ಸಾಹಿತ್ಯಕ ಮತ್ತು ಸಾಂಸ್ಕೃತಿಕ ವೇದಿಕೆಯಾದ ‘ಅಭಿರುಚಿ’ ಜೋಡುಮಾರ್ಗ ವತಿಯಿಂದ ಬಿ.ಸಿ.ರೋಡಿನ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಭಾನುವಾರ ಮೇ.26ರಂದು ಸಂಜೆ 3.30ಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಚಿಂತಕ ಮತ್ತು ವಾಗ್ಮಿ ಲಕ್ಷ್ಮೀಶ ತೋಳ್ಪಾಡಿ ಅವರೊಂದಿಗೆ ಒಂದು ಸಂಜೆ ಕಾರ್ಯಕ್ರಮ ನಡೆಯಲಿದೆ.
ಈ ಸಂದರ್ಭ ಅಭಿನಂದನಾ ಕಾರ್ಯಕ್ರಮ, ಸಂವಾದ ಹಾಗೂ ಯಕ್ಷಗಾನ ಪ್ರದರ್ಶನಗಳು ಏರ್ಪಡಲಿವೆ ಎಂದು ಪ್ರಕಟಣೆ ತಿಳಿಸಿದೆ. ಪ್ರಶಸ್ತಿ ಪುರಸ್ಕೃತ ಕೃತಿ ಮಹಾಭಾರತ ಅನುಸಂಧಾನದ ಭಾರತ ಯಾತ್ರೆ ಕುರಿತಾಗಿ ಸಂವಾದ ಕಾರ್ಯಕ್ರಮ ನಡೆಯಲಿದೆ. ಕೃತಿಯ ಬಗ್ಗೆ ಅವಲೋಕನವನ್ನು ಲೇಖಕ ಪೃಥ್ವಿರಾಜ್ ಕವತ್ತಾರ್ ನಡೆಸಿಕೊಡಲಿದ್ದಾರೆ. ಬಿ.ವಿ.ಕಾರಂತ ರಂಗಭೂಮಿಕಾ ಟ್ರಸ್ಟ್ ಅಧ್ಯಕ್ಷ ನ್ಯಾಯವಾದಿ ಕಜೆ ರಾಮಚಂದ್ರ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ. ಬಳಿಕ ಉಡುಪಿಯ ಶಾಸ್ತ್ರೀಯ ಯಕ್ಷಮೇಳದವರಿಂದ ಗುರುರಾಜ ಮಾರ್ಪಳ್ಳಿ ನಿರ್ದೇಶನದಲ್ಲಿ ವಿಶಿಷ್ಟ ಬಡಗುತಿಟ್ಟು ಯಕ್ಷಗಾನ ಪ್ರಯೋಗ ಋತುಪರ್ಣ ಯಕ್ಷಗಾನ ಪ್ರಯೋಗ ಪ್ರದರ್ಶನಗೊಳ್ಳಲಿದೆ ಎಂದು ಅಭಿರುಚಿಯ ಪ್ರಕಟಣೆ ತಿಳಿಸಿದೆ.
Be the first to comment on "ಲಕ್ಷ್ಮೀಶ ತೋಳ್ಪಾಡಿಯವರೊಂದಿಗೆ ಒಂದು ಸಂಜೆ: ಬಿ.ಸಿ.ರೋಡ್ ನಲ್ಲಿ ‘ಅಭಿರುಚಿ’ ಜೋಡುಮಾರ್ಗದ ಕಾರ್ಯಕ್ರಮದ ವಿವರಗಳು ಇಲ್ಲಿವೆ"