಕ ಮಾಹಿತಿ ನೀಡುವ ಸಲುವಾಗಿ ತಾಲೂಕಿನಾದ್ಯಂತ ಶಿಬಿರಗಳನ್ನು ಆಯೋಜಿಸಲಾಗಿದೆ ಎಂದು ಬಂಟ್ವಾಳ ತಾಲೂಕಿನ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷೆ ಜಯಂತಿ ವಿ.ಪೂಜಾರಿ ಹೇಳಿದ್ದಾರೆ.
ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ, 19ರಂದು ಮಣಿನಾಲ್ಕೂರು ಗ್ರಾಪಂನಲ್ಲಿ ಕಾವಳಪಡೂರು, ಕಾವಳಮುಡೂರು, ಉಳಿ, ಮಣಿನಾಲ್ಕೂರು, ನಾವೂರು, ಬಡಗಕಜೆಕಾರು, ಸರಪಾಡಿ, ಡಿಸೆಂಬರ್ 13ರಂದು ಕನ್ಯಾನ ಗ್ರಾಪಂನಲ್ಲಿ ಅಳಿಕೆ, ಕನ್ಯಾನ, ಕರೋಪಾಡಿ, ಮಾಣಿಲ, ಪೆರುವಾಯಿ, ಪುಣಚ, ಕೇಪು ಗ್ರಾಮಗಳಿಗೆ ಒಳಪಟ್ಟು, ನವೆಂಬರರ್ 26ರಂದು ಮಾಣಿಯಲ್ಲಿ ಅನಂತಾಡಿ, ಪೆರಾಜೆ, ನೆಟ್ಲಮುಡ್ನೂರು, ಬರಿಮಾರು, ಮಾಣಿ, ಕಡೇಶ್ವಾಲ್ಯ, ಕೆದಿಲ ಮತ್ತು ಪೆರ್ನೆ, ನವೆಂಬರ್ 27ರಂದು ಬಂಟ್ವಾಳ ಪುರಸಭಾ ವ್ಯಾಪ್ತಿಯ ವಾರ್ಡುಗಳಿಗೆ ಸಂಬಂಧಿಸಿ ಬಂಟ್ವಾಳ ಪುರಸಭಾ ಕಚೇರಿಯಲ್ಲಿ, ಡಿಸೆಂಬರ್ 5ರಂದು ಬೋಳಂತೂರು ಗ್ರಾಪಂ ನಲ್ಲಿ ಬಾಳ್ತಿಲ, ಗೋಳ್ತಮಜಲು, ವೀರಕಂಭ, ಬೋಳಂತೂರು, ಡಿ.10ರಂ<ದು ಚೆನ್ನೈತೋಡಿ ಗ್ರಾಪಂನಲ್ಲಿ ಇರ್ವತ್ತೂರು, ಪಿಲಾತಬೆಟ್ಟು, ಚೆನ್ನೈತೋಡಿ, ಕುಕ್ಕಿಪ್ಪಾಡಿ, ಸಂಗಬೆಟ್ಟು, ರಾಯಿ, ಪಂಜಿಕಲ್ಲು, ಅರಳ ಗ್ರಾಪಂಗಳಿಗೆ ಸಂಬಂಧಿಸಿ ಶಿಬಿರ ನಡೆಯಲಿದೆ. ಸಜಿಪಮುನ್ನೂರು ಗ್ರಾಪಂನಲ್ಲಿ ಡಿ.17ರಂದು ನರಿಕೊಂಬು, ಸಜಿಪಮೂಡ, ಸಜಿಪಮುನ್ನೂರು, ಡಿ.21ರಂದು ಇಡ್ಕಿದು, ವಿಟ್ಲಪಡ್ನೂರು, ವಿಟ್ಲಮುಡ್ನೂರು ಗ್ರಾಪಂ ವ್ಯಾಪ್ತಿಯಲ್ಲಿ ವಿಟ್ಲಪಡ್ನೂರು ಗ್ರಾಪಂನಲ್ಲಿ ಶಿಬಿರ ನಡೆಯಲಿರುವುದು. ಡಿ.27ರಂದು ಕರಿಯಂಗಳ ಗ್ರಾಪಂನಲ್ಲಿ ಅಮ್ಟಾಡಿ, ಅಮ್ಮುಂಜೆ, ಕರಿಯಂಗಳ, ಬಡಗಬೆಳ್ಳೂರು, ಕಳ್ಳಿಗೆ, ತುಂಬೆ, ಪುದು, ಮೇರಮಜಲುಗಳ ವ್ಯಾಪ್ತಿಗೆ ಒಳಪಟ್ಟು ಹಾಗೂ ಡಿ.31ರಂದು ಸಾಲೆತ್ತೂರು ಗ್ರಾಪಂನಲ್ಲಿ ಸಾಲೆತ್ತೂರು, ಮಂಚಿ ಹಾಗೂ ಕೊಳ್ನಾಡುಗಳ ವ್ಯಾಪ್ತಿಯ ಸಂಪರ್ಕ ಸಭೆ ನಡೆಯುವುದು. ಇಲ್ಲಿ ಅಧಿಕಾರಿಗಳು ಆಗಮಿಸಿ ಸಮಸ್ಯೆಗೆ ಪರಿಹಾರ ಕಲ್ಪಿಸುವರು ಎಂದರು
ಈ ಸಂದರ್ಭ ಸಮಿತಿ ಸದಸ್ಯರಾದ ಸತೀಶ್ ಕುಮಾರ್, ಚಂದ್ರಶೇಖರ ಆಚಾರ್ಯ, ಸಿರಾಜ್ ಮಹಮ್ಮದ್, ಐಡಾ ಸುರೇಶ್, ಕೃಷ್ಣಪ್ಪ ಪೂಜಾರಿ ನರಿಕೊಂಬು ಉಪಸ್ಥಿತರಿದ್ದರು.
Be the first to comment on "ಪಂಚಗ್ಯಾರಂಟಿ ಅನುಷ್ಠಾನ ಸಕ್ರಿಯಗೊಳಿಸಲು ತಾಲೂಕಿನಾದ್ಯಂತ ಶಿಬಿರ: ಜಯಂತಿ ವಿ. ಪೂಜಾರಿ"