ಬಂಟ್ವಾಳ

ಬಾಳ್ತಿಲ ಬ್ರಹ್ಮಶ್ರೀ ನಾರಾಯಣ ಗುರುಮಂದಿರದಲ್ಲಿ ದೃಢಸಂಪ್ರೋಕ್ಷಣಾ ಪೂಜೆ

ಬಂಟ್ವಾಳ: ಬಾಳ್ತಿಲ ಬ್ರಹ್ಮಶ್ರೀ ನಾರಾಯಣಗುರು ಮಂದಿರದಲ್ಲಿ ಶುಕ್ರವಾರ ದೃಢಸಂಪ್ರೋಕ್ಷಣಾ ಪೂಜೆ ಕೇಶವ ಶಾಂತಿ ಮೂಲಕ ನೆರವೇರಿಸಲಾಯಿತು. ಮಹಾಪೂಜೆಯ ನಂತರ ಅವಲೋಕನ ಸಭೆ ನಡೆಯಿತು.

ಬ್ರಹ್ಮಶ್ರೀ ನಾರಾಯಣ ಗುರುಗಳ ಮಂದಿರಕ್ಕಾಗಿ ಸ್ವಯಂಸೇವಕರಾಗಿ ಹಗಲಿರುಳು ಸೇವೆಗೈದ ಜೀರ್ಣೋದ್ಧಾರ ಸಮಿತಿಯ ಎಲ್ಲ ಹಿರಿಯ ಕಿರಿಯ ಕಾರ್ಯಕರ್ತ ಬಂಧುಗಳಿಗೆ, ಭಾಗವಹಿಸಿದ ಸಂಘ ಸಂಸ್ಥೆಗಳಿಗೆ, ಮಂದಿರ ರಚನೆಗೊಳ್ಳಲು ಸಹಕರಿಸಿದ ಊರ ಪರವೂರ ದಾನಿಗಳನ್ನು ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಟ್ರಸ್ಟ್ ವತಿಯಿಂದ ಗೌರವಿಸಲಾಯಿತು.

VNR GOLD

ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ, ಮಾಜಿ ಶಾಸಕ ಎ. ರುಕ್ಮಯ ಪೂಜಾರಿ,  ಆರ್. ಚೆನ್ನಪ್ಪ ಕೋಟ್ಯಾನ್, ನಾರಾಯಣ ಪೂಜಾರಿ ನಿಡ್ಯೆ, ಕಾರ್ಯದರ್ಶಿ ಮೋಹನ್ ಪಿ ಎಸ್, ‌ಟ್ರಸ್ಟಿಗಳಾದ ಶರತ್ ಕುಮಾರ್, ಜಯರಾಮ ಕಲ್ಲಪಾಪು, ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷ ಶಿವರಾಜ್ ಕಾಂದಿಲ, ಸುಭಾಷ್ ದಾಸಕೋಡಿ, ಕ್ರಷ್ಣಪ್ಪ ಜಿ. ಸಾಲಿಯಾನ್, ಮೀನಾಕ್ಷಿ ಆರ್ ಪೂಜಾರಿ, ಯಶೋಧಾ ನಿಡ್ಯೆ, ಮಲ್ಲಿಕಾ ಸೇನೆರೆಕೋಡಿ, ಕುಮಾರ ಕಾಂದಿಲ, ಅಶೋಕ್ ಕುಮಾರ್, ತಾರಾನಾಥ ಗಣೇಶ್ನಗರ, ರಮೇಶ್ ಅನಂತಾಡಿ ಹಾಗೂ ಊರ ಪರವೂರಿನ ನಾರಾಯಣಗುರು ಭಕ್ತರು ಭಾಗವಹಿಸಿದ್ದರು.

ಜಾಹೀರಾತು
ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.