ಸರ್ಕಾರದ ಆದೇಶ ಸಂಖ್ಯೆ: ಮಮಇ/154/ಐಸಿಡಿ/2020, ಬೆಂಗಳೂರು, ದಿನಾಂಕ:03.12.2022ರ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ನೇಮಕಾತಿಯ ಪರಿಷ್ಕೃತ ಮಾರ್ಗಸೂಚಿಯಂತೆ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಆಯ್ಕೆ ಪ್ರಕ್ರಿಯೆಯನ್ನು ಆನ್‌ಲೈನ್ ಮೂಲಕ ಕೈಗೊಳ್ಳಲು ಮಾನ್ಯ ಜಿಲ್ಲಾಧಿಕಾರಿಗಳು, ದಕ್ಷಿಣ ಕನ್ನಡ ಜಿಲ್ಲೆ ರವರ ಅನುಮೋದಿತ ಕಡತ ಕಂಡಿಕೆ ಸಂಖ್ಯೆ:02 ದಿನಾಂಕ:08.08.2024ರನ್ವಯ ದ.ಕ ಜಿಲ್ಲೆಯ ಬಂಟ್ವಾಳ ಶಿಶು ಅಭಿವೃದ್ಧಿ ಯೋಜನೆ ಯಲ್ಲಿ ಖಾಲಿಯಿರುವ ಒಟ್ಟು 30 ಅಂಗನವಾಡಿ ಸಹಾಯಕಿಯರ ಈ ಕೆಳಕಾಣಿಸಿದ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಅಹ್ವಾನಿಸಲಾಗಿದೆ.
ಅಂಗನವಾಡಿ ಸಹಾಯಕಿಯರ ಹುದ್ದೆ ಖಾಲಿಯಿರುವ ಅಂಗನವಾಡಿ ಕೇಂದ್ರಗಳ ಮಾಹಿತಿ | |||||||
ಕ್ರ.ಸಂ. | ತಾಲ್ಲೂಕು/ ಯೋಜನೆಯ ಹೆಸರು | ಗ್ರಾಮ ಪಂಚಾಯತ್ | ಗ್ರಾಮದ ಹೆಸರು | ನಗರಸಭೆ/ ಪುರಸಭೆ/ ಪಟ್ಟಣ | ವಾರ್ಡ್ ಸಂಖ್ಯೆ | ಅಂಗನವಾಡಿ ಕೇಂದ್ರದ ಹೆಸರು | ನಿಗದಿಪಡಿಸಿದ ಮೀಸಲಾತಿ (ಇತರೆ/ಪ.ಜಾತಿ/ ಪ.ಪಂಗಡ) |
1 | ಬಂಟ್ವಾಳ | ಗೊಳ್ತಮಜಲು | ಗೊಳ್ತಮಜಲು | – | – | ಕಲ್ಲಡ್ಕಶಾಲೆ | ಸಾಮಾನ್ಯ |
2 | ಬಂಟ್ವಾಳ | ಗೊಳ್ತಮಜಲು | ಗೊಳ್ತಮಜಲು | – | – | ನೆಟ್ಲಶಾಲೆ | ಸಾಮಾನ್ಯ |
3 | ಬಂಟ್ವಾಳ | ಬಾಳ್ತಿಲ | ಬಾಳ್ತಿಲ | – | – | ಮುಲಾರು | ಸಾಮಾನ್ಯ |
4 | ಬಂಟ್ವಾಳ | ನರಿ ಕೊಂಬು | ನರಿ ಕೊಂಬು | – | – | ನವ ಜೀವನ ವ್ಯಾಯಾಮ ಶಾಲೆ | ಸಾಮಾನ್ಯ |
5 | ಬಂಟ್ವಾಳ | ಪುರಸಭೆ | ಬಿಕಸಬ | ಪುರಸಭೆ | ವಾರ್ಡ್ ನಂ-5 | ಮುಗ್ಡಾಲ್ ಗುಡ್ಡೆ | ಸಾಮಾನ್ಯ |
6 | ಬಂಟ್ವಾಳ | ನಾವೂರು | ನಾವೂರು | – | – | ಸೂರ ಕ್ವಾಟ್ರಸ್ | ಸಾಮಾನ್ಯ |
7 | ಬಂಟ್ವಾಳ | ಕಾವಳ ಪಡೂರು | ಕಾವಳ ಪಡೂರು | – | – | ಕೊಳಂಜೆ ಕೋಡಿ | ಸಾಮಾನ್ಯ |
8 | ಬಂಟ್ವಾಳ | ಕಾವಳ ಮೂಡೂರು | ಕಾವಳ ಮೂಡೂರು | – | – | ಕೊಪ್ಪರ ದೊಟ್ಟು | ಸಾಮಾನ್ಯ |
9 | ಬಂಟ್ವಾಳ | ಬಡಗ ಕಜೇಕಾರು | ಬಡಗ ಕಜೇಕಾರು | – | – | ಬ್ಯಾರಿ ಪಲ್ಕೆ | ಸಾಮಾನ್ಯ |
10 | ಬಂಟ್ವಾಳ | ಬಡಗ ಕಜೇಕಾರು | ಬಡಗ ಕಜೇಕಾರು | – | – | ಹಾರ್ದೋಟ್ಟು | ಸಾಮಾನ್ಯ |
11 | ಬಂಟ್ವಾಳ | ರಾಯಿ | ರಾಯಿ | – | – | ಪಡ್ರಾಯಿ | ಸಾಮಾನ್ಯ |
12 | ಬಂಟ್ವಾಳ | ಚೆನ್ನೈ ತೋಡಿ | ಅಜ್ಜಿಬೆಟ್ಟು | – | – | ಕೊರಗಟ್ಟೆ | ಸಾಮಾನ್ಯ |
13 | ಬಂಟ್ವಾಳ | ಚೆನ್ನೈ ತೋಡಿ | ಪಿಲಿ ಮೊಗರು | – | – | ಅಂಗಡಿ ಪಲ್ಕೇ | ಸಾಮಾನ್ಯ |
14 | ಬಂಟ್ವಾಳ | ಚೆನ್ನೈ ತೋಡಿ | ಅಜ್ಜಿಬೆಟ್ಟು | – | – | ಪರಾರಿ | ಸಾಮಾನ್ಯ |
15 | ಬಂಟ್ವಾಳ | ಸಜಿಪ ಮುನ್ನೂರು | ಸಜಿಪ ಮುನ್ನೂರು | – | – | ಮಲಾಯಿಬೆಟ್ಟು | ಸಾಮಾನ್ಯ |
16 | ಬಂಟ್ವಾಳ | ಸರಪಾಡಿ | ಸರಪಾಡಿ | – | – | ಸರಪಾಡಿ ಶಾಲೆ | ಸಾಮಾನ್ಯ |
17 | ಬಂಟ್ವಾಳ | ಪಜೀರ್ | ಪಜೀರ್ | – | – | ತಂಜಿರೆ | ಸಾಮಾನ್ಯ |
18 | ಬಂಟ್ವಾಳ | ಪುರಸಭೆ | ಬಿಮೂಡ | ಪುರಸಭೆ | ವಾರ್ಡ್ 15 | ಶಾಂತಿಯಂಗಡಿ | ಸಾಮಾನ್ಯ |
19 | ಬಂಟ್ವಾಳ | ಪುರಸಭೆ | ಬಿಮೂಡ | ಪುರಸಭೆ | ವಾರ್ಡ್ 15 | ಮೊಡಂಕಾಪು | ಸಾಮಾನ್ಯ |
20 | ಬಂಟ್ವಾಳ | ನರಿಂಗನ | ನರಿಂಗನ | – | – | ನೆತ್ತಿಲಾಪದವು | ಸಾಮಾನ್ಯ |
21 | ಬಂಟ್ವಾಳ | ಸಜಿಪ ನಡು | ಸಜಿಪ ನಡು | – | – | ಮುಗುಲ್ಯ | ಸಾಮಾನ್ಯ |
22 | ಬಂಟ್ವಾಳ | ಸಜಿಪ ನಡು | ಸಜಿಪ ನಡು | – | – | ಸಜಿಪನಡು ಪೇಟೆ | ಸಾಮಾನ್ಯ |
23 | ಬಂಟ್ವಾಳ | ಕರಿಯಂಗಳ | ಕರಿಯಂಗಳ | – | – | ಕರಿಯಂಗಳ | ಸಾಮಾನ್ಯ |
24 | ಬಂಟ್ವಾಳ | ಕರಿಯಂಗಳ | ಕರಿಯಂಗಳ | – | – | ಬಡಕಬೈಲು | ಸಾಮಾನ್ಯ |
25 | ಬಂಟ್ವಾಳ | ಬಡಗಬೆಳ್ಳೂರು | ಬಡಗಬೆಳ್ಳೂರು | – | – | ಬಡಗಬೆಳ್ಳೂರು | ಸಾಮಾನ್ಯ |
26 | ಬಂಟ್ವಾಳ | ಕಳ್ಳಿಗೆ | ಕಳ್ಳಿಗೆ | – | – | ಪಾದೆ | ಸಾಮಾನ್ಯ |
27 | ಬಂಟ್ವಾಳ | ಅಮ್ಮುಂಜೆ | ಅಮ್ಮುಂಜೆ | – | – | ಧಾರೆಕಟ್ಟೆ | ಸಾಮಾನ್ಯ |
28 | ಬಂಟ್ವಾಳ | ಸಂಗಬೆಟ್ಟು | ಕರ್ಪೆ | – | – | ಕರ್ಪೆ ಕುಟ್ಟಿಕಳ | ಸಾಮಾನ್ಯ |
29 | ಬಂಟ್ವಾಳ | ನರಿಕೊಂಬು | ಶಂಭೂರು | – | – | ಶೇಡಿಗುರಿ | ಸಾಮಾನ್ಯ |
30 | ಬಂಟ್ವಾಳ | ಗೊಳ್ತಮಜಲು | ಗೊಳ್ತಮಜಲು | – | – | ಬೊಮ್ಮನಕೋಡಿ | ಸಾಮಾನ್ಯ |
ಮೇಲ್ಕಾಣಿಸಿದ ಅಂಗನವಾಡಿ ಕೇಂದ್ರಗಳ ಕಾರ್ಯಕರ್ತೆ/ಸಹಾಯಕಿಯರ ಗೌರವಸೇವೆಯ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಜಾಲತಾಣ https://dwcd.karnataka.gov.in ದಲ್ಲಿ ಆನ್‌ಲೈನ್ ಸೇವೆಗಳ ಟ್ಯಾಬ್‌ನಲ್ಲಿ ಅಂಗನವಾಡಿ ಕಾರ್ಯಕರ್ತೆ/ಸಹಾಯಕಿಯರ ನೇಮಕಾತಿಯ ಸಬ್‌ಟ್ಯಾಬ್‌ನಲ್ಲಿ ಕ್ಲಿಕ್ ಮಾಡುವ ಮೂಲಕ ಆನ್‌ಲೈನ್ ವೆಬ್‌ಸೈಟ್ ವಿಳಾಸ https://karnemakaone.kar.nic.in/abcd/ ಮೂಲಕ ಈ ಕೆಳಗಿನ ಮಾರ್ಗಸೂಚಿ/ನಿಬಂಧನೆಗಳು ತಿಳಿಸಿರುವಂತೆ, ಅರ್ಹ ಮಹಿಳಾ ಹಾಗೂ ಲಿಂಗತ್ವ ಅಲ್ಪಸಂಖ್ಯಾತ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಅಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:27.08-2024 ಕ್ಕೆ ಹಾಗೂ ಕೊನೆಯ ದಿನಾಂಕ:26.09.2024 ಕ್ಕೆ ನಿಗದಿಪಡಿಸಿದೆ. (ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿಗಳನ್ನು ಸಂಪರ್ಕಿಸುವುದು.
ಸೂಚನೆಗಳು:
- ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಹುದ್ದೆಗಳಿಗೆ ಅರ್ಜಿಗಳನ್ನು ಆನ್‌ಲೈನ್ ಮೂಲಕವೇ ಸಲ್ಲಿಸತಕ್ಕದ್ದು, ಅರ್ಜಿಗಳನ್ನು ಇತರೇ ಯಾವುದೇ ಮೂಲದಿಂದ ಸಲ್ಲಿಸಲು ಅವಕಾಶವಿರುವುದಿಲ್ಲ. ಅವುಗಳನ್ನು ಪರಿಗಣಿಸಲಾಗುವುದಿಲ್ಲ.
- ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಈ ಕೆಳಗಿನ ನೇಮಕಾತಿಯ ಮಾರ್ಗಸೂಚಿ/ನಿಬಂಧನೆಗಳನ್ನು ಸ್ಪಷ್ಟವಾಗಿ ಓದಿಕೊಂಡು, ನೀಡಲಾಗಿರುವ ಸೂಚನೆಯಂತೆ ಅರ್ಜಿಗಳನ್ನು ಭರ್ತಿ ಮಾಡಿ, ಅವಶ್ಯಕ ಮೂಲ ದಾಖಲೆಗಳನ್ನು ಸ್ವಷ್ಟವಾಗಿ ಸ್ಕ್ಯಾನ್ ಮಾಡಿ, ಅಪ್‌ಲೋಡ್ ಮಾಡಿ ಅರ್ಜಿ ಸಲ್ಲಿಸುವುದು.
- ಆನ್‌ಲೈನ್ ಮೂಲಕವೇ ಎಲ್ಲಾ ಅಗತ್ಯ ದಾಖಲೆಗಳನ್ನು ಸಲ್ಲಿಸುವುದು. ತದನಂತರ ಸಲ್ಲಿಸುವ ದಾಖಲಾತಿಗಳನ್ನು ಪರಿಗಣಿಸುವುದಿಲ್ಲ.
ಮಾರ್ಗಸೂಚಿ/ನಿಬಂಧನೆಗಳು :
- ಅರ್ಹತೆ: ಮಹಿಳೆಯರು ಹಾಗೂ ಲಿಂಗತ್ವ ಅಲ್ಪಸಂಖ್ಯಾತ ಮಹಿಳೆಯರು ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ.
- ವಯೋಮಿತಿ: ಅಂಗನವಾಡಿ ಕಾರ್ಯಕರ್ತೆ/ಸಹಾಯಕಿಯರ ಹುದ್ದೆಗೆ ಅರ್ಜಿ ಸಲ್ಲಿಸಲು 19-35 ವರ್ಷ ವಯೋಮಿತಿಯೊಳಗಿನ ಹೆಣ್ಣು ಮಕ್ಕಳು ಹಾಗೂ ಮಹಿಳಾ ಲಿಂಗತ್ವ ಅಲ್ಪಸಂಖ್ಯಾತರು ಅರ್ಜಿ ಸಲ್ಲಿಸಬಹುದು ಹಾಗೂ ವಿಕಲಚೇತನರಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆ ಇರುತ್ತದೆ.
- ಸ್ಥಳೀಯತೆ:
- ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳಿಗೆ ಸಂಬಂಧಿಸಿದಂತೆ, ಗ್ರಾಮಾಂತರ ಪ್ರದೇಶದ ಅಂಗನವಾಡಿ ಕೇಂದ್ರವಾದಲ್ಲಿ ಆಯಾ ಕಂದಾಯ ಗ್ರಾಮದಲ್ಲಿ ವಾಸ್ತವ್ಯ ಹೊಂದಿರಬೇಕು. ಅಂಗನವಾಡಿ ಕಾರ್ಯಕರ್ತೆ/ ಸಹಾಯಕಿಯರ ಆಯ್ಕೆಗೆ ಸ್ಥಳೀಯ ಮಜಿರೆ, ತಾಂಡಾ ಹಾಗೂ ಹಾಡಿಗೆ ಸೇರಿದವಾಗಿದ್ದರೆ ಸಂಬಂಧಿಸಿದ ವಾಸ್ತವ್ಯ ಪ್ರಮಾಣ ಪತ್ರವನ್ನು ಸಕ್ಷಮ ಪ್ರಾಧಿಕಾರದಿಂದ ಪಡೆದು ಅರ್ಜಿಯೊಂದಿಗೆ ಸಲ್ಲಿಸುವುದು.
- ನಗರ ಪ್ರದೇಶದ ಅಂಗನವಾಡಿ ಕೇಂದ್ರವಾದಲ್ಲಿ ಆಯಾ ಕಂದಾಯ ವಾರ್ಡ್ ನಲ್ಲಿ ವಾಸ್ತವ್ಯ ಹೊಂದಿರಬೇಕು ಹಾಗೂ ವಾಸಸ್ಥಳ ಪ್ರಮಾಣ ಪತ್ರವನ್ನು ಸಕ್ಷಮ ಪ್ರಾಧಿಕಾರದಿಂದ ಪಡೆದು ಅರ್ಜಿಯೊಂದಿಗೆ ಸಲ್ಲಿಸುವುದು.
- ತಹಶೀಲ್ದಾರರು/ಉಪ ತಹಶೀಲ್ದಾರರಿಂದ ಮೂರು ವರ್ಷದ ವಾಸ್ತವ್ಯ ದೃಢೀಕರಣದೊಂದಿಗೆ ಸ್ಥಳೀಯರು ಎಂಬುದನ್ನು ದೃಢೀಕರಿಸಲು ಪೂರಕ ದಾಖಲೆಗಳಾದ ಆಧಾರ ಕಾರ್ಡ್, ರೇಷನ್ ಕಾರ್ಡ್ ಮತದಾರರ ಗುರುತಿನ ಚೀಟಿಗಳನ್ನು ಅರ್ಜಿಯೊಂದಿಗೆ ಸಲ್ಲಿಸುವುದು.
- ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ವಿದ್ಯಾರ್ಹತೆ:
- ಕನಿಷ್ಠ ಪಿ.ಯು.ಸಿ. ತೇರ್ಗಡೆ ಹೊಂದಿರಬೇಕು. ಎಸ್.ಎಸ್.ಎಲ್.ಸಿ. ಯಲ್ಲಿ ಕನ್ನಡ ಭಾಷೆಯನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯನ್ನಾಗಿ ಓದಿರಬೇಕು.
- ಅಂಗನವಾಡಿ ಕಾರ್ಯಕರ್ತೆಯರ ನೇಮಕಾತಿ ಸಂದರ್ಭದಲ್ಲಿ “ಸರ್ಕಾರದ ಅಂಗೀಕೃತ ಸಂಸ್ಥೆಗಳಿಂದ D.S.E.R.T. ಯಿಂದ ECCE ಡಿಪ್ಲೋಮಾ ಕೋರ್ಸ್, JOC ಕೋರ್ಸ್, NTT ಕೋರ್ಸಗಳನ್ನು ಹಾಗೂ ಅಂಗನವಾಡಿ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಡಿಪ್ಲೋಮಾ ನ್ಯೂಟ್ರೀಷಿಯನ್, ಹೋಂ ಸೈನ್ಸ್ ಸರ್ಟಿಫಿಕೇಟ್ ಕೋರ್ಸ್, ಒಂದು ವರ್ಷದ ನರ್ಸರಿ ಅಥವಾ ಪೂರ್ವ ಪ್ರಾಥಮಿಕ ತರಬೇತಿ ಪಡೆದು ಪ್ರಮಾಣ ಪತ್ರ ಹೊಂದಿದವರಿಗೆ ಮೊದಲ ಆದ್ಯತೆ ನೀಡಲಾಗುವುದು ಹಾಗೂ ಸದ್ರಿಯವರಿಗೆ ಬೋನಸ್+5 ಅಂಕಗಳನ್ನು ನೀಡಲಾಗುವುದು.
- ಅಂಗನವಾಡಿ ಸಹಾಯಕಿ ವಿದ್ಯಾರ್ಹತೆ: ಹುದ್ದೆಗೆ ಕನಿಷ್ಠ ವಿದ್ಯಾರ್ಹತೆ ಎಸ್.ಎಸ್.ಎಲ್.ಸಿ. ಅಥವಾ ತತ್ಸಮಾನ
ತರಗತಿಯಲ್ಲಿ ಉತ್ತೀರ್ಣವಾಗಿರಬೇಕು.
- ಕರ್ನಾಟಕ ರಾಜ್ಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಮುಕ್ತ ಶಾಲೆ/ಮುಕ್ತ ವಿದ್ಯಾಲಯಗಳಲ್ಲಿ ಎಸ್.ಎಸ್.ಎಲ್.ಸಿ. ತೇರ್ಗಡೆ ಹೊಂದಿದ ಅಭ್ಯರ್ಥಿಗಳು ಪ್ರಥಮ/ದ್ವಿತೀಯ ಭಾಷೆಯಾಗಿ ಕನ್ನಡ ಹಾಗೂ ಸಾಮಾನ್ಯ ಗಣಿತ ಮತ್ತು ಸಮಾಜ ಶಾಸ್ತ್ರ/ ಸಮಾಜ ವಿಜ್ಞಾನ ವಿಷಯಗಳನ್ನು ಕಡ್ಡಾಯವಾಗಿ ವ್ಯಾಸಂಗ ಮಾಡಿದ್ದು ಪ್ರಮಾಣ ಪತ್ರ/ ಅಂಕಪಟ್ಟಿಯು ಗರಿಷ್ಠ 625 ಕನಿಷ್ಠ 219 ಅಂಕಗಳನ್ನು ಹೊಂದಿರುವ ಅಭ್ಯರ್ಥಿಗಳನ್ನು ಮಾತ್ರ ಪರಿಗಣಿಸಲಾಗುವುದು.
- ಬೇರೆ ರಾಜ್ಯಗಳಲ್ಲಿ ವ್ಯಾಸಂಗ ಮಾಡಿದ್ದು, ಕನ್ನಡವನ್ನು ಪ್ರಥಮ/ದ್ವಿತೀಯ ಭಾಷೆಯಾಗಿ ಅಭ್ಯಾಸ ಮಾಡಿದ್ದರೂ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಆ ರಾಜ್ಯದಲ್ಲಿ ನಿಗದಿಪಡಿಸಲಾದ ಗರಿಷ್ಠ ಹಾಗೂ ಕನಿಷ್ಠ ಅಂಕಗಳು ಹಾಗೂ ಕರ್ನಾಟಕ ರಾಜ್ಯದಲ್ಲಿ ನಿಗದಿಪಡಿಸಿದ ಗರಿಷ್ಠ ಹಾಗೂ ಕನಿಷ್ಠ ಅಂಕದಲ್ಲಿ ವ್ಯತ್ಯಾಸವಿದ್ದಲ್ಲಿ ಕರ್ನಾಟಕದಲ್ಲಿ ವ್ಯಾಸಂಗ ಮಾಡಿದ ಅಭ್ಯರ್ಥಿಗಳನ್ನು ಮಾತ್ರ ಪರಿಗಣಿಸಲಾಗುವುದು.
- ಅಂಗನವಾಡಿ ಸಹಾಯಕಿಯರು ಯಾವುದೇ ಭಾಷಾ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ್ದರೂ ಹಾಗೂ ಯಾವುದೇ ರಾಜ್ಯದಲ್ಲಿ ವ್ಯಾಸಂಗ ಮಾಡಿದ್ದರೂ ಸಹ ಅವರು ಕನ್ನಡ ಭಾಷೆಯನ್ನು ಪ್ರಥಮ/ದ್ವಿತೀಯ ಭಾಷೆಯಾಗಿ ವ್ಯಾಸಂಗ ಮಾಡಿರಬೇಕು ಹಾಗೂ ಮಾತೃಭಾಷೆ ಕನ್ನಡವಲ್ಲದೇ ಇರುವ ಅಭ್ಯರ್ಥಿಗಳಿಗೆ ಆಯ್ಕೆ ಸಮಿತಿಯು ಆಯ್ಕೆ ಸಮಯದಲ್ಲಿ ಸಂದರ್ಶನ ಏರ್ಪಡಿಸಿ ಹಾಗೂ ಅವಶ್ಯವಿದ್ದಲ್ಲಿ ಕನ್ನಡ ಭಾಷೆಯ ಜ್ಞಾನದ ಕುರಿತಂತೆ ಓದಿಸಿ, ಬರೆಸಿ ಅವರ ಕನ್ನಡ ಭಾಷಾ ಜ್ಞಾನವನ್ನು ಪರೀಕ್ಷಿಸಿ ಅವರನ್ನು ಆಯ್ಕೆ ಮಾಡುವ ಬಗ್ಗೆ ಜಿಲ್ಲಾ ಮಟ್ಟದ ಆಯ್ಕೆ ಸಮಿತಿಯಿಂದ ನಿರ್ಧರಿಸಲಾಗುವುದು.
- ಮೀಸಲಾತಿ ನಿಗದಿ:
ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಹುದ್ದೆಗೆ ಶೇ. 25 ರಷ್ಟು ಅಲ್ಪಸಂಖ್ಯಾತ ಸಮುದಾದಯದ ಜನಸಂಖ್ಯೆ ಇರುವ ಪ್ರದೇಶದ ಅಂಗನವಾಡಿ ಕೇಂದ್ರಗಳಲ್ಲಿ ಕನ್ನಡ ಭಾಷೆಯೊಂದಿಗೆ ಆಯಾ ಅಲ್ಪಸಂಖ್ಯಾತ ಸಮುದಾಯದ ಭಾಷೆ ಬಲ್ಲವರನ್ನು ಕಾರ್ಯಕರ್ತೆ/ಸಹಾಯಕಿಯ ಹುದ್ದೆಗೆ ಆಯ್ಕೆ ಮಾಡಲಾಗುವುದು. ಅಂಗನವಾಡಿ ಕಾರ್ಯಕರ್ತೆ/ಸಹಾಯಕಿಯ ಹುದ್ದೆಗೆ ಅರ್ಜಿ ಸಲ್ಲಿಸಿದವರಲ್ಲಿ ಒಂದಕ್ಕಿಂತ ಹೆಚ್ಚು ಅಭ್ಯರ್ಥಿಗಳು ಸಮಾನ ಅಂಕಗಳಿಸಿದ್ದಲ್ಲಿ, ವಯೋಹಿರಿತನ ಹೊಂದಿರುವವರನ್ನು ಪರಿಗಣಿಸಲಾಗುವುದು. ಒಂದು ವೇಳೆ ವಯಸ್ಸು ಸಮಾನವಾಗಿದ್ದಲ್ಲಿ, ಇವರಲ್ಲಿ ವಿಧವೆಯರನ್ನು ಪರಿಗಣಿಸಲಾಗುತ್ತದೆ.
- ಅಂಗನವಾಡಿ ಕೇಂದ್ರಗಳ ವ್ಯಾಪ್ತಿ ಗುರುತಿಸುವಿಕೆ:
ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳು ಗೌರವ ಸೇವೆಗೆ ಸೇರಿದ್ದು, ಸರ್ಕಾರಿ ಹುದ್ದೆಗಳ ಮೀಸಲಾತಿ ತತ್ವಗಳು ಅನ್ವಯಿಸುವುದಿಲ್ಲ. ಅಂಗನವಾಡಿ ಕೇಂದ್ರ ಪ್ರಾರಂಭಿಸುವ ಗ್ರಾಮಾಂತರ ಪ್ರದೇಶದ ಕಂದಾಯ ಗ್ರಾಮ/ನಗರ ಪ್ರದೇಶದ ಕಂದಾಯ ವಾರ್ಡ್ ನ ಒಟ್ಟು ಜನಸಂಖ್ಯೆಗೆ ಮತ್ತು ಒಂದೇ ಗ್ರಾಮ/ ವಾರ್ಡ್ ನಲ್ಲಿ ಒಂದಕ್ಕಿಂತ ಹೆಚ್ಚು ಅಂಗನವಾಡಿ ಕೇಂದ್ರಗಳಿದ್ದಾಗ, ಅಂಗನವಾಡಿ ಕೇಂದ್ರದ ಪ್ರದೇಶದ (ವ್ಯಾಪ್ತಿಯ) ಜನಸಂಖ್ಯೆಗೆ ಶೇ.40 ಕ್ಕಿಂತ ಹೆಚ್ಚು ಪರಿಶಿಷ್ಠ ಜಾತಿ ಅಥವಾ ಪರಿಶಿಷ್ಠ ಪಂಗಡದವರಿದ್ದಲ್ಲಿ, ಈ ವರ್ಗಗಳ ಪೈಕಿ ಅತೀ ಹೆಚ್ಚು ಜನಸಂಖ್ಯೆಯಿರುವ ವರ್ಗದವರಿಗೆ ಕಾರ್ಯಕರ್ತೆ/ಸಹಾಯಕಿ ಹುದ್ದೆಯನ್ನು ಮೀಸಲಿರಿಸಲಾಗುವುದು. ಪರಿಶಿಷ್ಠ ಜಾತಿ/ ಪರಿಶಿಷ್ಠ ಪಂಗಡದವರಿಗೆ ಕಾರ್ಯಕರ್ತೆ/ಸಹಾಯಕಿ ಹುದ್ದೆ ಮೀಸಲಿಟ್ಟ ಕೇಂದ್ರಗಳಲ್ಲಿ ಆ ವರ್ಗಕ್ಕೆ ಸೇರಿದವರನ್ನು ಮಾತ್ರ ಆಯ್ಕೆ ಮಾಡಲಾಗುವುದು.
- ಆಯ್ಕೆ ಆದ್ಯತೆ:
- ಆ್ಯಸಿಡ್ ದಾಳಿಗೆ ತುತ್ತಾದ ಮಹಿಳೆಯರ ಆಯ್ಕೆ:
ಆ್ಯಸಿಡ್ ದಾಳಿಗೆ ತುತ್ತಾದ ಮಹಿಳೆ ಅಂಗನವಾಡಿ ಕಾರ್ಯಕರ್ತೆ/ಸಹಾಯಕಿಯರ ಹುದ್ದೆಗೆ ಅರ್ಜಿ ಸಲ್ಲಿಸಿದ್ದಲ್ಲಿ
ಅರ್ಹ ಅಭ್ಯರ್ಥಿಗೆ +05 ಬೋನಸ್ ಅಂಕಗಳನ್ನು ನೀಡಲಾಗುವುದು.
- ಇಲಾಖೆಯ ಸಂಸ್ಥೆಗಳ ನಿವಾಸಿಗಳ ಆಯ್ಕೆ:
ಇಲಾಖೆಯ ಸುಧಾರಣಾ ಸಂಸ್ಥೆ/ ರಾಜ್ಯ ಮಹಿಳಾ ನಿಲಯಗಳ ನಿವಾಸಿಗಳು ಕನಿಷ್ಠ 03 ವರ್ಷ ಸಂಸ್ಥೆಯಲ್ಲಿರಬೇಕು ಹಾಗೂ ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳಿಂದ ಪಡೆದ ನಿವಾಸಿ ಪ್ರಮಾಣ ಪತ್ರ ನೇಮಕಾತಿ ಪ್ರಕ್ರಿಯೆಯಲ್ಲಿ ನಿಗದಿಪಡಿಸಿದ ವಿದ್ಯಾರ್ಹತೆಯಲ್ಲಿ ಗಳಿಸಿದ ಅಂಕಗಳಿಗೆ +10 ಬೋನಸ್ ಅಂಕಗಳನ್ನು ನೀಡಲಾಗುವುದು. ವಾಸಸ್ಥಳ ದೃಢೀಕರಣವನ್ನು ಸಲ್ಲಿಸಿರುವ ಆ ಜಿಲ್ಲೆಯಲ್ಲಿ ಎಲ್ಲಿಯಾದರೂ ಅರ್ಜಿ ಸಲ್ಲಿಸಬಹುದಾಗಿರುತ್ತದೆ.
- ವಿಧವೆಯರ ಆಯ್ಕೆ:
ನೇಮಕಾತಿ ಪ್ರಕ್ರಿಯೆಯಲ್ಲಿ ನಿಗದಿಪಡಿಸಿದ ವಿದ್ಯಾರ್ಹತೆಯಲ್ಲಿ ಗಳಿಸಿದ ಅಂಕಗಳಿಗೆ +5 ಬೋನಸ್ ಅಂಕಗಳನ್ನು ನೀಡಲಾಗುವುದು. ಮರಣ ಪ್ರಮಾಣ ಪತ್ರ, ವಿಧವಾ ಪ್ರಮಾಣ ಪತ್ರಗಳನ್ನು ಕಡ್ಡಾಯವಾಗಿ ಲಗತ್ತಿಸುವುದು.
- ಅಂಗವಿಕಲರ ಆಯ್ಕೆ:
- ದೈಹಿಕ ಅಂಗವಿಕಲತೆ ಶೇ. 40% ಮೀರದಂತೆ ಇರುವವರು, ಅರ್ಜಿ ಸಲ್ಲಿಸಬಹುದಾಗಿದೆ. ಅಂಗೀಕೃತ ಪ್ರಾಧಿಕಾರ ಜಿಲ್ಲಾ ವೈದ್ಯಕೀಯ ಮಂಡಳಿಯಿಂದ ಪಡೆದ ಪ್ರಮಾಣ ಪತ್ರ/UDID ಕಾರ್ಡ್ ಅರ್ಜಿಯೊಂದಿಗೆ ಲಗತ್ತಿಸಬೇಕು.
- ಅಂಗವಿಕಲರು ವಿದ್ಯಾರ್ಹತೆಯಲ್ಲಿ ಗಳಿಸಿದ ಅಂಕಗಳಿಗೆ +5 ಬೋನಸ್ ಅಂಕಗಳನ್ನು ನೀಡಲಾಗುವುದು.
- ಅಂಗವಿಕಲರು ಪ್ರಸ್ತುತ ತಾವು ಎಲ್ಲಿ ವಾಸವಾಗಿರುವುದಾಗಿ ವಾಸಸ್ಥಳ ಪ್ರಮಾಣ ಪತ್ರವನ್ನು ಸಲ್ಲಿಸಿರುತ್ತಾರೋ, ಆ ಸ್ಥಳವನ್ನೇ ಅವರ ವಾಸ ಸ್ಥಳವೆಂದು ಪರಿಗಣಿಸಲಾಗುವುದು.
- ಅಂಗವಿಕಲ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಅಂಗವಿಕಲತೆಯ ಪ್ರಮಾಣ ಪತ್ರದ ಬಗ್ಗೆ ಸಂಶಯ ಉಂಟಾದಲ್ಲಿ, ಆ ಅಭ್ಯರ್ಥಿಗಳನ್ನು ಆಯ್ಕೆ ಸಮಿತಿಯ ಮುಂದೆ ಖುದ್ದಾಗಿ ಹಾಜರಾಗಲು ಸೂಚಿಸಿ ಸದರಿ ಹುದ್ದೆ ನಿರ್ವಹಿಸಲು ಸಮರ್ಥರಿರುವ ಬಗ್ಗೆ ಸಮಿತಿಯಲ್ಲಿಯೇ ಪರಿಶೀಲಿಸಿ ನಿರ್ಧರಿಸಲಾಗುವುದು.
- ಬೋನಸ್ ಅಂಕಗಳು: (ಅಂಗನವಾಡಿ ಕಾರ್ಯಕರ್ತೆ/ಸಹಾಯಕಿಯರಿಗೆ):
ಅಂಗನವಾಡಿ ಕಾರ್ಯಕರ್ತೆ/ಸಹಾಯಕಿ ಹುದ್ದೆಗೆ ಅರ್ಜಿ ಸಲ್ಲಿಸಿದವರಲ್ಲಿ ಒಂದಕ್ಕಿಂತ ಹೆಚ್ಚು ಅಭ್ಯರ್ಥಿಗಳು ಸಮಾನ ಅಂಕ ಗಳಿಸಿದ್ದಲ್ಲಿ ವಯೋಹಿರಿತನವನ್ನು ಪರಿಗಣಿಸಲಾಗುವುದು. ವಯಸ್ಸು ಸಮಾನವಾಗಿದ್ದಲ್ಲಿ ವಿಧವೆ/ವಿಚ್ಛೇದಿತೆಯರನ್ನು ಪರಿಗಣಿಸಲಾಗುವುದು. ಮಾಜಿ ದೇವದಾಸಿಯ ಮಗಳು, ಯೋಜನಾ ನಿರಾಶ್ರಿತರು, ವಿಚ್ಛೇದಿತ ಮಹಿಳೆಯರು ಇವರುಗಳಿಗೆ 5 ಬೋನಸ್ ಅಂಕಗಳನ್ನು ನೀಡಲಾಗುವುದು. (ಅಧಿಕೃತ ಪ್ರಮಾಣಪತ್ರ ನೀಡುವ ಷರತ್ತಿಗೊಳಪಟ್ಟು)
- ಆನ್‌ಲೈನ್ ಅರ್ಜಿಯೊಂದಿಗೆ ಲಗತ್ತಿಸಬೇಕಾದ ದಾಖಲೆಗಳು:
- ಅರ್ಜಿ ನಿಗದಿತ ನಮೂನೆಯಲ್ಲಿ (ಆನ್‌ಲೈನ್)
- ಜನನ ಪ್ರಮಾಣ ಪತ್ರ/ಜನ್ಮ ದಿನಾಂಕ ಇರುವ ಎಸ್.ಎಸ್.ಎಲ್.ಸಿ. ಅಂಕಪಟ್ಟಿ
- ನಿಗದಿತ ವಿದ್ಯಾರ್ಹತೆಯ ಅಂಕಪಟ್ಟಿ
- ತಹಶೀಲ್ದಾರರು/ಉಪ ತಹಶೀಲ್ದಾರರಿಂದ ಪಡೆದ ಮೂರು (3) ವರ್ಷದೊಳಗಿನ ವಾಸಸ್ಥಳ ದೃಢೀಕರಣ ಪತ್ರ
- ಅಭ್ಯರ್ಥಿಗಳ ಜಾತಿ ಪ್ರಮಾಣ ಪತ್ರ (ತಹಶೀಲ್ದಾರರಿಂದ ಪಡೆದಿರಬೇಕು).
- ಪತಿಯ ಮರಣ ಪ್ರಮಾಣ ಪತ್ರ ಹಾಗೂ ವಿಧವಾ ಪ್ರಮಾಣ ಪತ್ರ (ವಿಧವಾ ವೇತನದ ದೃಢೀಕರಣವನ್ನು ಪರಿಗಣಿಸಲಾಗುವುದಿಲ್ಲ)
- ವಿಕಲಚೇತನರ ಪ್ರಮಾಣ ಪತ್ರ UDID (Unique Disability ID)
- ವಿಚ್ಛೇದನ ಪ್ರಮಾಣ ಪತ್ರ (ನ್ಯಾಯಾಲಯದಿಂದ ಪಡೆದಿರಬೇಕು)
- ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವತಿಯಿಂದ ನಡೆಸಲ್ಪಟ್ಟ ಮಾಜಿ ದೇವದಾಸಿಯರ ಸಮೀಕ್ಷೆಯ ಪಟ್ಟಿಯಲ್ಲಿರುವ ಮಾಜಿ ದೇವದಾಸಿಯರ ಮಕ್ಕಳು ಎಂಬುದರ ಬಗ್ಗೆ ಮಹಿಳಾ ಅಭಿವೃದ್ಧಿ ನಿಗಮದ ಅಧಿಕಾರಿಗಳಿಂದ ಪಡೆದ ಪ್ರಮಾಣ ಪತ್ರ.
- ಇಲಾಖೆಯ ಸುಧಾರಣಾ ಸಂಸ್ಥೆ/ರಾಜ್ಯ ಮಹಿಳಾ ನಿಲಯಗಳ ನಿವಾಸಿಗಳು ಕನಿಷ್ಟ 03 ವರ್ಷ ಸಂಸ್ಥೆಯಲ್ಲಿರಬೇಕು ಹಾಗೂ ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳಿಂದ ಪಡೆದ ನಿವಾಸಿ ಪ್ರಮಾಣ ಪತ್ರ.
- ಯೋಜನಾ ನಿರಾಶ್ರಿತರ ಬಗ್ಗೆ ತಹಶೀಲ್ದಾರರಿಂದ ಪಡೆದ ಪ್ರಮಾಣ ಪತ್ರ.
- ಆಧಾರ ಕಾರ್ಡ್/ಮತದಾರರ ಗುರುತಿನ ಚೀಟಿ/ರೇಷನ್ ಕಾರ್ಡ್ ಅರ್ಜಿಯೊಂದಿಗೆ ಸಲ್ಲಿಸುವುದು.
- ಎಲ್ಲಾ ದಾಖಲಾತಿಗಳನ್ನು ಪತ್ರಾಂಕಿತ ಅಧಿಕಾರಿಗಳಿಂದ ದೃಢೀಕರಣ ಮಾಡಿಸಿ ಸಲ್ಲಿಸುವುದು.
Be the first to comment on "ಬಂಟ್ವಾಳ: 30 ಅಂಗನವಾಡಿ ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನ"