ಪುಂಜಾಲಕಟ್ಟೆಯ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್‌ನ 40ನೇ ಸಂಭ್ರಮಾಚರಣೆಯ ಪ್ರಯುಕ್ತ 16ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ ಮಾ.24ರಂದು ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ಜರಗಲಿದೆ ಎಂದು ಕ್ಲಬ್‌ನ ಸ್ಥಾಪಕಾಧ್ಯಕ್ಷ ಎಂ.ತುಂಗಪ್ಪ ಬಂಗೇರ ಮತ್ತು ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ ತಿಳಿಸಿದ್ದಾರೆ.
ಮುಂಬಯಿ ಉದ್ಯಮಿ ಕಕ್ಯಪದವು ನಾರಾಯಣ ಶೆಟ್ಟಿ ಸಾರಥ್ಯದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಬೆಳಗ್ಗೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದಿಂದ ಮದುವೆ ಮಂಟಪದವರೆಗೆ ವೈಭವಪೂರ್ವಕವಾಗಿ ವಧು-ವರರ ದಿಬ್ಬಣ ಮೆರವಣಿಗೆ ನಡೆಯಲಿದೆ. ಮಧ್ಯಾಹ್ನ 11.21ರ ಶುಭ ಮುಹೂರ್ತದಲ್ಲಿ 6 ಜೋಡಿ ವಧು-ವರರಿಗೆ ಸಾಮೂಹಿಕ ವಿವಾಹ ನಡೆಯಲಿದೆ. ಬಳಿಕ ನಡೆಯುವ ಸಭಾ ಕಾರ್ಯಕ್ರಮದಲ್ಲಿ ವಿವಿಧ ಸಾಧಕರಿಗೆ ಸ್ವಸ್ತಿ ಸಿರಿ ರಾಜ್ಯ ಪ್ರಶಸ್ತಿ ಪ್ರದಾನ ಮತ್ತು ಸ್ವಸ್ತಿಕ್ ಸಂಭ್ರಮ ಪುರಸ್ಕಾರ ಮಾಡಲಾಗುವುದು. ಸಂತೋಷ್ ಕುಮಾರ್ ಜೆ.ಪಿ.(ಉದ್ಯಮ ), ಸಂತೋಷ್ ಕುಮಾರ್ ತುಂಬೆ(ಶಿಕ್ಷಣ ) , ಅನ್ವೇಷ್ ಆರ್.ಶೆಟ್ಟಿ (ಯಕ್ಷಗಾನ), ಸದಾನಂದ ಅಮೀನ್ ಮಲ್ಪೆ (ಉದ್ಯಮ), ರಾಜು ಮಣಿಹಳ್ಳ(ದೈವ ನರ್ತನ), ಹಂಝ ಬಸ್ತಿಕೋಡಿ (ಸಮಾಜ ಸೇವೆ) ಅವರಿಗೆ ಸ್ವಸ್ತಿ ಸಿರಿ ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಾಗುವುದು.ಮನೋಜ್ ಕನಪಾಡಿ(ಕಲೆ),ಭಾಸ್ಕರ ರಾವ್‌ಬಿ.ಸಿ.ರೋಡ್(ಸಂಗೀತ),ಹೇಮಚಂದ್ರ ಸಿದ್ದಕಟ್ಟೆ( ಸಂಘಟನೆ), ಸಂದೀಪ್ ಸಾಲ್ಯಾನ್(ಪತ್ರಕರ್ತ), ಚಂದ್ರಪ್ಪ ಮದ್ದಡ್ಕ (ಶಿಕ್ಷಣ) ಅವರಿಗೆ ಸ್ವಸ್ತಿಕ್ ಸಂಭ್ರಮ ಪ್ರಶಸ್ತಿ ನೀಡಲಾಗುವುದು
ನವದೆಹಲಿ ಅನಾರೋಕ್ ಸಂಸ್ಥೆಯ ವೈಸ್ ಚೆಯರ್‌ಮೇನ್ ಸಂತೋಷ್ ಕುಮಾರ್ ಜೆ.ಪಿ. ಸಭಾ ಕಾರ್ಯಕ್ರಮ ಉದ್ಘಾಟಿಸಲಿರುವರು. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅಧ್ಯಕ್ಷತೆ ವಹಿಸಲಿರುವರು. ಸಂಸದ ನಳಿನ್ ಕುಮಾರ್ ಕಟೀಲು ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಿರುವರು. ಉಡುಪಿ ಜಿಲ್ಲೆ ಹೆಚ್ಚುವರಿ ನ್ಯಾಯಾಧೀಶ ದಿನೇಶ ಹೆಗ್ಡೆ ಮತ್ತು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ಮಂಗಳಸೂತ್ರ ವಿತರಿಸಲಿರುವರು. ಉದ್ಯಮಿ ಅಬ್ದುಲ್ ಕುಂಞಿ, ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ ಸ್ವಸ್ತಿಕ್ ಸಂಭ್ರಮ ಪ್ರಶಸ್ತಿ ಪ್ರದಾನ ಮಾಡುವರು. ಬೆಳಗ್ಗೆ ಕುಣಿತ ಭಜನೆ ಸ್ಪರ್ಧೆ, ಮಧ್ಯಾಹ್ನ ಸಾರ್ವಜನಿಕರಿಗೆ ವಿವಾಹ ಭೋಜನ ಏರ್ಪಡಿಸಲಾಗಿದ್ದು, ಮಧ್ಯಾಹ್ನ ಬಳಿಕ ಪುಂಜಾಲಕಟ್ಟೆ ನಾರಾಯಣಗುರು ವಸತಿ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈಭವ ಪ್ರದರ್ಶನವಿದೆ.ರಾತ್ರಿ ಡ್ಯಾನ್ಸ್ ಪರ್ಬ ನಡೆಯಲಿದೆ. ಸಾಮೂಹಿಕ ವಿವಾಹಕ್ಕೆ ಮುನ್ನ ಮಾ.23ರಂದು ಅಶ್ವತ್ಥ ಕಟ್ಟೆಯಲ್ಲಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಲಿದೆ
Be the first to comment on "ಮಾ.24ರಂದು ಪುಂಜಾಲಕಟ್ಟೆಯಲ್ಲಿ ಉಚಿತ ಸಾಮೂಹಿಕ ವಿವಾಹ, ಪ್ರಶಸ್ತಿ ಪುರಸ್ಕಾರ ಪ್ರದಾನ"