ಬಂಟ್ವಾಳ: ರಾಮರಾಜ್ಯಕ್ಕಾಗಿ ಸಾಧನೆ ಮಾಡುವುದರ ಜೊತೆಗೆ ಭ್ರಷ್ಟಾಚಾರ, ಅನೈತಿಕತೆ ಮತ್ತು ಅರಾಜಕತೆ ವಿರುದ್ಧ ಹೋರಾಟ ಅನಿವಾರ್ಯ ಎಂದು ಹಿಂದು ಜನಜಾಗೃತಿ ಸಮಿತಿಯ ಡಾ. ಪ್ರಣವ್ ಮಲ್ಯ ಹೇಳಿದರು.
ಬಂಟ್ವಾಳದ ಬಿ.ಸಿ.ರೋಡಿನ ಗೀತಾಂಜಲಿ ಕಲ್ಯಾಣ ಮಂಟಪದಲ್ಲಿ ನಡೆದ ಗುರುಪೂರ್ಣಿಮಾ ಮಹೋತ್ಸವದಲ್ಲಿ ಅವರು ಮಾತನಾಡಿದರು. ನ್ಯಾಯವಾದಿ ಸತೀಶ್ ಈ ಸಂದರ್ಭ ಮಾತನಾಡಿದರು. ಮಂಗಳೂರು, ಉಜಿರೆ ಸೇರಿದಂತೆ ದೇಶದಾದ್ಯಂತ ಸಮಿತಿ ವತಿಯಿಂದ 71 ಕಡೆಗಳಲ್ಲಿ ಗುರುಪೂರ್ಣಿಮಾ ಮಹೋತ್ಸವ ಆಯೋಜಿಸಲಾಗಿತ್ತು. ಬಿ.ಸಿ.ರೋಡಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ. ಬಾಲಕೃಷ್ಣ, ಡಾ ಶಿವಪ್ರಸಾದ್ ಶೆಟ್ಟಿ, ಸುಧಾಕರ ಶೆಟ್ಟಿ, ಸಂದೀಪ್, ಶಿವಶಂಕರ್, ಅನಿಲ್ ಪಂಡಿತ್, ಅಶೋಕ್ ಶೆಟ್ಟಿ ಸರಪಾಡಿ, ಡಾ. ಸತ್ಯಶಂಕರ್, ಗಿರೀಶ್ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು. ಬೆಳಗ್ಗೆ ಶ್ರೀ ವ್ಯಾಸಪೂಜೆ ಮತ್ತು ಭಕ್ತರಾಜ ಮಹಾರಾಜ ಪ್ರತಿಮೆಯ ಪೂಜೆ ನೆರವೇರಿತು.
Be the first to comment on "ಭ್ರಷ್ಟಾಚಾರ, ಅನೈತಿಕತೆ, ಅರಾಜಕತೆ ವಿರುದ್ಧ ಹೋರಾಟ: ಡಾ. ಪ್ರಣವ್ ಮಲ್ಯ"