ಮಂಗಳೂರು ಕಡೆಯಿಂದ ಬರುವ ಬಸ್ಸುಗಳು ಬಿ.ಸಿ.ರೋಡಿನ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಎದುರು ಪಾರ್ಶ್ವದಲ್ಲಿ ನಿಲುಗಡೆ ಮಾಡಬೇಕು ಎಂದು ಬಿ.ಸಿ.ರೋಡಿನ ನಿಯೋಗವೊಂದು ಒತ್ತಾಯಿಸಿದೆ.
ಸಂಚಯಗಿರಿ, ಮೈಕ್ರೋಸ್ಟೇಶನ್, ಅಜ್ಜಿಬೆಟ್ಟು, ಕುಲಾಲಮಠ, ದೈಪಲ, ಕೋಡಿಮಠ, ಕಾಮಾಜೆ, ಮೈರಾನ್ ಪಾದೆ, ಕಲಾಯಿ, ಅಗ್ರಬೈಲು, ಮಿತ್ತಬೈಲು, ಚೆಂಡಾಡಿ, ಏರಿಮಾರು ಮತ್ತಿತರ ಕಡೆಗಳಿಂದ ಮಹಿಳೆಯರು, ವಿದ್ಯಾರ್ಥಿಗಳು, ವಯಸ್ಕರು ಸೇರಿದಂತೆ ಪ್ರತಿನಿತ್ಯ ನೂರಾರು ಮಂದಿ ಮಂಗಳೂರಿಗೆ ಸಂಚರಿಸುತ್ತಾರೆ. ಮಂಗಳೂರಿನಿಂದ ಬಿ.ಸಿ.ರೋಡ್ ಕಡೆ ಬನರುವ , ಬಸ್ಸುಗಳು ಇಲ್ಲಿ ನಿಲ್ಲಿಸದೇ ಇರುವುದರಿಂದ ಕೈಕಂಬ ಅತವಾ ಪುರಸಭಾ ಖಾಸಗಿ ಬಸ್ ನಿಲ್ದಾಣದಲ್ಲಿ ಇಳಿದು, ನಡೆದುಕೊಂಡು ಅಥವಾ ಬೇರೆ ವಾಹನಗಳನ್ನು ಅವಲಂಬಿಸಿ ಬರಬೇಕು ಎಂದು ಮನವಿಯಲ್ಲಿ ವಿವರಿಸಲಾಗಿದೆ. ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ಮಂಗಳೂರಿಗೆ ತೆರಳುವ ಬಸ್ಸುಗಳು ನಿಲ್ಲುತ್ತವೆ. ಆದರೆ ಮಂಗಳೂರಿನಿಂದ ಬರುವ ಬಸ್ಸುಗಳು ಬಿ.ಸಿ.ರೋಡಿನ ಕೈಕಂಬ ಸ್ಟಾಪ್ ಬಳಿಕ ಬಿ.ಸಿ.ರೋಡ್ ಖಾಸಗಿ ಬಸ್ ನಿಲ್ದಾಣದಲ್ಲಿ ನಿಲ್ಲುತ್ತವೆ. ಇದರ ಮಧ್ಯೆ ಇರುವ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಎದುರು ರಸ್ತೆ ಬದಿಯಲ್ಲಿ ನಿಲ್ಲಿಸಿದರೆ ಸುತ್ತಲಿನ ಹಲವು ಪ್ರದೇಶಗಳಿಗೆ ಅನುಕೂಲಕರವಾಗುತ್ತದೆ ಎಂದು ನಿಯೋಗವೊಂದು ನಿಯೋಗವೊಂದು ಮಾಜಿ ಸಚಿವ ಬಿ.ರಮಾನಾಥ ರೈ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿತು. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಜಿಲ್ಲಾಧಿಕಾರಿಗಳು, ಜಿಲ್ಲಾ ಸಾರಿಗೆ ಆಯುಕ್ತರು ಹಾಗೂ ಕೆ.ಎಸ್.ಆರ್.ಟಿ.ಸಿ.ಯ ಮಂಗಳೂರು ಮತ್ತು ಪುತ್ತೂರು ಉಪವಿಭಾಗಾಧಿಕಾರಿಗಳಿಗೆ ಮನವಿಯನ್ನು ನೀಡಲಾಗಿದೆ.
ನಿಯೋಗದಲ್ಲಿ ಬಂಟ್ವಾಳ ಫೊಟೋಗ್ರಾಫರ್ ಎಸೋಸಿಯೇಶನ್ ಮಾಜಿ ಅಧ್ಯಕ್ಷ ದಿನೇಶ್ ಕುಲಾಲ್ ಕಾಮಾಜೆ, ಯುವವಾಹಿನಿ ಬಂಟ್ವಾಳ ಮಾಜಿ ಅಧ್ಯಕ್ಷ ಬಿ.ಶ್ರೀಧರ ಅಮೀನ್ ಅಗ್ರಬೈಲು, ಹರೀಶ್ ಅಂಚನ್ ಪೊನ್ನೋಡಿ, ಪೂವಪ್ಪ ಗಟ್ಟಿ ಮೈಕ್ರೊ, ಗಿರೀಶ್ ರಾವ್ ಮೈಕ್ರೊ, ರಾಜಿವ ಪೂಜಾರಿ ಅಗ್ರಬೈಲು ಮತ್ತಿತರರು ಉಪಸ್ಥಿತರಿದ್ದರು.
Be the first to comment on "ಬಿ.ಸಿ.ರೋಡ್: ಕೆ.ಎಸ್.ಆರ್.ಟಿ.ಸಿ. ಬಸ್ ನಿಲುಗಡೆಗೆ ಒತ್ತಾಯಿಸಿ ಮನವಿ ಸಲ್ಲಿಕೆ"