ಸಜಿಪಮುನ್ನೂರು ಗ್ರಾಮ ಪಂಚಾಯತ್ ನ ಅರಿವು ಕೇಂದ್ರದಲ್ಲಿ ಮಂಗಳವಾರ ಅಂತಾರಾಷ್ಟ್ರೀಯ ಆಟದ ದಿನವನ್ನು ಆಚರಿಸಲಾಯಿತು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸುತ್ತೋಲೆಯಂತೆ ಕಾರ್ಯಕ್ರಮ ಆಯೋಜನೆಗೊಳಿಸಲಾಗಿತ್ತು.
ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷೆ ಅನಿತಾ ವಹಿಸಿದ್ದರು. ಪಂಚಾಯತ್ ಅಭಿವೃದ್ದಿ ಅಧಿಕಾರಿ ಲಕ್ಷ್ಮಣ್ ಎಚ್.ಕೆ ದಿನದ ಉದ್ದೇಶ, ಇದು ಯಾವ ರೀತಿ ಮಕ್ಕಳ ದೈಹಿಕ, ಮಾನಸಿಕ ವಿಕಾಸಕ್ಕೆ ಸಹಕಾರಿಯಾಗಿದೆ ಎಂಬ ಬಗ್ಗೆ ಮಾಹಿತಿ ನೀಡಿದರು.ಕಾರ್ಯಕ್ರಮದ ಅಂಗವಾಗಿ ಸಜಿಪಮುನ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳಿಗೆ ಒಳಾಂಗಣ ಆಟಗಳಾದ ಚೆಸ್, ಲೂಡೋ, ಕೇರಂ, ಫಜಲ್, ಕ್ಯೂಬ್ ಇತ್ಯಾದಿ ಆಟಗಳನ್ನು ಆಡಿಸಲಾಯಿತು. ಗ್ರಾಮ ಪಂಚಾಯತ್ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ಚಂದ್ರಕಲಾ, ಸದಸ್ಯ ಸಂದೀಪ್ ಕುಮಾರ್ ಹಾಗೂ ವಿವಿದ ಶಾಲೆಗಳ ಮುಖ್ಯೋಪಾಧ್ಯಾಯರು, ಶಿಕ್ಷಕರು ಉಪಸ್ಥಿತರಿದ್ದರು. ಅರಿವು ಕೇಂದ್ರದ ಜಯಶ್ರಿ ವಂದಿಸಿದರು. ಗ್ರಾಮ ಪಂಚಾಯತ್ ಸಿಬ್ಬಂದಿ ಮಹಮ್ಮದ್ ಹಾರಿಸ್, ನಳಿನಿ ಸಹಕರಿಸಿದರು.
Be the first to comment on "ಸಜೀಪಮುನ್ನೂರು ಗ್ರಾಪಂನಲ್ಲಿ ಅಂತಾರಾಷ್ಟ್ರೀಯ ಆಟದ ದಿನಾಚರಣೆ"