ಬಂಟ್ವಾಳ: ಬಂಟ್ವಾಳ ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃಧ್ಧಿ ಬ್ಯಾಂಕ್ ನಿ. ಬಿ.ಸಿ.ರೋಡ್ ಶಾಖೆ, ಬಂಟ್ವಾಳ ತಾಲೂಕು ಹಾಗೂ ಆಧಾರ್ ಸೇವಾ ಕೇಂದ್ರ ಮಂಗಳೂರು ವತಿಯಿಂದ ದಿನಾಂಕ ಅಕ್ಟೋಬರ್ 4ರಿಂದ 14ರತನಕ 10 ದಿನಗಳ ಆಧಾರ್ ಶಿಬಿರ ಬಿ.ಸಿ. ರೋಡ್ ಪದ್ಮಾ ಕಾಂಪ್ಲೆಕ್ಸ್ ಮುಂಭಾಗದಲ್ಲಿರುವ ಪಿಸಿಎಆರ್ ಡಿ (ಎಲ್.ಡಿ) ಬ್ಯಾಂಕ್ ಕಟ್ಟಡದಲ್ಲಿ ನಡೆಯಲಿದೆ. ಈ ಶಿಬಿರದಲ್ಲಿ ಹೊಸ ಆಧಾರ್ ಕಾರ್ಡ್, ಹೆಸರು, ಜನ್ಮ ದಿನಾಂಕ, ಲಿಂಗ, ಮೊಬೈಲ್ ನಂಬರ್, ಇಮೇಲ್ ಐಡಿ, ವಿಳಾಸ ತಿದ್ದುಪಡಿ, ಪೊಟೊ ಅಪ್ಡೇಟ್, ಮಕ್ಕಳ 5 ವರ್ಷದ ಮತ್ತು 15 ವರ್ಷದ ಅಪ್ಡೇಟ್, ಪ್ರತಿ 10 ವರ್ಷಕ್ಕೊಮ್ಮೆ ಮಾಡಿಕೊಳ್ಳುವ ಅಪ್ಡೇಟ್‌ಗಳನ್ನು ಮಾಡಿಕೊಡಲಾಗುವುದು.
ಮಕ್ಕಳ ಆಧಾರ್ ಮಾಡಿಸಿದರೆ ಮಗುವಿಗೆ 5 ವರ್ಷ ತುಂಬಿದ ನಂತರ ಆಧಾರ್ ಅಪ್ಡೇಟ್ ಮಾಡಿಸಿಕೊಳ್ಳಬೇಕು. ನಂತರ ಮಗುವಿಗೆ 15 ವರ್ಷ ತುಂಬಿದ ಕೂಡಲೇ ಬಯೋಮೆಟ್ರಿಕ್ ಅಪ್ಡೇಟ್ ಮಾಡಿಸಿಕೊಳ್ಳಬೇಕು. 15 ವರ್ಷದ ಅಪ್ಡೇಟ್ ನಂತರ ಪ್ರತಿಯೊಬ್ಬರೂ 10 ವರ್ಷಕ್ಕೊಮ್ಮೆ ಆಧಾರ್ ಬಯೋಮೆಟ್ರಿಕ್/ಪೋಟೊ ಅಪ್ಡೇಟ್ ಮಾಡಿಸಿಕೊಳ್ಳಬೇಕು. ಸರಿಯಾದ ಸಮಯಕ್ಕೆ ಆಧಾರ್ ಅಪ್ಡೇಟ್ ಮಾಡಿಕೊಳ್ಳದಿದ್ದರೆ ಸರಕಾರಿ ಸವಲತ್ತು ಪಡೆಯಲು, ಆಸ್ತಿ ನೋಂದಣಿ ಮಾಡಿಸಲು, ಬ್ಯಾಂಕ್ ವ್ಯವಹಾರ ನಡೆಸಲು ಮತ್ತು ನಮ್ಮ ವೈಯಕ್ತಿದ ದಾಖಲೆಗಳನ್ನು ಮಾಡಿಸಲು ತೊಂದರೆ ಆಗಬಾರದು ಎಂಬ ಉದ್ದೇಶದಿಂದ ನಮ್ಮ ಬ್ಯಾಂಕ್ ನಲ್ಲಿ ಈ ಶಿಬಿರ ಆಯೋಜಿಸಲಾಗಿದೆ. ಆಧಾರ್ ಅಪ್ಡೇಟ್ ಮಾಡಿಕೊಳ್ಳದೇ ಇದ್ದಲ್ಲಿ ಆಧಾರ್ ನಿಷ್ಕ್ರೀಯ/ರದ್ದು (Suspend/Cancel) ಗೊಳ್ಳುವ ಸಾಧ್ಯತೆಗಳೂ ಇರುತ್ತದೆ.
ಆದ್ದರಿಂದ ಎಲ್ಲರೂ ತಮ್ಮ ಆಧಾರ್ ಸರಿಯಾದ ಸಮಯಕ್ಕೆ ಅಪ್ಡೇಟ್ ಮಾಡಿಸಿಕೊಳ್ಳಿ. ಸಾರ್ವಜನಿಕರು ಈ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕಾಗಿ ಬಂಟ್ವಾಳ ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃಧ್ಧಿ ಬ್ಯಾಂಕ್ ನಿ. ಬಂಟ್ವಾಳ ಅಧ್ಯಕ್ಷರಾದ ಅರುಣ್ ರೋಶನ್ ಡಿಸೋಜ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Be the first to comment on "ಬಿ.ಸಿ.ರೋಡ್: ಪಿಸಿಎಆರ್ ಡಿ ಬ್ಯಾಂಕ್ ನಲ್ಲಿ 10 ದಿನಗಳ ಆಧಾರ್ ಶಿಬಿರ"