ಮಂಗಳೂರಿನ ಕೃಷಿ ವಿಜ್ಞಾನ ಕೇಂದ್ರವು ಬಂಟ್ವಾಳ ತಾಲೂಕಿನ ಕಾವಳಪಡೂರು ಗ್ರಾಮದ ಪಚ್ಚಾಜೆಯಲ್ಲಿ ಮುಂಚೂಣಿ ಪ್ರಾತ್ಯಕ್ಷಿಕೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಹ್ಯಾದ್ರಿ ಕೆಂಪುಮುಕ್ತಿ ಭತ್ತದ ತಳಿಯ ಪರಿಚಯ ಕಾರ್ಯಕ್ರಮದ ಅನುಷ್ಠಾನ ಪೂರ್ವಭಾವಿಯಾಗಿ ಜೂನ್3 ರಂದು ಪ್ರಗತಿಪರ ಕೃಷಿಕ ರಾಜರಾಮ್ ನಾಯಕ್ ಇವರ ಮನೆ ವಠಾರದಲ್ಲಿ ’ ಭತ್ತದ ಬೆಳೆಯ ಸುಧಾರಿತ ಬೇಸಾಯ ಕ್ರಮಗಳು ಎಂಬ ವಿಷಯದ ಕುರಿತು ತರಬೇತಿ ಕಾರ್ಯಕಮವನ್ನು ಏರ್ಪಡಿಸಿತ್ತು.
ಕೃಷಿ ವಿಜ್ಞಾನ ಕೇಂದ್ರದ ಬೇಸಾಯ ಶಾಸ್ತ್ರತಜ್ಞರಾದ ಹರೀಶ ಶೆಣೈರವರು ಜಿಲ್ಲೆಯಲ್ಲಿ ಭತ್ತದ ಕೃಷಿಯ ಕುರಿತು ಸಮಗ್ರ ಚಿತ್ರಣವನ್ನು ನೀಡಿ ಭತ್ತದಲ್ಲಿ ಅಧಿಕ ಇಳುವರಿ ಪಡೆಯಲು ಅನುಸರಿಸಬೇಕಾದ ಬೇಸಾಯ ಕ್ರಮಗಳ ಕುರಿತು ವಿಸ್ಕತ ಮಾಹಿತಿಯನ್ನು ನೀಡಿ ತರಬೇತಿಯನ್ನು ನಡೆಸಿಕೊಟ್ಟರು.
ಈ ಕಾರ್ಯಕ್ರಮದಲ್ಲಿ ಗ್ರಾಮದ ಪ್ರಗತಿಪರ ಕೃಷಿಕರಾದ ಉಮೇಶ್ ಪೂಜಾರಿ, ಬೋಜ ಪೂಜಾರಿ, ಶ್ರೀದರ ಅನ್ಸಲ್ ಪಿಂಟೋ ಸೇರಿದಂತೆ ಸುಮಾರು ೧೦ ಜನ ರೈತರು ಭಾಗವಹಿಸಿದರು.
Be the first to comment on "ಭತ್ತದ ಕೃಷಿ – ಬಂಟ್ವಾಳ ತಾಲೂಕಿನಲ್ಲಿ ರೈತರಿಗೆ ತರಬೇತಿ"