ಬಿ.ಸಿ.ರೋಡ್ ತಲಪಾಡಿ ಬಳಿ ಭೀಕರ ಅಪಘಾತ: ನವವಿವಾಹಿತ ಪತಿ ಗಂಭೀರ, ಪತ್ನಿ ಮೃತ್ಯುವಶ

ಬಂಟ್ವಾಳ: ಹೊಸತಾಗಿ ಮದುವೆಯಾದ ಪತಿ, ಪತ್ನಿ ಕಾರಿನಲ್ಲಿ ಸಾಗುತ್ತಿದ್ದ ವೇಳೆ ಬಿ.ಸಿ.ರೋಡ್ ತಲಪಾಡಿ ಬಳಿ ಶನಿವಾರ ಅಪಘಾತಕ್ಕೀಡಾಗಿದೆ. ಇದರಿಂದ ಪತ್ನಿ ಸಾವನ್ನಪ್ಪಿದ್ದು, ಪತಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಮಂಗಳೂರು ಬೆಂಗಳೂರು ರಸ್ತೆಯ  ಬಂಟ್ವಾಳದ ತಲಪಾಡಿ ಎಂಬಲ್ಲಿ ಘಟನೆ ನಡೆದಿದೆ ನಡೆದಿದೆ. ಬಂಟ್ವಾಳ ತಾಲೂಕಿನ ಪೆರ್ನೆ ಸಮೀಪದ ವಡ್ಯದಗಯ ನಿವಾಸಿ ಅನಿಶ್ ಕೃಷ್ಣ ಎಂಬವರ ಪತ್ನಿ  ಮಾನಸ ಸಾವನ್ನಪ್ಪಿದವರು.