ಬಂಟ್ವಾಳ: ಮರಹೂಮ್ ಅಬ್ದುಲ್ ರಹಿಮಾನ್ ಕೋಲತ ಮಹಲ್ ಹಾಗೂ ಅಮೀರ್ ಅರ್ಶದಿ ಸಜಿಪ ಸ್ಮರಣಾರ್ಥವಾಗಿ ಎಸ್‌ಕೆಎಸ್‌ಎಸ್‌ಎಫ್ ಅಲಾಡಿ ಘಟಕ ಮತ್ತು ಎಸ್‌ಕೆಎಸ್‌ಎಸ್‌ಎಫ್ ವಿಖಾಯ ಬ್ಲಡ್ ಡೋನರ್ಸ್ ದಕ್ಷಿಣ ಕನ್ನಡ ಸಂಯುಕ್ತ ಆಶ್ರಯದಲ್ಲಿ ಅಲಾಡಿಯ ನೂರುಲ್ ಹುದಾ ಮದ್ರಸದಲ್ಲಿ ರಕ್ತದಾನ ಶಿಬಿರ ನಡೆಯಿತು. ಒಟ್ಟು 79 ಯೂನಿಟ್ ರಕ್ತ ಸಂಗ್ರಹವಾಯಿತು. ಈ ರಕ್ತವು ಅಗತ್ಯವಿರುವ ರೋಗಿಗಳ ಚಿಕಿತ್ಸೆಗೆ ನೆರವಾಗಲಿದೆ.
ಬದ್ರಿಯಾ ಜುಮಾ ಮಸೀದಿ, ಅಲಾಡಿಯ ಖತೀಬ್ ಉಸ್ತಾದ್ ಅಬ್ದುಲ್ ರಝಾಕ್ ಫೈಝಿ ಉದ್ಘಾಟಿಸಿದರು. ಎಸ್‌ಕೆಎಸ್‌ಎಸ್‌ಎಫ್ ಅಲಾಡಿ ಘಟಕದ ಕಾರ್ಯದರ್ಶಿ ಮುಹಮ್ಮದ್ ಶಾಕಿರ್ ಸ್ವಾಗತಿಸಿ, ರಕ್ತದಾನದ ಮಹತ್ವ ಹಾಗೂ ಮಾನವೀಯ ಸೇವೆಯ ಅಗತ್ಯವನ್ನು ವಿವರಿಸಿದರು.
ವೆನ್ಲಾಕ್ ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ಘಟಕದ ಉಸ್ತುವಾರಿ ಅಧಿಕಾರಿ ಆಂಟನಿ ಹಾಗೂ ವೈದ್ಯೆ ಡಾ. ವಿದ್ಯಾ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.ಎಸ್‌ಕೆಎಸ್‌ಎಸ್‌ಎಫ್ ಅಲಾಡಿ ಘಟಕದ ಕಾರ್ಯದರ್ಶಿ ಸಫೀರ್ ಆಲಂಪಾಡಿ ಕಾರ್ಯಕ್ರಮ ನಿರೂಪಿಸಿದರು.