ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿಯ ಬಿಸಿರೋಡಿನ ಕೆ.ಎಸ್. ಆರ್.ಟಿ.ಸಿ.ಬಸ್ ನಿಲ್ದಾಣಕ್ಕೆ ಬಸ್ ಗಳು ಪ್ರವೇಶ ಮಾಡುವ ಜಾಗ ಹಾಗೂ ಸರ್ವೀಸ್ ರಸ್ತೆಯಿಂದ ಹೆದ್ದಾರಿಗೆ ತೆರಳುವ ಪ್ರದೇಶದಲ್ಲಿ ಚರಂಡಿಗೆ ಹಾಕಲಾದ ಸಿಮೆಂಟ್ ಸ್ಲಾಬ್ ಗಳು ಮುರಿದು ಬಿದ್ದಿದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ.
ಸರ್ವೀಸ್ ರಸ್ತೆಯಿಂದ ರಾಷ್ಟ್ರೀಯ ಹೆದ್ದಾರಿಗೆ ಸೇರುವ ಹಾಗೂ ಹೆದ್ದಾರಿಯಿಂದ ಬರುವ ಬಸ್ ಗಳು ಕೆ.ಎಸ್. ಆರ್.ಟಿ.ಬಸ್ ನಿಲ್ದಾಣಕ್ಕೆ ಸಂಪರ್ಕಿಸುವ ದಾರಿ ಮಧ್ಯೆ ಮಳೆ ನೀರು ಹರಿದು ಹೋಗುವ ಉದ್ದೇಶದಿಂದ ನಿರ್ಮಿಸಿದ ಚರಂಡಿಯ ಮೇಲೆ ಹಾಕಲಾಗಿರುವ ಸಿಮೆಂಟ್ ಸ್ಲಾಬ್ ಗಳು ಮುರಿದು ಬಿದ್ದ ಪರಿಣಾಮ ವಾಹನಗಳಿಗೆ ತೊಂದರೆಯಾಗಬಹುದು ಎಂಬ ದೃಷ್ಟಿಯಿಂದ ಸ್ಥಳೀಯರು ಎಚ್ಚರಿಕೆಗಾಗಿ ಕಲ್ಲು ಹಾಗೂ ಥರ್ಮೋಕೋಲ್ ಒಂದನ್ನು ಹಾಗಿ ಗಮನ ಸೆಳೆಯುತ್ತಿದ್ದಾರೆ. ಇಲ್ಲಿ ಸ್ಲ್ಯಾಬ್ ಮುರಿದುಬೀಳುವುದು ಆಗಾಗ್ಗೆ ಸಂಭವಿಸುತ್ತಿದ್ದು, ಧಾರಾಕಾರ ಮಳೆ ಬಂದಾಗ ವಾಹನಗಳು ಇದರೊಳಗೆ ಕುಸಿಯುವ ಆತಂಕವೂ ಇದೆ. ಸಂಬಂಧಿಸಿದ ಇಲಾಖೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
Be the first to comment on "ಡೇಂಜರ್!!! ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಪಕ್ಕವೇ ಚರಂಡಿಗೆ ಹಾಕಲಾದ ಸಿಮೆಂಟ್ ಸ್ಲ್ಯಾಬ್ ಮುರಿದುಬಿದ್ದಿದೆ!!"