ಬಂಟ್ವಾಳ: ರೋಟರಿ ಕ್ಲಬ್ ಬಂಟ್ವಾಳದ ನೂತನ ತಂಡ ಜುಲೈ 6ರಂದು ಬಿ.ಸಿ.ರೋಡಿನ ರೋಟರಿ ಸಭಾಂಗಣದಲ್ಲಿ ಅಧಿಕಾರ ಸ್ವೀಕರಿಸಲಿದೆ. ಈ ವಿಷಯವನ್ನು ನಿಯೋಜಿತ ಅಧ್ಯಕ್ಷ ಬೇಬಿ ಕುಂದರ್ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರೀಟರಿ ಜಿಲ್ಲೆಯ ಜಿಲ್ಲಾ ಗವರ್ನರ್ ಅವರ ಸಲಹೆಗಾರರಾದ ಬಿ.ಶೇಖರ ಶೆಟ್ಟಿ ಅವರು ನೂತನ ತಂಡಕ್ಕೆ ಪ್ರಮಾಣವಚನ ಬೋಧಿಸುವರು. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಬಿ.ರಮಾನಾಥ ರೈ, ವಲಯ 4ರ ಸಹಾಯಕ ಗವರ್ನರ್ ಮಹಮ್ಮದ್ ವಳವೂರು, ವಲಯ ಸೇನಾನಿ ಪುಷ್ಪರಾಜ್ ಹೆಗ್ಡೆ ಭಾಗವಹಿಸಲಿದ್ದಾರೆ. ಈ ಸಂದರ್ಭ ಉಪ್ಪುಗುಡ್ಡೆ ಅಂಗನವಾಡಿ ಕೇಂದ್ರಕ್ಕೆ ಅಲ್ಮೇರಾ ಮತ್ತು ಡೆಸ್ಕ್, ಅಜ್ಜಿಬೆಟ್ಟು ಪರಿಸರದ ಬಾಲಕನ ಚಿಕಿತ್ಸೆಗೆ ನೆರವು, ಗೂಡಿನಬಳಿ ನೇತ್ರಾವತಿ ನದಿಯ ರಕ್ಷಕ ತಂಡಕ್ಕೆ ಗೌರವಾರ್ಪಣೆ ನಡೆಯಲಿದೆ ಎಂದು ಬೇಬಿ ಕುಂದರ್ ಹೇಳಿದರು.
ಈ ವರ್ಷದ ಜಿಲ್ಲಾ ಗವರ್ನರ್ ವಿಕ್ರಮ್ ದತ್ತ ನೇತೃತ್ವದ ಒಂಭತ್ತು ಜಿಲ್ಲಾ ಯೋಜನೆಗಳ ಜಾರಿ ಮಾಡುವುದರ ಜೊತೆಗೆ ಬಂಟ್ವಾಳ ಘಟಕದಿಂದಲೂ ಪ್ರಮುಖ ಯೋಜನೆಯನ್ನು ಕೈಗೊಳ್ಳಲಾಗುವುದು ಎಂದು ಅವರು ಮಾಹಿತಿ ನೀಡಿದರು. ಈ ಸಂದರ್ಭ ರೋಟರಿ ಜಿಲ್ಲೆಯ ಆಡಳಿತ ವಿಭಾಗದ ಜಿಲ್ಲಾ ಕಾರ್ಯದರ್ಶಿ ರಿತೇಶ್ ಬಾಳಿಗಾ, ನಿಯೋಜಿತ ಕಾರ್ಯದರ್ಶಿ ಚಂದ್ರಹಾಸ ಗಾಂಭೀರ, ನಿಯೋಜಿತ ಖಜಾಂಚಿ ಶಾಂತರಾಜ್ ಉಪಸ್ಥಿತರಿದ್ದರು.
Be the first to comment on "ರೋಟರಿ ಕ್ಲಬ್ ಬಂಟ್ವಾಳ ಹೊಸ ತಂಡ ಜುಲೈ 6ರಂದು ಪದಗ್ರಹಣ"