ಬಂಟ್ವಾಳ: ಭೂ ಕೈಲಾಸ ಪ್ರತೀತಿಯ ಇತಿಹಾಸ ಪ್ರಸಿದ್ಧ ಬಂಟ್ವಾಳ ತಾಲೂಕಿನ ಕಾವಳಮೂಡೂರು ಗ್ರಾಮದ ಕಾರಿಂಜ ಶ್ರೀ ಕಾರಿಂಜೇಶ್ವರ ದೇವಸ್ಥಾನಕ್ಕೆ 50 ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಲಾದ ನೂತನ ಮಹಾರಥದ ಸಮರ್ಪಣೆ ಕಾರ್ಯಕ್ರಮದ ಶೋಭಾಯಾತ್ರೆಗೆ ರವಿವಾರ ಬಿ.ಸಿ.ರೋಡ್‌ನಲ್ಲಿ ಚಾಲನೆ ನೀಡಲಾಯಿತು.
ಬಿ.ಸಿ.ರೋಡ್ ನಿಂದ ಶ್ರೀ ಕ್ಷೇತ್ರ ಕಾರಿಂಜದವರೆಗೆ ನಡೆದ ಶೋಭಾಯಾತ್ರೆಗೆ ಬಿ.ಸಿ.ರೋಡ್ ಶ್ರೀ ರಕ್ತೇಶ್ವರಿ ದೇವಸ್ಥಾನದ ಬಳಿ ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಉಳಿಪ್ಪಾಡಿಗುತ್ತು ಅವರು ತೆಂಗಿನ ಕಾಯಿ ಒಡೆಯುವ ಮೂಲಕ ಚಾಲನೆ ನೀಡಿದರು. ಶ್ರೀ ರಕ್ತೇಶ್ವರಿ ಸನ್ನಿಧಿಯಲ್ಲಿ ದೀಪ ಬೆಳಗಿಸಿ ಹಿರಿಯ ಸಾಹಿತಿ ಕೆ.ಎಲ್. ಆಚಾರ್ಯ ಅವರು ಪ್ರಾರ್ಥನೆ ಸಲ್ಲಿಸಿದರು.
ಉದ್ಯಮಿ ಕೆ.ಕೆ.ಶೆಟ್ಟಿ. ಶ್ರೀ ರಕ್ತೇಶ್ವರಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಬಿ.ವಿಶ್ವನಾಥ, ಉಪಾಧ್ಯಕ್ಷ ಕೆ.ಸಂಜೀವ ಪೂಜಾರಿ ಗುರುಕೃಪಾ,ಮಾಜಿ ಅಧ್ಯಕ್ಷ ಗೋಪಾಲ ಸುವರ್ಣ, ಕಿಯೋನಿಕ್ಸ್ ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಬಂಟ್ವಾಳ ಬಿಜೆಪಿ ಕ್ಷೇತ್ರಾದ್ಯಕ್ಷ ದೇವಪ್ಪ ಪೂಜಾರಿ, ಉದ್ಯಮಿ ರಮೇಶ್ ಸಾಲ್ಯಾನ್, ನಿವೃತ್ತ ಕಂದಾಯ ಅಽಕಾರಿಗಳಾದ ರೋಹಿನಾಥ್ ಪಟ್ರಾಡಿ, ಅಣ್ಣು ಪೂಜಾರಿ, ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಪುಳಿಮಜಲು, ಅರ್ಚಕರಾದ ಮಿಥುನ್ ರಾಜ್ ನಾವಡ, ಜಯಶಂಕರ ಉಪಾಧ್ಯಾಯ, ಗ್ರಾಮಣಿ ವೆಂಕಟರಮಣ ಮುಚ್ಚಿನ್ನಾಯ, ಕಾವಳ ಮೂಡೂರು ಗ್ರಾ.ಪಂ.ಅಧ್ಯಕ್ಷ ಅಜಿತ್ ಶೆಟ್ಟಿ ಕಾರಿಂಜ, ಉಪಾಧ್ಯಕ್ಷ ಪ್ರಶಾಂತ್, ಕಾವಳಪಡೂರು ಗ್ರಾ.ಪಂ.ಅಧ್ಯಕ್ಷ ಲಕ್ಷ್ಮೀ ನಾರಾಯಣ ಶರ್ಮ, ಯಕ್ಷಗಾನ ಕಲಾವಿದ ದಿನೇಶ್ ಶೆಟ್ಟಿ ಕಾವಳಕಟ್ಟೆ, ನ್ಯಾಯವಾದಿ ರಾಜಾರಾಮ ನಾಯಕ್, ವ್ಯವಸ್ಥಾಪನ ಸಮಿತಿ ಸದಸ್ಯರು, ಮತ್ತಿತರರು ಭಾಗವಹಿಸಿದ್ದರು.
ರಥಯಾತ್ರೆ ಮೆರವಣಿಗೆಯು ವಿವಿಧ ವಾಹನಗಳ ಸಹಿತ ಬ್ಯಾಂಡ್ ವಾದ್ಯ, ಚೆಂಡೆ ವಾದನದೊಂದಿಗೆ ಬಂಟ್ವಾಳ, ವಗ್ಗ, ಕಾವಳಕಟ್ಟೆ, ಎನ್.ಸಿ ರೋಡ್, ಮಾರ್ಗವಾಗಿ ಕಾರಿಂಜ ದೇವಸ್ಥಾನದವರೆಗೆ ನಡೆಯಿತು.
Be the first to comment on "ಶ್ರೀ ಕ್ಷೇತ್ರ ಕಾರಿಂಜಕ್ಕೆ ಮಹಾರಥ ಸಮರ್ಪಣೆ: ಬಿ.ಸಿ.ರೋಡ್‌ನಲ್ಲಿ ವೈಭವದ ಶೋಭಾಯಾತ್ರೆಗೆ ಚಾಲನೆ"