ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಕೇಂದ್ರೀಯ ಸಮಿತಿ (ಎ.ಐ.ಸಿ.ಸಿ.ಟಿ.ಯು) ದಕ್ಷಿಣ ಕನ್ನಡ ಜಿಲ್ಲಾ ಸಮ್ಮೇಳನ ಬಿ.ಸಿ.ರೋಡ್ ನಲ್ಲಿ ನಡೆಯಿತು
ಮುಖ್ಯ ಅತಿಥಿಯಾಗಿ ಎ.ಐ.ಸಿ.ಸಿ.ಟಿ.ಯು ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ಪಿ.ಅಪ್ಪಣ್ಣ ಮಾತನಾಡಿ ಕಾರ್ಮಿಕರ ಮೇಲೆ ಇಂದು ನಿರಂತರ ವಾಗಿ ದಾಳಿಗಳು ನಡೆಯುತ್ತಿದ್ದು ಕಾರ್ಮಿಕರು ಹೋರಾಟದ ಮೂಲಕ ಗಳಿಸಿದ ಹಕ್ಕುಗಳನ್ನು ಕಸಿದು ಕೊಂಡು ಕಾರ್ಮಿಕರನ್ನು ಗುಲಾಮರನ್ನಾಗಿಸಲಾಗುತ್ತಿದೆ ಎಂದರು. ಕರ್ನಾಟಕ ರಾಜ್ಯ ಸಮೇಳನವು ನವೆಂಬರ್ 24- 25 ರಂದು ಬಿ.ಸಿ.ರೋಡ್ ನಲ್ಲಿ ನಡೆಯಲಿದ್ದು ಈ ಸಮ್ಮೇಳನವನ್ನು ಕಾರ್ಮಿಕರು ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕರ್ನಾಟಕ ರಾಜ್ಯ ರೈತ ಸಂಘದ ದ.ಕ ಜಿಲ್ಲಾ ಅಧ್ಯಕ್ಷರಾದ ಓಸ್ವಾಲ್ಡ್ ಪ್ರಕಾಶ್ ಪೆರ್ನಾಂಡಿಸ್ ಮಾತನಾಡಿ ಸರಕಾರದ ಕಾರ್ಮಿಕ ವಿರೋಧಿ ನೀತಿಗಳ ವಿರುದ್ದ ಬಲಿಷ್ಟ ಹೋರಾಟ ನಡೆಸಬೇಕೆಂದು ಕರೆ ನೀಡಿದರು.
ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಮೋಹನ್ ಕೆ.ಇ ಸ್ವಾಗತಿಸಿ ಪ್ರಾಸ್ತವಿಕ ವಾಗಿ ಮಾತನಾಡಿದರು. ಸಂಘಟನೆಯ ಜಿಲ್ಲಾ ಅದ್ಯಕ್ಷರಾದ ರಾಮಣ್ಣ ವಿಟ್ಲ ಸಮೇಳನದ ಅದ್ಯಕ್ಷೀಯ ಭಾಷಣ ಮಾಡಿದರು. ಸಮ್ಮೇಳನವನ್ನುದ್ಧೇಶಿಸಿ ಎ.ಐ.ಸಿ.ಸಿ.ಟಿ.ಯು ಜಿಲ್ಲಾ ಮುಖಂಡರಾದ ಭರತ್ ಮಂಗಳೂರು, ಸತೀಶ್ ಕುಮಾರ್ ಮಂಗಳೂರು, ಮಹಾವೀರ್ ಜೈನ್ ಪುತ್ತೂರು, ಸಂಜೀವ ಬೆಳ್ತಂಗಡಿ,ಅಕ್ಷರ ದಾಸೋಹ ನೌಕರರ ಸಂಘಟನೆಯ ಮುಖಂಡರಾದ ಜಯಶ್ರೀ ಅರ್.ಕೆ ಮಾತನಾಡಿದರು. ಎ.ಐ.ಸಿ.ಸಿ.ಟಿ.ಯು ಮುಖಂಡರಾದ ಮಾರ್ಟಿನ್ ಕಕ್ಕಿಂಜೆ , ಮಧು ಕುಮಾರ್, ಅಟೋ ರಿಕ್ಷಾ ಚಾಲಕರ ಸಂಘಟನೆಯ ಮುಖಂಡರಾದ ಅಶ್ರಫ್ ಕೊಯಿಲ, ಅಖಿಲ ಭಾರತ ಪ್ರಗತಿಪರ ಮಹಿಳಾ ಸಂಘಟನೆಯ ಮುಖಂಡರಾದ ಕುಸುಮ ಬೆಳ್ತಂಗಡಿ ವೇದಿಕೆಯಲ್ಲಿದ್ದರು.
ಸಮ್ಮೇಳನದಲ್ಲಿ ನೂತನ ಸಮಿತಿ ಆಯ್ಕೆ ಮಾಡಲಾಯಿತು ಅಧ್ಯಕ್ಷರಾಗಿ ರಾಮಣ್ಣ ವಿಟ್ಲ ಹಾಗೂ ಕಾರ್ಯದರ್ಶಿ ಯಾಗಿ ಮೋಹನ್ ಕೆ.ಇ, ಪುನರಾಯ್ಕೆಯಾದರು. ಉಪಾಧ್ಯಕ್ಷ ರಾಗಿ ಜಯಶ್ರೀ.ಆರ್.ಕೆ, ವಾಣಿಶ್ರೀ , ಮಾರ್ಟಿನ್ ಕಕ್ಕಿಂಜೆ, ಸಂಜೀವ ಬೆಳ್ತಂಗಡಿ.
ಜೊತೆ ಕಾರ್ಯದರ್ಶಿ ಗಳಾಗಿ ಸತೀಶ್ ಕುಮಾರ್ ಮಂಗಳೂರು, ಭರತ್ ಮಂಗಳೂರು, ಸಜೇಶ್ ವಿಟ್ಲ, ಕುಸುಮ ಬೆಳ್ತಂಗಡಿ, ಕೋಶಾಧಿಕಾರಿ ಯಾಗಿ ಸರಸ್ವತಿ ಮಾಣಿ. ಸಮಿತಿ ಸದಸ್ಯರು ಗಳಾಗಿ ಅಶ್ರಫ್ ಕೊಯಿಲ, ಮಹಾವೀರ್ ಜೈನ್ ಪುತ್ತೂರು, ವಿನಯ ನಡುಮುಗೇರು, ಶಿವರಾಯ ಪ್ರಭು, ಮಧು ಕುಮಾರ್, ಅಚ್ಯುತ ಕಟ್ಟೆ, ಕುಂಞಪ್ಪ ಮೂಲ್ಯ, ಅಪ್ಪು ನಾಯ್ಕ, ಕೂಸಪ್ಪ ನಾಯ್ಕ , ಸುಲೈಮಾನ್ ಆಯ್ಕೆ ಯಾದರು
Be the first to comment on "ಬಿ.ಸಿ.ರೋಡ್ ನಲ್ಲಿ ಎಐಸಿಸಿಟಿಯು ದಕ್ಷಿಣ ಕನ್ನಡ ಜಿಲ್ಲಾ ಸಮ್ಮೇಳನ"