ಏಳನೇ ವೇತನ ಆಯೋಗ ವರದಿ ಯಥಾವತ್ತು ಜಾರಿ ಸಹಿತ ಹಲವು ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ರಾಜ್ಯ ಸರಕಾರಿ ನೌಕರರ ಸಂಘದ ಬಂಟ್ವಾಳ ತಾಲೂಕು ಪದಾಧಿಕಾರಿಗಳು ಹಾಗೂ ಸದಸ್ಯರು ಶುಕ್ರವಾರ ಸಂಜೆ ತಾಲೂಕು ಆಡಳಿತ ಸೌಧದ ಮುಂಭಾಗ ಸಭೆ ಸೇರಿ ತಹಸೀಲ್ದಾರ್ ಡಿ.ಅರ್ಚನಾ ಭಟ್ ಅವರಿಗೆ ಮನವಿ ಸಲ್ಲಿಸಿದರು.
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಬಂಟ್ವಾಳ ತಾಲೂಕು ಶಾಖೆಯ ವತಿಯಿಂದ ಶುಕ್ರವಾರ ಸಂಜೆ ಬಂಟ್ವಾಳ ತಹಸೀಲ್ದಾರ್ ಅವರಿಗೆ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.
ಗುರುವಾರ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರಿಗೆ ಮನವಿ ಸಲ್ಲಿಸಿದ್ದ ಸಂಘ, ಮುಂದಿನ ವಿಧಾನಸಭೆ ಅಧಿವೇಶನದ ವೇಳೆ ಸರಕಾರಿ ನೌಕರರ ಪರವಾಗಿ ಧ್ವನಿ ಎತ್ತುವಂತೆ ಒತ್ತಾಯಿಸಿದ್ದರು. ತಹಸೀಲ್ದಾರ್ ಡಿ.ಅರ್ಚನಾ ಭಟ್ ಮನವಿ ಸ್ವೀಕರಿಸಿದರು.
ಶುಕ್ರವಾರ ತಾಲೂಕು ಆಡಳಿತ ಸೌಧದ ಮುಂಭಾಗ ಸೇರಿದ ತಾಲೂಕಿನ ರಾಜ್ಯ ಸರಕಾರಿ ನೌಕರರ ಪರವಾಗಿ ಮಾತನಾಡಿದ,ಸಂಘದ ಅಧ್ಯಕ್ಷ ಉಮನಾಥ ರೈ ಮೇರಾವು ರಾಜ್ಯದಾದ್ಯಂತ 2.6 ಲಕ್ಷ ಹುದ್ದೆಗಳು ಖಾಲಿಯಿದ್ದರೂ ಭರ್ತಿ ಮಾಡಿಲ್ಲ, ರಾಜ್ಯದ ಅಭಿವೃದ್ಧಿ ಸೂಚ್ಯಂಕದ ಬೆಳವಣಿಗೆಯಲ್ಲಿ ಹಾಗೂ ಜಿಎಸ್‌ಟಿ ತೆರಿಗೆ ಸಂಗ್ರಹಣೆಯಲ್ಲಿ ಇಡಿ ರಾಜ್ಯಕ್ಕೆ ಮಾದರಿಯಾಗಲು ಸರಕಾರಿ ನೌಕರರ ಪಾತ್ರ ಪ್ರಮುಖವಾದುದು. ಆದುದ್ದರಿಂದ ರಾಜ್ಯ ಏಳನೇ ವೇತನ ಆಯೋಗ ಸರ್ಕಾರಕ್ಕೆ ಸಲ್ಲಿಸಿರುವ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಿ ಸರಕಾರಿ ಆದೇಶ ಹೊಡಿಸಬೇಕು, ಎನ್‌ಪಿಎಸ್ ರದ್ದುಗೊಳಿಸಿ ಹಳೇ ಪಿಂಚಣಿಯೋಜನೆಯನ್ನು ಮರು ಜಾರಿಗೊಳಿಸಬೇಕು, ಕರ್ನಾಟಕ ರಾಜ್ಯ ಆರೋಗ್ಯ ಸಂಜೀವಿನಿ ಯೋಜನೆಯನ್ನು ಸರಕಾರ ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿದರು.
ಅಧ್ಯಕ್ಷ ಉಮಾನಾಥ ರೈ ಮೇರಾವು, ಕಾರ್ಯದರ್ಶಿ ಸಂತೋಷ್ ಕುಮಾರ್ ತುಂಬೆ, ಕೆ.ಎಸ್.ಪಿ.ಎಸ್.ಟಿ.ಎ. ಜಿಲ್ಲಾಧ್ಯಕ್ಷ ಶಿವಪ್ರಸಾದ್ ಶೆಟ್ಟಿ, ಸಂಘದ ಖಜಾಂಚಿ ಬಸಯ್ಯ ಆಲಿಮಟ್ಟಿ,ಉಪಾಧ್ಯಕ್ಷರಾದ ಮಂಜುನಾಥ್ ಕೆ.ಎಚ್, ಶಮಂತ್ ಕುಮಾರ್, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜೊಯಲ್ ಲೋಬೋ, ಪಿಂಚಣಿದಾರರ ಸಂಘದ ಅಧ್ಯಕ್ಷ ಲೋಕನಾಥ ಶೆಟ್ಟಿ, ಕಾರ್ಯದರ್ಶಿ ನೀಲೋಜಿ ರಾವ್, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರಾದ ಇಂದುಶೇಖರ್, ರಾಜೇಂದ್ರ ರೈ, ಅಕ್ಷರ ದಾಸೋಹ ನಿರ್ದೇಶಕರಾದ ನೋಣಯ್ಯ ನಾಯ್ಕ್, ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷರಾದ ಪ್ರೇಮಾ, ಗ್ರಾಮಾಡಳಿತ ಅಧಿಕಾರಿಗಳ ಸಂಘದ ಅಧ್ಯಕ್ಷರಾದ ಅನಿಲ್ ಕೆ. ಪೂಜಾರಿ, ಪ್ರಮುಖರಾದ ರಮೇಶ್ ನಾಯಕ್ ರಾಯಿ, ಪ್ರಾನ್ಸಿಸ್ ಡೇಸ, ಕೃಷ್ಣಮೂರ್ತಿ, ಅಂಬಾಪ್ರಸಾದ್, ಜಗದೀಶ ರೈ, ಶ್ರೀಮತಿ, ಶಶಿಕಾಂತ, ಲ್ಯಾನ್ಸಿ , ಅಜಿತ್, ಬಾಲಕೃಷ್ಣ ರೈ, ಮುರಳೀಕೃಷ್ಣ ರಾವ್, ನವೀನ್ ಪಿ.ಎಸ್. ಮತ್ತಿತರರು ಉಪಸ್ಥಿತರಿದ್ದರು.
Be the first to comment on "ಏಳನೇ ವೇತನ ಆಯೋಗ ವರದಿ ಯಥಾವತ್ತು ಜಾರಿ: ರಾಜ್ಯ ಸರಕಾರಿ ನೌಕರರ ಸಂಘ ಒತ್ತಾಯ"