ರಬ್ಬರ್ ಮತ್ತು ಜೇನು ವ್ಯವಸಾಯಗಾರರ ವಿವಿಧೋದ್ದೇಶ ಸಹಕಾರಿ ಸಂಘವು ಪ್ರಸಕ್ತ ಸಾಲಿನಲ್ಲಿ ರೂ. 42,07,570 ಲಕ್ಷ ರೂ ಲಾಭ ಗಳಿಸಿದ್ದು ಸಂಘದ ಸದಸ್ಯರಿಗೆ ಶೇ. 11 ಡಿವಿಡೆಂಡ್ ನೀಡಲಾಗುವುದು ಎಂದು ಸಂಘದ ವಾರ್ಷಿಕ ಮಹಾಸಭೆಯಲ್ಲಿ ಘೋಷಿಸಲಾಯಿತು.
ಬಂಟ್ವಾಳದ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ 2023-24 ನೇ ಸಾಲಿನ ವಾರ್ಷಿಕ ಮಹಾಸಭೆಯ ಸಭಾಧ್ಯಕ್ಷತೆಯನ್ನು ಮೋಹನ್ ಪಿ ಎಸ್ ಬಾಳ್ತಿಲ, ವಹಿಸಿಕೊಂಡು ಸಂಘವು 4,308 ಸದಸ್ಯರನ್ನೊಳಗೊಂಡು 8 ಶಾಖೆಗಳೊಂದಿಗೆ ಕಾರ್‍ಯಾಚರಿಸುತ್ತಿದೆ ಎಂದು ಮಾಹಿತಿ ನೀಡಿದರು.
2023-24ನೇ ಸಾಲಿನಲ್ಲಿ ಇನ್ನೂ ಹೆಚ್ಚಿನ ಶಾಖೆಗಳನ್ನು ತೆರೆದು ವಿವಿಧ ಠೇವಣಿ ಯೋಜನೆಗಳ ಮೂಲಕ ಠೇವಣಿ ಸಂಗ್ರಹ ಗುರಿ ಹೊಂದಿದ್ದು 60 ಕೋಟಿಗೂ ಮಿಕ್ಕಿ ಸಾಲ ನೀಡುವ ಗುರಿಯನ್ನು ಹೊಂದಿದೆ ಎಂದು ತಿಳಿಸಿದರು. ವರದಿ ಸಾಲಿನಲ್ಲಿ 1.67 ಕೋಟಿ ರೂಪಾಯಿ ಪಾಲು ಬಂಡವಾಳ, ರೂ. 94 ಲಕ್ಷ ವಿವಿಧ ನಿಧಿಗಳೊಂದಿಗೆ, ರೂ. 43.65 ಕೋಟಿ ಠೇವಣಿ ಹೊಂದಿದ್ದು ರೂ. 38.18 ಕೋಟಿ ರೂ ಹೊರಬಾಕಿ ಸಾಲ ಹೊಂದಿರುವುದರ ಜೊತೆಗೆ ರೂ. 175 ಕೋಟಿ ರೂ ವ್ಯವಹಾರ ಮಾಡಿರುವುದು ಸಂಘದ ಉತ್ತಮ ಬೆಳವಣಿಗೆಗೆ ಸಾಕ್ಷಿಯಾಗಿದೆ ಎಂದು ತಿಳಿಸಿದರು.
ಸಂಘದ ನಿರ್ದೇಶಕರಾದ ಪದ್ಮಶೇಖರ್ ಜೈನ್ ಬಲ್ಲೋಡಿಗುತ್ತು, ಈಶ್ವರ್ ಭಟ್ ಬೋಳಂತೂರು, ವಸಂತ ಮಿತ್ತೊಟ್ಟು, ತಿಮ್ಮಪ್ಪ ಪೂಜಾರಿ ಕುಕ್ಕಿಪಾಡಿ, ರಾಮಚಂದ್ರ ಪೂಜಾರಿ ಕಂರ್ಬಡ್ಕ, ರಾಜೇಂದ್ರ ಹಾರ್ದೊಟ್ಟು, ಜೋನ್ ಸೇರಾ, ಕಾಂಚಲಾಕ್ಷಿ ಮಣಿನಾಲ್ಕೂರು, ಜಾಜಿಕ ಶೆಟ್ಟಿ ಮುಗೆರೋಡಿ, ಹಾಗೂ ಸಂಘದ ಕಾನೂನು ಸಲಹೆಗಾರರಾದ ಸುರೇಶ್ ಶೆಟ್ಟಿ ಮತ್ತು ಲೆಕ್ಕಪರಿಶೋಧಕರು ಸಭೆಯಲ್ಲಿ ಉಪಸ್ಥಿತರಿದ್ದರು. ಸಂಘದ ನಿರ್ದೇಶಕರಾದ ಓಲ್ವಿನ್ ಮೋನಿಸ್ ಪ್ರಸ್ತಾವಿಸಿ ಕಾರ್ಯಕ್ರಮ ನಿರ್ವಹಿಸಿದರು. ಮಖ್ಯ ಕಾರ್ಯನಿರ್ವಹಣಾಧಿಕಾರಿ ಗುಣಶೇಖರ್ ವಾರ್ಷಿಕ ವರದಿ ಮಂಡಿಸಿ ಸಂಘದ ನಿರ್ದೇಶಕರಾದ ರಾಜಶೇಖರ ಶೆಟ್ಟಿ ವಂದಿಸಿದರು.
Be the first to comment on "ರಬ್ಬರ್, ಜೇನು ವ್ಯವಸಾಯಗಾರರ ವಿವಿಧೋದ್ದೇಶ ಸಹಕಾರಿ ಸಂಘದ ಸದಸ್ಯರಿಗೆ ಶೇ.11 ಡಿವಿಡೆಂಡ್ ಘೋಷಣೆ"