ಜಿಲ್ಲಾ ಸುದ್ದಿ

ದತ್ತಿ ಪ್ರಶಸ್ತಿ, ಸಾಹಿತ್ಯ ಬಹುಮಾನ: ಲೇಖಕಿಯರಿಂದ ಕೃತಿಗಳ ಆಹ್ವಾನ


ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘ(ರಿ.)
(ಅವಿಭಜಿತ ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆ)
ಆಯೋಜಿಸುವ 2024-25ರ ಸಾಲಿನ ದತ್ತಿ ಪ್ರಶಸ್ತಿ ಮತ್ತು ಸಾಹಿತ್ಯ ಬಹುಮಾನಕ್ಕೆ ಲೇಖಕಿಯರಿಂದ ಕೃತಿಗಳನ್ನು ಆಹ್ವಾನಿಸಲಾಗಿದೆ.

ಡಾ. ಸಾರಾ ಅಬೂಬಕ್ಕರ್ ದತ್ತಿ ಪ್ರಶಸ್ತಿ :‌

ಜಾಹೀರಾತು

ಸಂಘದ ಸದಸ್ಯೆಯಾಗಿದ್ದ ವೈಚಾರಿಕ ಮನೋಧರ್ಮದ ಸಂವೇದನಾಶೀಲ ಲೇಖಕಿ ನಾಡೋಜ ಡಾ.ಸಾರಾ ಅಬೂಬಕ್ಕರ್ ಅವರ ಹೆಸರಿನಲ್ಲಿ ಪ್ರತಿ ವರ್ಷ ಕೊಡುವ ಸಾಹಿತ್ಯ ಪ್ರಶಸ್ತಿಗೆ ಈ ಬಾರಿ ‘ಲೇಖಕಿಯರಿಂದ ಅನುವಾದಿತ ಕಾದಂಬರಿ’ಗಳನ್ನು ಆಹ್ವಾನಿಸಲಾಗಿದೆ. 2022,2023,2024ರ ಸಾಲಿನಲ್ಲಿ ಪ್ರಕಟವಾದ ಯಾವುದೇ ಭಾಷೆಯಿಂದ ಕನ್ನಡಕ್ಕೆ ಲೇಖಕಿಯರು ಅನುವಾದಿಸಿ ಪ್ರಕಟಿಸಿದ ಕಾದಂಬರಿಯ ಮೂರು ಪ್ರತಿಗಳನ್ನು ಡಿಸೆಂಬರ್ 15ರ ಒಳಗೆ ತಲುಪುವಂತೆ ಸಂಘದ ವಿಳಾಸಕ್ಕೆ ಅಂಚೆ ಮೂಲಕ ಕಳುಹಿಸಬೇಕು. ಪುಸ್ತಕದ ಜೊತೆಗೆ ವೈಯಕ್ತಿಕ ಮಾಹಿತಿ ಮತ್ತು ಸಂಪರ್ಕ ಸಂಖ್ಯೆಯಿರುವ ಪ್ರವೇಶ ಪತ್ರವನ್ನು ಲಗತ್ತಿಸಿರಬೇಕು.
ಹೆಚ್ಚಿನ ಮಾಹಿತಿಗಾಗಿ 9742538833 ಈ ಸಂಖ್ಯೆಯನ್ನು ಸಂಪರ್ಕಿಸಬಹುದು.

ಚಂದ್ರಭಾಗಿ ರೈ ದತ್ತಿ ಬಹುಮಾನ:

ಕರಾವಳಿಯ ಮೊದಲ ತಲೆಮಾರಿನ ಹಿರಿಯ ಲೇಖಕಿ, ಸಂಘದ ಸದಸ್ಯೆಯೂ ಆಗಿದ್ದ ಚಂದ್ರಭಾಗಿ ರೈ ಅವರ ಹೆಸರಿನಲ್ಲಿ ಕೊಡುವ ಬಹುಮಾನಕ್ಕೆ ಈ ಬಾರಿ ‘ವೈಚಾರಿಕ ಲೇಖನ’ಗಳ ಸಂಕಲನದ ಹಸ್ತಪ್ರತಿಯನ್ನು ಆಹ್ವಾನಿಸಲಾಗಿದೆ. ಕನಿಷ್ಠ 30 ಲೇಖನಗಳಿರುವ ಅಪ್ರಕಟಿತ ಸಂಕಲನದ ಡಿಟಿಪಿ ಮಾಡಿದ ಮೂರು ಹಸ್ತಪ್ರತಿಯನ್ನು ಡಿಸೆಂಬರ್ 15ರ ಒಳಗೆ ತಲುಪುವಂತೆ ಸಂಘದ ವಿಳಾಸಕ್ಕೆ ಕಳುಹಿಸಬೇಕು. ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟವಾಗಿರಬಹುದು. ಬಹುಮಾನಕ್ಕೆ ಆಯ್ಕೆಯಾದ ಕೃತಿಯನ್ನು ಪ್ರಕಟಿಸುವಾಗ ‘ಚಂದ್ರಭಾಗಿ ರೈ ದತ್ತಿ ಬಹುಮಾನ ಪುರಸ್ಕೃತ’ ಎಂದು ಕಡ್ಡಾಯವಾಗಿ ಮುದ್ರಿಸಬೇಕು. ಸ್ಪರ್ಧಿಯ ಹೆ‌ಸರು ವಿಳಾಸ ಮತ್ತು ಸಂಪರ್ಕ ಸಂಖ್ಯೆ ಪ್ರತ್ಯೇಕ ಹಾಳೆಯಲ್ಲಿ ಲಗತ್ತಿಸಿರಬೇಕು.
ಹೆಚ್ಚಿನ ಮಾಹಿತಿಗೆ 94813 92231 ಈ ಸಂಖ್ಯೆಯನ್ನು ಸಂಪರ್ಕಿಸಬಹುದು. ಪುಸ್ತಕ ಮತ್ತು ಹಸ್ತಪ್ರತಿಯನ್ನು ಕಳುಹಿಸಬೇಕಾದ ವಿಳಾಸ :
ಶಕುಂತಳಾ ಶೆಟ್ಟಿ ,
ಅಧ್ಯಕ್ಷರು
ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘ
‘ಸಾಹಿತ್ಯ ಸದನ’
ಅಂಚೆ ಕಚೇರಿ ಬಳಿ, ಉರ್ವ ಸ್ಟೋರ್
ಮಂಗಳೂರು -575006 ಎಂದು ಪ್ರಕಟಣೆ ತಿಳಿಸಿದೆ.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.