ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ 106341 ಮತಗಳ ಅಂತರದಲ್ಲಿ ಮುನ್ನಡೆಯಲ್ಲಿದ್ದಾರೆ. ಕಾಗೇರಿ ಅವರಿಗೆ 2,15,686 ಮತಗಳು ದೊರಕಿವೆ. ಕಾಂಗ್ರೆಸ್ ಪಕ್ಷದ ಡಾ. ಅಂಜಲಿ ನಿಂಬಾಳ್ಕರ್ 1,09,345 ಮತ ಪಡೆದಿದ್ದಾರೆ. ಗಣಪತಿ ಹೆಗಡೆ 1317, ರಾಜಶೇಖರ ಶಂಕರ ಹಿಂಡಲಗಿ 1550, ನಿರಂಜನ ಉದಯ ಶಿರದೇಸಾಯಿ 1260, ನಾಗರಾಜ ಶಿರಾಲಿ 826, ಚಿದಾನಂದ 469, ಕೆ.ಪಿ.ಪಾಟಿಲ 273, ಕೃಷ್ಣ ಬಳೆಗಾರ 269, ಅರವಿಂದ ಗೌಡ 224, ವಿನಾಯಕ ನಾಯಕ 395,.ಅವಿನಾಶ್ ನಾರಾಯಣ 215, ನೋಟಾ 2971
ದಕ್ಷಿಣ ಕನ್ನಡದಲ್ಲಿ ನಾಲ್ಕನೇ ಸುತ್ತಿನ ಮತ ಎಣಿಕೆ ಮುಕ್ತಾಯಗೊಂಡಾಗ ಬ್ರಿಜೇಶ್ ಚೌಟ (ಬಿಜೆಪಿ) 1,71,604 ಮತ ಗಳಿಸಿದ್ದರೆ, ಪದ್ಮರಾಜ್ ಆರ್ ಪೂಜಾರಿ (ಕಾಂಗ್ರೆಸ್) 1,38,397 ಮತ ಗಳಿಸಿದ್ದಾರೆ. ಬೃಜೇಶ್ ಚೌಟ 33,217 ಮತಗಳ ಲೀಡ್ ನಲ್ಲಿದ್ದಾರೆ. ನೋಟಾ 5,409 ಚಲಾವಣೆಯಾಗಿದೆ.
ಇನ್ನು ಉಡುಪಿಯಲ್ಲಿ ಕೋಟ ಶ್ರೀನಿವಾಸ ಪೂಜಾರಿ (ಬಿಜೆಪಿ) 1,06,233 ಮತ ಗಳಿಸಿ 41,714 ಮತಗಳ ಅಂತರದಿಂದ ಲೀಡ್ ನಲ್ಲಿದ್ದಾರೆ. ಜಯಪ್ರಕಾಶ ಹೆಗ್ಡೆ (ಕಾಂಗ್ರೆಸ್) 64,519 ಮತ ಗಳಿಸಿದ್ದಾರೆ.
Be the first to comment on "ಕರಾವಳಿ ಜಿಲ್ಲೆಗಳಲ್ಲಿ ಬಿಜೆಪಿ ಮುನ್ನಡೆ, 1 ಲಕ್ಷ ಮತಗಳ ಅಂತರದಿಂದ ಮುಂದಿರುವ ಕಾಗೇರಿ"