ಬಂಟ್ವಾಳ ಬಡ್ಡಕಟ್ಟೆಯ ರಾಯರಚಾವಡಿಯಲ್ಲಿರುವ ಶ್ರೀ ನರಸಿಂಹ ಮುಖ್ಯಪ್ರಾಣ ದೇವಸ್ಥಾನದಲ್ಲಿ ಹನುಮಜಯಂತಿ ವಾರ್ಷಿಕ ಉತ್ಸವ ಏಪ್ರಿಲ್ 23ರಂದು ನಡೆಯಲಿದೆ ಎಂದು ಅನುವಂಶಿಕ ಕ್ಷೇತ್ರಾಧಿಕಾರಿ ಶೋಭಾ ರಾಮಪ್ರಸಾದ್ ಮತ್ತು ಉತ್ಸವ ಸಮಿತಿ ಅಧ್ಯಕ್ಷರಾದ ವಿದ್ಯಾ ತಿಳಿಸಿದ್ದಾರೆ.
ಬೆಳಗ್ಗೆ 8ರಿಂದ ನಾನಾ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಳ್ಳಲಿದ್ದು, 10ಗಂಟೆಯಿಂದ ಭಕ್ತಿ ರಸಮಂಜರಿ, ಬಳಿಕ ವಿಶೇಷ ಪೂಜೆ, ಮಹಾಪೂಜೆ ನಡೆಯುವುದು. 12.30ಕ್ಕೆ ದೇವರ ಬಲಿ ಹೊರಟು ಪಲ್ಲಪೂಜೆ, ಪ್ರಸಾದ ವಿತರಣೆ ಅನ್ನಸಂತರ್ಪಣೆ ಇರಲಿದೆ. ಸಂಜೆ 6ರಿಂದ ರಂಗಪೂಜೆ, ದೀಪಾರಾಧನೆ, ದೇವರ ಬಲಿ ಉತ್ಸವ, ದರ್ಶನ ಬಲಿ ಇರಲಿದೆ. ರಾತ್ರಿ 8.30ಕ್ಕೆ ದೇವರು ವಸಂತಕಟ್ಟೆಗೆ ಹೊರಡುವುದು, ಅಷ್ಟಾವಧಾನ ಸೇವೆ ನಡೆಯಲಿದೆ. ಬಳಿಕ ವಸಂತ ಕಟ್ಟೆ ಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ಓಕುಳಿ ಉತ್ಸವ ಜಳಕದ ಬಲಿ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ರಾತ್ರಿ ನಡೆಯಲಿದ್ದು, 25ರಂದು ಕಲಶಾಭಿಷೇಕ, ವಾಯುಸ್ತುತಿ, ಪುನಶ್ಚರಣ ಹೋಮ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
Be the first to comment on "ಬಡ್ಡಕಟ್ಟೆ ಶ್ರೀ ನರಸಿಂಹ ಮುಖ್ಯಪ್ರಾಣ ದೇವಸ್ಥಾನದಲ್ಲಿ 23ರಂದು ಹನುಮಜಯಂತಿ ವಾರ್ಷಿಕ ಉತ್ಸವ"