ಕೊಯಂಬತ್ತೂರು ಮತ್ತು ಕಲ್ಲಿಕೋಟೆ ನಂತರ ಮಂಗಳೂರಿನ ಈ ಪಾರ್ಕ್ ಇವರ ಮೂರನೆಯ ಮೈಲಿಗಲ್ಲು. ಮಂಗಳೂರಿಗಂತೂ ಇದು ಪ್ರಥಮ..
ಈ ಹಿಮ ಮಳಿಗೆಯೊಳಗೆ ಮಂಜು ಬೀಳುವ ಅನುಭವ , ಡಿಜೆ, ಕಾಫಿ ಶಾಪ್, ಹಿಮ ಪ್ರಾಣಿಗಳ ಚಿತ್ರಗಳನ್ನು ಆಸ್ವಾದಿಸುವ ,ಹಾಗೆಯೇ ಹಿಮ ಶಿಖರಗಳ ,ಹಿಮ ಕಣಿವೆಯೊಳಗೆ ಓಡಾಡುವ ಅನುಭವ ಅದ್ಭುತ.. ಮ್ಯಾಜಿಕಲ್ ಹಿಮಗಳು , ಹಿಮದ ಗುಡ್ಡೆ ಕಟ್ಟುವ ಆಟಗಳು .ಇನ್ನು ಅನೇಕ ರೀತಿಯ ವಿಶೇಷಗಳನ್ನು ಇಲ್ಲಿ ಆಸ್ವಾದಿಸಬಹುದಾಗಿದೆ.
ಈ ಹಿಮ ಮಳಿಗೆಯೊಳಗೆ ಮಂಜು ಬೀಳುವ ಅನುಭವ , ಡಿಜೆ, ಕಾಫಿ ಶಾಪ್, ಹಿಮ ಪ್ರಾಣಿಗಳ ಚಿತ್ರಗಳನ್ನು ಆಸ್ವಾದಿಸುವ ,ಹಾಗೆಯೇ ಹಿಮ ಶಿಖರಗಳ ,ಹಿಮ ಕಣಿವೆಯೊಳಗೆ ಓಡಾಡುವ ಅನುಭವ ಅದ್ಭುತ.. ಮ್ಯಾಜಿಕಲ್ ಹಿಮಗಳು , ಹಿಮದ ಗುಡ್ಡೆ ಕಟ್ಟುವ ಆಟಗಳು …ಇನ್ನು ಅನೇಕ ರೀತಿಯ ವಿಶೇಷಗಳನ್ನು ಇಲ್ಲಿ ಆಸ್ವಾದಿಸಬಹುದಾಗಿದೆ.
ಮಂಗಳೂರಿನ ಬಿಸಿಲಿನ ವಾತಾವರಣದಲ್ಲಿ ಒದ್ದಾಡುವ ಈ ಸಂದರ್ಭದಲ್ಲಿ ಮನೆ-ಮಂದಿ-ಮಕ್ಕಳನ್ನೆಲ್ಲ ಒಂದು ಅನುಭವವನ್ನು ಆಸ್ವಾದಿಸುವುದು ಒಳ್ಳೆಯದು ಎನ್ನುತ್ತಾರೆ ಸ್ನೋ ಫ್ಯಾಂಟಸಿಯ ಡೈರೆಕ್ಟರ್ ಆದಿತ್ಯ.
ಅಂತರರಾಷ್ಟ್ರೀಯ ಗುಣಮಟ್ಟದ ಈ ಸ್ನೋ ಫ್ಯಾಂಟಸಿ ಪ್ರವೇಶ ಪಡೆದವರಿಗೆ ಜಾಕೆಟ್, ಸಾಕ್ಸ್, ಬೂಟ್, ಮುಂತಾದವುಗಳನ್ನ ನೀಡಲಾಗುವುದು. ಅವರ ಆರೋಗ್ಯದ ಕುರಿತು ಮತ್ತು ಅಪಾಯವನ್ನು ತಡೆಮಟ್ಟುವ ಎಲ್ಲಾ ಕಾರ್ಯಕ್ಷಮತೆಯನ್ನು, ಸೇಫ್ಟಿ ಫೀಚರ್ಗಳನ್ನು ಅಳವಡಿಸಲಾಗಿದೆ.
ನೆಕ್ಸಸ್ ಸೆಲೆಕ್ಟ್ ಮಾಲ್ಸ್ ಸಿ.ಓ.ಓ. ಜಯೇನ್ ನಾಯಕ್ ಮಾತನಾಡಿ “ಈ ಅನುಭವ ನಿಜವಾಗಿಯೂ ವಿಶೇಷ. ಸ್ನೋ ಫ್ಯಾಂಟಸಿ- ಫೆಂಟಾಸ್ಟಿಕ್ ಆಗಿದ್ದು ನಮ್ಮ ಮಾಲ್ ನ್ನು ಆಯ್ಕೆ ಮಾಡಿರುವುದು ಸಂತೋಷ ” ಎಂದು ಶುಭನುಡಿದರು.
ಸ್ನೋ ಫ್ಯಾಂಟಸಿಯ ವಿಶೇಷತೆಗಳ ಬಗ್ಗೆ ಮ್ಯಾನೇಜ್ಮೆಂಟ್ ಕನ್ಸಲ್ಟೆಂಟ್ ವೇಣುಶರ್ಮ ಮಾತನಾಡಿ “ಮಂಗಳೂರಿನ ಜನತೆ ತಮ್ಮ ಕಿಟ್ಟಿ ಪಾರ್ಟಿಗಳನ್ನು, ಬರ್ತಡೇ ಹಾಗೂ ಗೆಳೆಯರ ಆಟ- ಕೂಟಗಳನ್ನು ಗ್ರೂಪ್ ಬುಕಿಂಗ್ ಮೂಲಕ ನಡೆಸಿದರೆ ಅವರ ಸಂತೋಷ ದುಪ್ಪಟ್ಟಾಗುವುದು ಖಂಡಿತಾ”ಎಂದರು.
ಕಂಪನಿಯ ಇನ್ನೊಬ್ಬ ನಿರ್ದೇಶಕ ವಿಪಿನ್ ಝಕಾರಿಯ ಮಾತನಾಡಿ “ಈ ಪಾರ್ಕ್ ಮಕ್ಕಳಿಗೆ, ಯುವಕರಿಗೆ ಮತ್ತು ಎಲ್ಲಾ ವರ್ಗದ ಜನರಿಗೆ ಸಂತೋಷ ನೀಡುವ ಉದ್ದೇಶದಿಂದಾಗಿ ಆರಂಭವಾಗಿದೆ. ಈ ಪಾರ್ಕ್ ನಲ್ಲಿ ಯುವ ಜನತೆಗಾಗಿ ಹಲವು ಸಾಹಸ ಕ್ರೀಡೆಗಳನ್ನು ಅಳವಡಿಸಲಾಗಿದೆ” ಎಂದರು.
“ಅಂತರಾಷ್ಟ್ರೀಯ ಗುಣಮಟ್ಟದ ಸೌಂಡ್ ಸಿಸ್ಟಮ್, ಲೇಸರ್ ಶೋ, ಮ್ಯಾಜಿಕಲ್ ಸ್ನೋ ಫಾಲ್, ರೋಪ್ ವಾಕ್…. ಸ್ನೋ ಫ್ಯಾಂಟಸಿಯ ವಿಶೇಷಗಳು” ಎನ್ನುತ್ತಾರೆ ನಿಯೋಸ್ನೋ ಎಮ್ಯೂಸ್ಮೆಂಟ್ ಆಂಡ್ ಪಾರ್ಕ್ ಇಂಡಿಯಾ (ಪ್ರೈ) ಲಿಮಿಟೆಡ್ ಕಂಪನಿಯ ಚೇರ್ಮನ್ ಹಾಗೂ ಮುಖ್ಯಸ್ಥ ಕ್ಯಾಪ್ಟನ್ . ಟಿ. ಎಸ್ ಅಶೋಕನ್ .ಕೇರಳದಲ್ಲಿ ಪ್ರಪ್ರಥಮ ಎಮ್ಯೂಸ್ಮೆಂಟ್ ಪಾರ್ಕನ್ನು ಮಲಪ್ಪುರಂ ಜಿಲ್ಲೆಯಲ್ಲಿ ನೀಡಿದ ನಾವು ಮಂಗಳೂರಿಗೂ ಈ ಪ್ರಪ್ರಥಮ ಸ್ನೋ ಫ್ಯಾಂಟಸಿಯನ್ನು ನೀಡುತ್ತಿದ್ದೇವೆ” ಎಂದರು. .
ಬೆಳಿಗ್ಗೆ 11 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಪ್ರತಿದಿನ ಈ ಸ್ನೋ ಫ್ಯಾಂಟಸಿ ಕಾರ್ಯನಿರ್ವಹಿಸಲಿದೆ ಎಂದು ಕಂಪನಿಯ ಆಡಳಿತ ಅಧಿಕಾರಿ ಬಿಪಿನ್ ಝಕಾರಿಯ ತಿಳಿಸಿದರು. ಈ ಸಂದರ್ಭದಲ್ಲಿ ಮಂಗಳೂರು ಮಾಲ್ ಮುಖ್ಯಸ್ಥ ಅರವಿಂದ್ ಶ್ರೀವಾಸ್ತವ್ ಹಾಗೂ ನೆಕ್ಷಸ್ ಸೆಲೆಕ್ಟ್ ಮಾಲ್ಸ್, ರೀಜನಲ್ ಮುಖ್ಯಸ್ಥ ತನ್ವೀರ್ ಶೇಕ್ ಉಪಸ್ಥಿತರಿದ್ದರು. https://www.snowfantasy.in/book-now
Be the first to comment on "ಮಂಗಳೂರಲ್ಲಿ ಕೂಲ್ ಕೂಲ್… ಐಸ್ ಬೀಳುವ ಅನುಭವ!!! – ಎಲ್ಲಿ ಇದೆ ಈ ಸ್ನೋ ಫ್ಯಾಂಟಸಿ?"