ಸೌತ್ ಕೆನರಾ ಫೋಟೋ ಗ್ರಾಫರ್ಸ್ ಅಸೋಸಿಯೇಷನ್ ಬಂಟ್ವಾಳ ವಲಯದ ವತಿಯಿಂದ ಜಿಲ್ಲಾ ಮಟ್ಟದ ಎ ಐ ಕಾರ್ಯಾಗಾರ ಬಿ.ಸಿ. ರೋಡ್ ರೋಟರಿ ಕ್ಲಬ್ ನಲ್ಲಿ ನಡೆಯಿತು.
ವಲಯಾಧ್ಯಕ್ಷರಾದ ರಾಜೇಂದ್ರ ಕೆ ಅಧ್ಯಕ್ಷತೆಯಲ್ಲಿ ಎಸ್ ಕೆ ಪಿ ಎ ಜಿಲ್ಲಾಧ್ಯಕ್ಷ ರಾದ ನವೀನ್ ರೈ ಪಂಜಲ ಕಾರ್ಯಕ್ರಮ ಉದ್ಘಾಟಿಸಿದರು.
ವೇದಿಕೆಯಲ್ಲಿ ಜಿಲ್ಲಾ ಪ್ರದಾನ ಕಾರ್ಯದರ್ಶಿ ಅಜಯ್ ಮಂಗಳೂರು, ಜಿಲ್ಲಾ ಕಟ್ಟಡ ಸಮಿತಿ ಅಧ್ಯಕ್ಷ ರಾದ ಆನಂದ್ ಯಾನ್. ಜಿಲ್ಲಾ ಕ್ರೀಡಾ ಕಾರ್ಯದರ್ಶಿ ಹರೀಶ್ ಕುಂದರ್, ಸಂಪನ್ಮೂಲ ವ್ಯಕ್ತಿ ಸಂದೀಪ್ ಶ್ಯಾಡೊ, ವಲಯದ ಕಾರ್ಯದರ್ಶಿ ರವಿ ಕಲ್ಪನೆ, ಗೌರವಾಧ್ಯಕ್ಷರಾದ ಕಿಶೋರ್, ಕೋಶಾಧಿಕಾರಿ ಕೃಷ್ಣ ರಾಜ್ ರಾವ್, ಛಾಯಾ ಕಾರ್ಯದರ್ಶಿ ಪ್ರಶಾಂತ್ ಉಪಸ್ಥಿತರಿದ್ದರು. ಕಾರ್ಯದರ್ಶಿ ರವಿ ಕಲ್ಪನೆ ಸ್ವಾಗತಿಸಿ, ಕೋಶಾಧಿಕಾರಿ ಕೃಷ್ಣ ರಾಜ್ ರಾವ್ ವಂದಿಸಿದರು. ದಯಾನಂದ್ ಬಂಟ್ವಾಳ್ ಕಾರ್ಯಕ್ರಮ ನಿರೂಪಿಸಿದರು. ನಂತರ ಸಂಪನ್ಮೂಲ ವ್ಯಕ್ತಿ ಸಂದೀಪ್ ಶ್ಯಾಡೋ ಸದಸ್ಯರಿಗೆ ಎ ಐ ಕಾರ್ಯಾಗಾರ ನಡೆಸಿ ಕೊಟ್ಟರು