ರಾಜ್ಯಪಾಲರ ಹುದ್ದೆಯನ್ನು ರದ್ದುಗೊಳಿಸಲು ಸಂವಿಧಾನಾತ್ಮಕವಾಗಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಐ) ಬಂಟ್ವಾಳ ತಾಲೂಕು ಸಮಿತಿ ನೇತೃತ್ವದಲ್ಲಿ ಬಿಸಿರೋಡಿನ ಆಡಳಿತ ಸೌಧದ ಎದುರು ಪ್ರತಿಭಟನೆ ನಡೆಯಿತು.
ಸಿಪಿಐ ಬಂಟ್ವಾಳ ತಾಲೂಕು ಕಾರ್ಯದರ್ಶಿ ಸುರೇಶ್ ಕುಮಾರ್ ಬಂಟ್ವಾಳ್ ಮಾತನಾಡಿ ಕರ್ನಾಟಕದ ಇತ್ತೀಚಿನ ರಾಜಕೀಯ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಜನತಂತ್ರ ವ್ಯವಸ್ಥೆಯಲ್ಲಿ ಜನರಿಂದ ಬಹುಮತ ಪಡೆದು ಆಯ್ಕೆಯಾದ ಒಂದು ಚುನಾಯಿತ ರಾಜ್ಯ ಸರಕಾರವನ್ನು ಕೇಂದ್ರ ಸರ್ಕಾರದಿಂದ ನೇಮಕ ಮಾಡಲ್ಪಟ್ಟ ರಾಜ್ಯಪಾಲರ ಮೂಲಕ ಅಸ್ಥಿರಗೊಳಿಸುತ್ತಿರುವುದು ಗೊತ್ತಾಗುತ್ತದೆ ಎಂದರು.
ಮುಡಾ, ವಾಲ್ಮೀಕಿ ನಿಗಮ ಪ್ರಕರಣ ನ್ಯಾಯಾಂಗ ಚೌಕಟ್ಟಿನಲ್ಲಿ ತನಿಖೆ ಆಗಬೇಕು ಎಂದು ಒತ್ತಾಯಿಸಿದ ಅವರು, ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಪ್ರಾಸಿಕ್ಯೂ಼ಶನ್ ಗೆ ಅನುಮತಿ ನೀಡುವ ಸಂದರ್ಭ ರಾಜ್ಯಪಾಲರ ಕಚೇರಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ರಾಜಕೀಯ ಒತ್ತಡಕ್ಕೆ ಮಣಿದು ತೀರ್ಮಾನ ಕೈಗೊಂಡಿರುವುದು ಸ್ವಷ್ಟವಾಗಿ ಕಂಡುಬರುತ್ತಿದೆ ಎಂದರು,
ಸಿಪಿಐ ಜಿಲ್ಲಾ ಕಾರ್ಯದರ್ಶಿ ಬಿ.ಶೇಖರ್ ಮಾತನಾಡಿ,ಈಗಾಗಲೇ ದೇಶಾದ್ಯಂತ ಕರ್ನಾಟಕ ಸೇರಿದಂತೆ ತಮಿಳುನಾಡು, ಕೇರಳ, ಪಾಂಡಿಚೇರಿ, ಪಶ್ಚಿಮ ಬಂಗಾಳ, ರಾಜಸ್ಥಾನ ಇತ್ಯಾದಿ ರಾಜ್ಯಗಳಲ್ಲಿ ರಾಜ್ಯ ಸರ್ಕಾರ ಮತ್ತು ರಾಜ್ಯಪಾಲರ ನಡುವೆ ಬಹಿರಂಗವಾಗಿಯೇ ಸಂಘರ್ಷ ನಡೆದಿರುವುದು ಕಂಡುಬಂದಿದೆ. ಎಂದರು.
ಪ್ರತಿಭಟನೆಗೆ ಮುನ್ನು ಪಕ್ಷದ ಬಿಸಿರೋಡು ಕಚೇರಿಯಿಂದ ಮೆರವಣಿಗೆ ನಡೆಸಲಾಯಿತು. ಸೇತೃತ್ವವನ್ನು ಸಿಪಿಐ ತಾಲೂಕು ಸಮಿತಿ ಸದಸ್ಯ ಎಂ ರಾಮ ಮುಗೇರ, ಉಮಾಮತಿ ಕುರ್ನಾಡು, ಶಮಿತ, ಸರೋಜಿನಿ ಕುರಿಯಾಳ, ಭಾರತೀಯ ಮಹಿಳಾ ಒಕ್ಕೂಟದ ನಾಯಕಿ ಕೇಶವತಿ, ರೇವತಿ ಎಸ್, ಮೋಹಿನಿ, ನಯನ ಕೆ, ಭೋಜ ಕರಂಬೇರ, ಎಂಬಿ.ಬಾಸ್ಕರ, ಯುವಜನ ಫೆಡರೇಶನ್ (ಎಐವೈಎಫ್) ನ ಹರ್ಷಿತ್, ಮೋಹನ ಅರಳ, ಸೀತರಾಮ ವಿಟ್ಲ. ಓ.ಕೃಷ್ಣ, ಮುಂತಾದವರು ವಹಿಸಿದ್ದರು. ಸಿಪಿಐ ಬಂಟ್ವಾಳ ತಾಲೂಕು ಸಹಕಾರ್ಯದರ್ಶಿ ಪ್ರೇಮನಾಥ ಕೆ ಸ್ವಾಗತಿಸಿದರು, ಭಾರತಿ ಪ್ರಶಾಂತ್ ಧನ್ಯವಾವಿತ್ತರು.
Be the first to comment on "ರಾಜ್ಯಪಾಲ ವಜಾ ಒತ್ತಾಯಿಸಿ ಸಿಪಿಐ ನಿಂದ ಬಿ.ಸಿ.ರೋಡಿನಲ್ಲಿ ಪ್ರತಿಭಟನೆ"