ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ನೇತೃತ್ವದಲ್ಲಿ ಬಂಟ್ವಾಳ ಕ್ಷೇತ್ರದ ಹಲವೆಡೆ ಮತದಾರರ ಸಂಪರ್ಕ ಅಭಿಯಾನ ನಡೆಯಿತು. ರಾಯಿ, ಕರೋಪಾಡಿಗಳಲ್ಲಿ ಶಾಸಕರು ಮತದಾರರ ಮನೆಗಳಿಗೆ ಭೇಟಿ ನೀಡಿ ಬಿಜೆಪಿ ಪರ ಮತ ಯಾಚಿಸಿದರು.
ಬಿಜೆಪಿ ವತಿಯಿಂದ ರಾಯಿ ಗ್ರಾಮದಲ್ಲಿ ಮನೆ ಸಂಪರ್ಕ ಅಭಿಯಾನ ನಡೆಯಿತು. ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹಾಗೂ ಜಿ.ಪಂ.ನಿಕಟಪೂರ್ವ ಸದಸ್ಯ ಎಂ.ತುಂಗಪ್ಪ ಬಂಗೇರ ಅವರು ಶರತ್ ಕುಮಾರ್ ಕೊಯಿಲ ಅವರ ಮನೆಯಲ್ಲಿ ಅಭಿಯಾನಕ್ಕೆ ಚಾಲನೆ ನೀಡಿದರು.
ರಾಯಿ ಗ್ರಾಮಪಂಚಾಯತ್ ಅಧ್ಯಕ್ಷ ಸಂತೋಷ್ ಕುಮಾರ್ ರಾಯಿಬೆಟ್ಟು, ಉಪಾಧ್ಯಕ್ಷೆ ಗುಣಾವತಿ, ಸದಸ್ಯರಾದ ಸಂತೋಷ್ ಗೌಡ,ಉಷಾ ಸಂತೋಷ್, ಪ್ರಮುಖರಾದ ಹರೀಶ್ ಆಚಾರ್ಯ ರಾಯಿ, ಮಧುಕರ ಬಂಗೇರ, ವಸಂತ ಗೌಡ ಮುದ್ದಾಜೆ, ಚಂದ್ರಶೇಖರ್ ಗೌಡ ಕಾರಂಬಡೆ, ಶಿವಪ್ರಸಾದ್, ನವೀನ್ ಸಾಲ್ಕೋಡಿ, ಚೇತನ್ ಕೊಯಿಲ, ದಿನೇಶ್ ಸುವರ್ಣ ರಾಯಿ ಮತ್ತಿತರರು ಹಾಜರಿದ್ದರು.
Be the first to comment on "ಲೋಕಸಭೆ ಚುನಾವಣೆ 2024: ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ನೇತೃತ್ವದಲ್ಲಿ ಮತದಾರರ ಸಂಪರ್ಕ"