ಬರೆಹ: ಯಾದವ ಕುಲಾಲ್ ಅಗ್ರಬೈಲು
ಕಂಪೌಂಡ್ ಕಲ್ಲುಗಳೇ ಹೇಳ್ತಿವೆ… ನಾವು ಯಾವ ಕ್ಷಣವಾದ್ರೂ ಬೀಳ್ಬಹುದು ಅಂತ!! ಬಿ.ಸಿ.ರೋಡ್ ನ ಬಿ.ಮೂಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಗೇಟು-ಕಂಪೌಂಡ್ ದುರಸ್ತಿಗೆ ಕಾಯುತ್ತಿದೆ
ಈ ಕಂಪೌಂಡ್ ಚಿತ್ರಗಳೇ ಹೇಳ್ತವೆ. ಗಟ್ಟಿ ಇದೆಯೇ, ಇಲ್ಲವೇ? ಯಾವ ಕ್ಷಣದಲ್ಲಾದರೂ ಬೀಳುವಂತಿದೆ ಎಂಬಂತಿರುವ ಈ ಆವರಣಗೋಡೆ ಇರುವುದು ಬಿ.ಸಿ.ರೋಡ್ ಅಜ್ಜಿಬೆಟ್ಟಿನಲ್ಲಿರುವ ಬಿ.ಮೂಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ.
ಈಗಾಗಲೇ ಶಾಲಾಭಿವೃದ್ಧಿ ಸಮಿತಿ ದಾನಿಗಳ ನೆರವಿನ ಜೊತೆಗೆ ಸಾಕಷ್ಟು ಕಾರ್ಯಯೋಜನೆಗಳನ್ನು ಕೈಗೊಂಡಿದ್ದು, ಮಕ್ಕಳಿಗೆ ಉಚಿತ ಕಂಪ್ಯೂಟರ್ ಶಿಕ್ಷಣವನ್ನು ಒಂದನೇ ತರಗತಿಯಿಂದಲೇ ಆರಂಭಿಸುತ್ತಿದೆ. ಇಷ್ಟೆಲ್ಲಾ ದಾನಿಗಳ ನೆರವು, ಶಾಲಾಭಿವೃದ್ಧಿ ಸಮಿತಿ, ಶಿಕ್ಷಕರ ಪರಿಶ್ರಮದಿಂದ ನಡೆಯುತ್ತಾ ಇರುವ ಹೊತ್ತಿನಲ್ಲೇ, ಶಾಲೆ ಪ್ರಗತಿಯ ಹಾದಿಯಲ್ಲಿ ಸಾಗುವ ಸಂದರ್ಭ, ಸಂಬಂಧಪಟ್ಟ ಇಲಾಖೆಗಳು ಕಂಪೌಂಡ್ ದುರಸ್ತಿ ಮಾಡಲು ಮೀನ ಮೇಷ ಮಾಡುವುದು ಸರಿಯಲ್ಲ.
ಅಲ್ಲದೆ, ಮಕ್ಕಳ ಶೌಚಾಲಯವೂ ಶಾಲೆಯ ಕಟ್ಟಡಕ್ಕಿಂತ ದೂರ ಇದ್ದು, ಇದರ ಸನಿಹವೇ ಕಂಪೌಂಡ್ ಇದೆ. ಹಾಗೆ ನೋಡಿದರೆ, ಶೌಚಾಲಯವೂ ಅಷ್ಟೊಂದು ಸಮಪರ್ಕ ವ್ಯವಸ್ಥೆಯಲ್ಲಿಲ್ಲ. ಸಣ್ಣ ಮಕ್ಕಳಿಗೆ ಪ್ರತ್ಯೇಕ ಶೌಚಾಲಯವೂ ಬೇಕು ಎಂಬುದು ಬೇಡಿಕೆ ಪಟ್ಟಿಯಲ್ಲಿದೆ.
ಮಳೆಗಾಲದಲ್ಲಿ ಮಕ್ಕಳು ಈ ಶೌಚಾಲಯಕ್ಕೆ ತೆರಳಲು ಪ್ರಯಾಸಪಡುತ್ತಿದ್ದು, ಶಾಲಾ ಕಟ್ಟಡದ ಸನಿಹವೇ ಕಿರಿಯ ಮಕ್ಕಳಿಗೆ ಪ್ರತ್ಯೇಕ ಶೌಚಾಲಯದ ಅವಶ್ಯಕತೆ ಇದೆ. ಅಷ್ಟೇ ಅಲ್ಲದೇ ಶಾಲೆಯ ಬಿಸಿಯೂಟದ ಕೊಠಡಿಯ ಕೆಳಗಿನ ಭಾಗವೂ ಅಪಾಯಕಾರಿಯಾಗಿದ್ದು, ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಈ ಕುರಿತು ಸಂಬಂಧಪಟ್ಟ ಇಲಾಖೆ ಗಮನಹರಿಸಬೇಕು ಎಂದು ಶಾಲಾಭಿವೃದ್ಧಿ ಸಮಿತಿ, ಶಿಕ್ಷಕರು, ಹಳೇ ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ
Be the first to comment on "GOVT SCHOOL PROBLEM: ಬಿ.ಮೂಡ ಅಜ್ಜಿಬೆಟ್ಟು ಶಾಲೆಯ ಕಂಪೌಂಡ್ ಈಗಲೋ ಆಗಲೋ ಬೀಳುವಂತಿದೆ, ದುರಸ್ತಿ ಯಾವಾಗ?"