ಕಥಾಬಿಂದು ಪ್ರಕಾಶನ ಮಂಗಳೂರು ಪಿ.ವಿ.ಪ್ರದೀಪ್ ಕುಮಾರ್ ಸಾರಥ್ಯ ದಲ್ಲಿ ಸಾಹಿತ್ಯ ಸಂಭ್ರಮ 2024 ದಿನಾಂಕ ಮೇ 26ರಂದು ಮುಡಿಪುವಿನ ಭಾರತಿ ಶಾಲೆಯಲ್ಲಿ ನಡೆಯಿತು.
ಈ ಸಂದರ್ಭ ಕಬಕದ ಸರಕಾರಿ ಪ್ರೌಢಶಾಲೆ ಶಿಕ್ಷಕಿ ಬೊಳುವಾರು ನಿವಾಸಿ ಶಾಂತಾ ಪುತ್ತೂರು ಅವರಿಗೆ ಸೌರಭ ರತ್ನ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶಾಂತಾ ಪುತ್ತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಂಬಳಬೆಟ್ಟು ಹಾಗೂ ಸರಕಾರಿ ಪ್ರೌಢಶಾಲೆ ಕನ್ಯಾನದಲ್ಲಿ ಸೇವೆ ಸಲ್ಲಿಸಿದ್ದು ಪ್ರಸ್ತುತ ಕಬಕ ಪ್ರೌಢಶಾಲೆ ಯಲ್ಲಿ ಕನ್ನಡ ಭಾಷಾ ಶಿಕ್ಷಕಿ ಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಯುಗಪುರುಷ ಸಂಪಾದಕರಾದ ಭುವನಾಭಿರಾಮ ಉಡುಪರು ಕಾರ್ಯಕ್ರಮ ಉದ್ಘಾಟಿಸಿದರು.ಧರ್ಮದರ್ಶಿಡಾ॥ ಹರಿಕೃಷ್ಣ ಪುನರೂರು ಮಾಜಿ ರಾಜ್ಯಾಧ್ಯಕ್ಷ ಕ.ಸಾ.ಪ.ಬೆಂಗಳೂರು ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಬಿ.ಸತ್ಯವತಿ ಎಸ್ ಭಟ್ ಕೊಳಚಪ್ಪು ಪಿ.ವಿ.ಪ್ರದೀಪ್ ಕುಮಾರ್ ಕಥಾಬಿಂದು ಪ್ರಕಾಶನ ಪ್ರೊ.ವಿ.ಕೃಷ್ಣಮೂರ್ತಿ ಪ್ರಾಂಶುಪಾಲರು ಗೋವಿಂದದಾಸ್ ಕಾಲೇಜು ಸುರತ್ಕಲ್, ಹಿರಿಯ ಸಾಹಿತಿ ಗಳಾದ ಜಯಾನಂದ ಪೆರಾಜೆ,ಎನ್.ಸುಬ್ರಾಯ ಭಟ್ ಮಂಗಳೂರು,ಕೊಡಕ್ಕಲ್ಲು ಸುಬ್ರಹ್ಮಣ್ಯ ಭಟ್ ಸಂಚಾಲಕರು ಶ್ರೀ ಭಾರತಿ ಶಾಲೆ ಮುಡಿಪು,ಶ್ರೀ ನಾಟಕ ಭಾರ್ಗವ ಕೆಂಪರಾಜು ನಿವೃತ್ತ ಉಪನ್ಯಾಸಕರು ಮೈಸೂರು,ಅನಂತ ಎಮ್.ತಾಮನ್ಕರ್, ನಿವೃತ್ತ ಸಿಂಡಿಕೇಟ್ ಬ್ಯಾಂಕ್ ಉದ್ಯೋಗಿ ಉಪಸ್ಥಿತರಿದ್ದರು.ನಂತರ ಶಿಕ್ಷಣ ತಜ್ಞರಾದ ಪಿ.ವಿ.ಕುಳಮರ್ವ ರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು.ಕವಯಿತ್ರಿ ಅಪೂರ್ವ ಕಾರಂತ್ ಕಾರ್ಯಕ್ರಮ ನಿರೂಪಿಸಿದರು.
Be the first to comment on "ಶಾಂತಾ ಪುತ್ತೂರುರವರಿಗೆ ಸೌರಭ ರತ್ನ ರಾಜ್ಯ ಪ್ರಶಸ್ತಿ"