(ಸೆ.) ಸಂತ ಅಂತೋನಿಯವರ ದೇವಾಲಯ ಅಲ್ಲಿಪಾದೆ ಹಾಗೂ ಸ್ತ್ರೀ ಸಂಘಟನೆ ಅಲ್ಲಿಪಾದೆ ಘಟಕ ಮತ್ತು ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆ ಇದರ ನೇತೃತ್ವದಲ್ಲಿ ಸ್ತ್ರೀ ಆಯೋಗ, ಅರೋಗ್ಯ, ಯುವ ಆಯೋಗ ಇವರ ಸಹಕಾರದೊಂದಿಗೆ ಇತ್ತೀಚೆಗೆ ಅಲ್ಲಿಪಾದೆ ಸೌಹಾರ್ದ ಸಭಾ ಭವನದಲ್ಲಿ ನೆಡದ ಉಚಿತ ಕ್ಯಾನ್ಸರ್ ತಪಾಸಣೆ ಮತ್ತು ಮಾಹಿತಿ ಶಿಬಿರದ ಕಾರ್ಯಕ್ರಮವನ್ನು ನಿರ್ದೇಶಕರಾದ ವಂ. ಫಾ. ರೋಬರ್ಟ್ ಡಿ ಸೋಜ ರವರು ಉದ್ಘಾಟಿಸಿ ಮಾತನಾಡಿದರು, ಅಲ್ಲಿಪಾದೆ ಸ್ತ್ರೀ ಸಂಘದ ಅಧ್ಯಕ್ಷರಾದ ಶ್ರೀಮತಿ ಲವೀನಾ ಮೋರಸ್ ಸ್ವಾಗತಿಸಿ ಕುಮಾರಿ ವೆನೆಸ್ಸಾ ಮೊರಸ್ ಕಾರ್ಯಕ್ರಮವನ್ನು ನಿರೂಪಿಸಿ ಶ್ರೀ ರೆನ್ನಿ ಫೆರ್ನಾಂಡಿಸ್ ರವರು ಧನ್ಯವಾದ ನೀಡಿದರು. ಈ ಕಾರ್ಯಕ್ರಮದಲ್ಲಿ ಫಾದರ್ ಮುಲ್ಲರ್ ಆಸ್ಪತ್ರೆ ವೈದ್ಯರಾದ ಡಾ. ಜ್ಞಾನೇಶ್ವರಿ ಜಯರಾಮ್, ಡಾ. ಸೋನಿಯಾ ಕೆ.ಎಲ್ ಸಿಕ್ವೆರಾ, ಪ್ರಮುಖರಾದ ರಂಜನ್ ಎ.ವಿ,ಕ್ಲುನಿ ಕಾನ್ವೆಂಟ್ ನ ಸುಪೀರ್ಯರ್ ಸಿಸ್ಟೆರ್ ನಸಿಸ, ನವೀನ್ ಮೊರಸ್, ಕಿರಣ್ ನೊರೊನ್ಹಾ,ಜೋನ್ ವಾಲ್ಡರ್ ಮೊದಲಾದವರು ಉಪಸ್ಥಿತರಿದ್ದರು
Be the first to comment on "ಅಲ್ಲಿಪಾದೆಯಲ್ಲಿ ಕ್ಯಾನ್ಸರ್ ತಪಾಸಣೆ ಮತ್ತು ಮಾಹಿತಿ ಉಚಿತ ಶಿಬಿರ"