ಲೋಕಸಭೆ ಚುನಾವಣೆಗೆ ಗೃಹರಕ್ಷಕರ ಕರ್ತವ್ಯ ನಿಯೋಜನೆ ಮತ್ತಿತರ ವಿಷಯಗಳ ಕುರಿತು ಚರ್ಚಿಸಲು ಬಂಟ್ವಾಳ ಗೃಹರಕ್ಷಕ ದಳಕ್ಕೆ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟ ಡಾ. ಮುರಲೀ ಮೋಹನ ಚೂಂತಾರು ಆಗಮಿಸಿ ಸಭೆ ನಡೆಸಿದರು. ಈ ಸಂದರ್ಭ ಕವಾಯತು ವೀಕ್ಷಣೆ ನಡೆಸಿ ಲೋಕಸಭಾ ಚುನಾವಣಾ ಕರ್ತವ್ಯಕ್ಕೆ ಗೃಹರಕ್ಷಕರನ್ನು ನಿಯೋಜಿಸುವ ಬಗ್ಗೆ ಹಾಗೂ ನಿಷ್ಕ್ರಿಯಗೊಂಡ ಗೃಹರಕ್ಷಕರ ಮನವೊಲಿಸಿ ಲೋಕಸಭಾ ಚುನಾವಣೆಗೆ ನಿಯೋಜಿಸುವ ಕುರಿತು ಚರ್ಚಿಸಿದರು. ಈ ಸಂದರ್ಭ ಪ್ರತಿಯೊಬ್ಬ ಗೃಹರಕ್ಷಕರು ಚುನಾವಣಾ ಕರ್ತವ್ಯವನ್ನು ನಿರ್ವಹಿಸಬೇಕು ಮತ್ತು ಚುನಾವಣಾ ಕರ್ತವ್ಯ ನಿರ್ವಹಿಸುವ ಗೃಹರಕ್ಷಕರು ಅಂಚೆ ಮೂಲಕ ಮತದಾನ ಮಾಡಲು ಚುನಾವಣಾ ಗುರುತಿನ ಚೀಟಿಯನ್ನು ಮತ್ತು ಭಾಗ ಸಂಖ್ಯೆಯನ್ನು ಘಟಕಾಧಿಕಾರಿಯವರಲ್ಲಿ ನೀಡುವಂತೆ ಆದೇಶಿಸಿದರು. ಬಂಟ್ವಾಳ ಘಟಕದ ಘಟಕಾಧಿಕಾರಿ ಐತಪ್ಪ ಹಾಗೂ ಬಂಟ್ವಾಳ ಘಟಕದ ಗೃಹರಕ್ಷಕರು ಉಪಸ್ಥಿತರಿದ್ದರು.
Be the first to comment on "ಬಂಟ್ವಾಳದಲ್ಲಿ ಗೃಹರಕ್ಷಕ ದಳದ ಸಮಾದೇಷ್ಟರಿಂದ ಕವಾಯತು ವೀಕ್ಷಣೆ"