ಕಡೇಶಿವಾಲಯದಲ್ಲಿರುವ ಮಹತೋಭಾರ ಚಿಂತಾಮಣಿ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯದಲ್ಲಿ ಜಾತ್ರಾ ಮಹೋತ್ಸವ ಆರಂಭಗೊಂಡಿದ್ದು, ಏಪ್ರಿಲ್ 23ರವರೆಗೆ ನಡೆಯಲಿದೆ. ಮಂಗಳವಾರ ಧ್ವಜಾರೋಹಣಗೊಂಡು ಜಾತ್ರೋತ್ಸವ ಆರಂಭಗೊಂಡಿದೆ. ಬ್ರಹ್ಮಶ್ರೀ ಉಚ್ಚಿಲಂತಾಯ ನೀಲೇಶ್ವರ ಪದ್ಮನಾಭ ತಂತ್ರಿಗಳ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ನಡೆಯುತ್ತಿದೆ.
ಏಪ್ರಿಲ್ 15ರವರೆಗೆ ನಿತ್ಯಬಲಿ, ಮಹಾಪೂಜೆ ,ಉತ್ಸವ, 16ರಂದು ಬೆಳಗ್ಗೆ ಗಂಟೆ 8 ರಿಂದ ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ, ಮಧ್ಯಾಹ್ನ ಮಹಾಪೂಜೆ, ರಾತ್ರಿ ಗಂಟೆ 6ರಿಂದ ಉತ್ಸವ, ಬೀದಿ ಸವಾರಿ, ಕಟ್ಟೆಪೂಜೆ,17ರಂದು ಮಧ್ಯಾಹ್ನ ಮಹಾಪೂಜೆ ರಾತ್ರಿ ಉತ್ಸವ, ಕಟ್ಟೆಪೂಜೆ, ತಾ.18ರಂದು ಮಧ್ಯಾಹ್ನ ಮಹಾಪೂಜೆ ರಾತ್ರಿ ಚಂದ್ರಮಂಡಲ ಉತ್ಸವ, ಅನ್ನಸಂತರ್ಪಣೆ,ತಾ.19ರಂದು (ಏಕಾದಶಿ) ಉತ್ಸವ, ಬೀದಿ ಸವಾರಿ, 20ರಂದು ಮಧ್ಯಾಹ್ನ ಪಲ್ಲಪೂಜೆ, ಮಹಾಪೂಜೆ ರಾತ್ರಿ ಮಹಾರಥೋತ್ಸವ, ಸುಡುಮದ್ದು ಪ್ರದರ್ಶನ, ಮಹಾಪೂಜೆ, ಕವಾಟ ಬಂಧನ, ಮಹಾಅನ್ನಸಂತರ್ಪಣೆ, 21ರಂದು ಬೆಳಗ್ಗೆ ಕವಾಟೋದ್ಘಾಟನೆ ತುಲಾಭಾರ ಸೇವೆಗಳು, ಮಧ್ಯಾಹ್ನ ಮಹಾಪೂಜೆ, ಸಂಜೆ ಗಂಟೆ 6ರಿಂದ ಉತ್ಸವ, ಕಟ್ಟೆಪೂಜೆ, ಅನ್ನಸಂತರ್ಪಣೆ, ಅವಭೃತ ಸ್ನಾನ, ಧ್ವಜಾವರೋಹಣ ನಡೆಯಲಿದೆ. 22ರಂದು ರಾತ್ರಿ ಮಹಾಪೂಜೆ, ಶ್ರೀ ನಾರಾಳ್ತಾಯ ಮತ್ತು ಇತರ ದೈವಗಳ ನೇಮೋತ್ಸವ, ಅನ್ನಸಂತರ್ಪಣೆ. 23ರಂದು ಮಧ್ಯಾಹ್ನ ಸಂಪ್ರೋಕ್ಷಣೆ, ಮಹಾಪೂಜೆ, ರಾತ್ರಿ ಗಂಟೆ 8ಕ್ಕೆ ಮಂಗಲ, ಮಂತ್ರಾಕ್ಷತೆ ಇರಲಿದೆ. ಪ್ರತಿ ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ
Be the first to comment on "ಕಡೇಶಿವಾಲಯ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೆ ಆರಂಭ"