ಬಂಟ್ವಾಳ : ಮಾಣಿ ಪೆರಾಜೆಯ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ ಆಯೋಜನೆಯಲ್ಲಿ ಬಂಟ್ವಾಳ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು.
ಬಂಟ್ವಾಳ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಸಚಿನ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ ಬಂಟ್ವಾಳ , ಕಲ್ಲಡ್ಕ ವಲಯ ಕ್ರೀಡಾಕೂಟ ಸಮಿತಿ ಹಾಗೂ ಬಾಲವಿಕಾಸ ಆಂಗ್ಲ ಮಾದ್ಯಮ ಶಾಲೆ ಮಾಣಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಮಾಣಿ ಪೆರಾಜೆಯ ವಿದ್ಯಾನಗರದ ಬಾಲವಿಕಾಸ ಮೈದಾನದಲ್ಲಿ ಸೋಮವಾರ 14 ರಿಂದ 17 ವಯೋಮಿತಿಯೊಳಗಿನ ಬಾಲಕ -ಬಾಲಕಿಯರ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮಕ್ಕಳ ಎರಡು ದಿನಗಳ “ಬಂಟ್ವಾಳ ತಾಲೂಕು ಮಟ್ಟದ ಕ್ರೀಡಾಕೂಟ 2024-25” ನಡೆಯಿತು.
ಬಾಲವಿಕಾಸ ಟ್ರಸ್ಟ್ ನ ಅಧ್ಯಕ್ಷರು, ಶಾಲಾ ಸಂಚಾಲಕರಾದ ಪ್ರಹ್ಲಾದ ಶೆಟ್ಟಿ ಜೆ ದೀಪ ಪ್ರಜ್ವಲಿಸಿ ಕ್ರೀಡಾಕೂಟ ಉದ್ಘಾಟಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್ ಎಮ್. ಜಿ. ಪಥ ಸಂಚಲನಕ್ಕೆ ಚಾಲನೆ ನೀಡಿದರು. ನಿವೃತ್ತ ಜಿಲ್ಲಾ ದೈಹಿಕ ಶಿಕ್ಷಣ ಅಧೀಕ್ಷಕ ಗೋಪಾಲ್ ಎಚ್. ಎ. ಕ್ರೀಡಾ ಕೂಟದ ಪದಕಗಳ ಅನಾವರಣ ಮಾಡಿದರು. ವೇದಿಕೆಯಲ್ಲಿ ಮುಂಬೈ ಉದ್ಯಮಿ ಮುಂಡಪ್ಪ ಎಸ್ ಪೈಯ್ಯಡೆ, ಸರಕಾರಿ ನೌಕರ ಸಂಘದ ಅಧ್ಯಕ್ಷ ಉಮಾನಾಥ ರೈ, ಶಿಕ್ಷಕ ಸಂಘಟನೆಗಳ ಪ್ರಮುಖರಾದ ಜಯರಾಮ, ರಾಜೇಂದ್ರ ರೈ, ಹರಿಪ್ರಸಾದ್, ಇಂದುಶೇಖರ್, ಚೆನ್ನಕೇಶವ, ಗುರುರಾಜ್ ಎನ್, ಸಿ.ಆರ್.ಪಿ. ಸತೀಶ್ ರಾವ್, ಪ್ರಮುಖರಾದ ಕಿರಣ್ ಕುಮಾರ್, ವಿದ್ಯಾಕುಮಾರಿ, ಜಗದೀಶ್ ರೈ, ಬಾಲವಿಕಾಸದ ಟ್ರಸ್ಟಿನ ಸದಸ್ಯೆ ಸುಭಾಷಿಣಿ ಎ ಶೆಟ್ಟಿ ಹಾಗೂ ಬಾಲವಿಕಾಸ ಶಾಲೆಯ ಮುಖ್ಯ ಶಿಕ್ಷಕಿ ಸುಪ್ರಿಯಾ ಡಿ ,ಸಂಸ್ಥೆಯ ಕಾರ್ಯದರ್ಶಿ ಮಹೇಶ್ ಜೆ ಶೆಟ್ಟಿ, ಪಾಲ್ಗೊಂಡಿದ್ದರು. ದೈಹಿಕ ಶಿಕ್ಷಣ ಪರಿವೀಕ್ಷಕ ಶಿವಪ್ರಸಾದ್ ರೈ ಪ್ರಾಸ್ತಾವಿಕವಾಗಿ ಮಾತನಾಡಿದರು .ಕಲ್ಲಡ್ಕ ವಲಯ ಕ್ರೀಡಾಸಮಿತಿ ಅಧ್ಯಕ್ಷ ಕಮಲಾಕ್ಷ ಸ್ವಾಗತಿಸಿದರು. ಯಜ್ಞೇಶ್ವರಿ ಎನ್., ಸುಧಾ ಎನ್ .ರಾವ್ ನಿರೂಪಿಸಿದರು. ಜಗದೀಶ್ ಬಾಳ್ತಿಲ ವಂದಿಸಿದರು.
Be the first to comment on "ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬಂಟ್ವಾಳ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ"