ಹೆದ್ದಾರಿ ಹಾಳಾಗಿರುವುದು ಕಲ್ಲಡ್ಕದಲ್ಲಿ ಅಷ್ಟೇ ಅಲ್ಲ. ಹಲವೆಡೆ ಹೀಗಿದೆ. ತುಂಬೆಯಲ್ಲಿ ಭಿನ್ನವೇನಲ್ಲ. ದಶಕದಿಂದ ಈ ಹೆದ್ದಾರಿಯ ಅವಸ್ಥೆ ಹೀಗೆಯೇ..
ಸುರತ್ಕಲ್ -ಬಿಸಿ ರೋಡ್ ರಾಷ್ಟ್ರೀಯ ಹೆದ್ದಾರಿ 73ರ ರಸ್ತೆಯ ಬದಿ ಚರಂಡಿ ವ್ಯವಸ್ಥೆ ಇಲ್ಲದೆ ರಾಷ್ಟ್ರೀಯ ಹೆದ್ದಾರಿ ಕೆರೆಯಂತಾಗಿದೆ. ತುಂಬೆ ಪದವಿಪೂರ್ವ ಕಾಲೇಜಿನ ಸುಮಾರು 50 ಮೀಟರ್ ಮುಂಭಾಗದಲ್ಲಿರುವ ತಿರುವು ರಸ್ತೆ ಸಾಮಾನ್ಯ ಮಳೆಗೆ ಕೆರೆಯಂತಾಗಿದೆ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೆದ್ದಾರಿಯಲ್ಲಿ ಚಲಿಸುವ ಲಘು ಮತ್ತು ಘನವಾಹನಗಳಿಗೆ ಹೊಂಡಗಳು ಕಾಣಿಸದೆ ಹಲವು ಅಪಘಾತಗಳಿಗೆ ಕಾರಣವಾಗಿದೆ. ಅಲ್ಲದೆ ಪಾದಚಾರಿಗಳು, ಪಕ್ಕದ ಶಾಲಾ – ಕಾಲೇಜುಗಳ ವಿದ್ಯಾರ್ಥಿಗಳಿಗೆ ನಡೆದುಕೊಂಡು ಹೋಗಲು ಅಸಾಧ್ಯವಾಗಿದೆ. ಇತ್ತೀಚೆಗೆ ಗ್ಯಾಸ್ ಟ್ಯಾಂಕರೊಂದು ಪಲ್ಟಿ ಆಗಿ ಹೆಚ್ಚಿನ ದುರಂತ ಸಂಭವಿಸದಿರುವುದು ಪುಣ್ಯ ಅಂತಲೇ ಹೇಳಬಹುದು. ರಾಷ್ಟ್ರೀಯ ಹೆದ್ದಾರಿ ಅಥವಾ ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಈ ಬಗ್ಗೆ ಕಾರ್ಯಪ್ರವೃತ್ತ ರಾಗಬೇಕಾಗಿ ಕೋರುತ್ತಿದ್ದೇವೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಅಡ್ಡ ಸುರಂಗ ಕೊರೆಯುವ ಪ್ರಶಸ್ತಿ ವಿಜೇತ ನಾಯ್ಕರ ಸಲಹೆ ಪಡೆಯಲಿ.