ಬಂಟ್ವಾಳ: ನರಿಕೊಂಬು ಗ್ರಾಮದ ಬರ್ಸಗುರಿ ಶ್ರೀ ರಾಜಗುಳಿಗ ಬನ ಜೀರ್ಣೋದ್ಧಾರ ಸಮಿತಿಯ ವತಿಯಿಂದ ಕ್ಷೇತ್ರ ಜೀರ್ಣೋದ್ಧಾರದ ಹಿನ್ನೆಲೆಯಲ್ಲಿ ಬಾಲಾಲಯ ಪ್ರತಿಷ್ಠಾ ಕಾರ್ಯಕ್ರಮ ವೇ|ಮೂ| ವಾಸುದೇವ ಕಾರಂತ ನರಿಕೊಂಬು ಅವರ ನೇತೃತ್ವದಲ್ಲಿ ನೆರವೇರಿತು.
ಬಳಿಕ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಜಗನ್ನಾಥ ಬಂಗೇರ ನಿರ್ಮಲ್ ಅವರು ವಿಜ್ಞಾಪನಾ ಪತ್ರ ಬಿಡುಗಡೆ ಮಾಡಿದರು. ಕಾರ್ಯಕ್ರಮದಲ್ಲಿ ಗ್ರಾಮದ ನಾಲ್ಕುಗುತ್ತಿನ ಮುಖ್ಯಸ್ಥರು, ಸ್ಥಳದಾನಿಗಳು, ಸೇವಾ ಸಮಿತಿಯ ಅಧ್ಯಕ್ಷರು, ಗ್ರಾ.ಪಂ.ಅಧ್ಯಕ್ಷ ಸಂತೋಷ್‌ಕುಮಾರ್, ಉಪಾಧ್ಯಕ್ಷೆ ಮೋಹಿನಿ, ಗ್ರಾ.ಪಂ.ಸದಸ್ಯರು, ಜೀರ್ಣೋದ್ಧಾರ, ಸೇವಾ ಸಮಿತಿ, ಮಹಿಳಾ ಸಮಿತಿಯ ಪದಾಧಿಕಾರಿಗಳು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯ ಯೋಜನೆಯ ಸೇವಾಪ್ರತಿನಿಧಿಗಳು, ಭಕ್ತರು ಉಪಸ್ಥಿತರಿದ್ದರು. ಪುರುಷೋತ್ತಮ ಸಾಲ್ಯಾನ್ ಸ್ವಾಗತಿಸಿ, ಪುರುಷೋತ್ತಮ ಬಂಗೇರ ನಾಟಿ ವಂದಿಸಿದರು.
Be the first to comment on "ಬರ್ಸಗುರಿ ಶ್ರೀ ರಾಜಗುಳಿಗ ಬನ ಜೀರ್ಣೋದ್ಧಾರ: ಬಾಲಾಲಯ ಪ್ರತಿಷ್ಠೆ"