ವಿಟ್ಲ: ಮಂಗಳೂರಿನ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಬಂಟ್ವಾಳ ತಾಲೂಕಿನ ಮೂಡಂಬೈಲಿನಲ್ಲಿ ನೈಸರ್ಗಿಕ ಕೃಷಿ ಕುರಿತು ರೈತರಿಗೆ ತರಬೇತಿ ಕಾರ್ಯಕ್ರಮವನ್ನು ಸರೋಲಿಮೂಲೆ ಕೃಷ್ಣ ನಾಯ್ಕ ಮನೆಯ ವಠಾರದಲ್ಲಿ ಆಯೋಜಿಸಲಾಗಿತು.
ಕೃಷಿ ವಿಜ್ಞಾನ ಕೇಂದ್ರದ ಬೇಸಾಯಶಾಸ್ತ್ರ ವಿಜ್ಞಾನಿಗಳಾದ ಡಾ. ಹರೀಶ್ ಶೆಣೈ ಅವರು ನೈಸರ್ಗಿಕ ಕೃಷಿ ಮಹತ್ವ, ತತ್ವಗಳು ಹಾಗೂ ಅದರ ಪ್ರಾಮುಖ್ಯತೆ ಕುರಿತು ಮಾಹಿತಿ ನೀಡಿ ನೈಸರ್ಗಿಕ ಕೃಷಿಯ ಮೂಲ ತತ್ವಗಳಲ್ಲಿ ಒಂದಾಗಿರುವ ಜೀವಾಮೃತ ತಯಾರಿಸಲು ಬೇಕಾದ ಪರಿಕರಗಳಾದ ಸೆಗಣಿ, ಗಂಜಲ, ಬೆಲ್ಲ, ದ್ವಿದಳಧಾನ್ಯದ ಹಿಟ್ಟು ಹಾಗೂ ತೋಟದ ಮಣ್ಣು ಇವುಗಳನ್ನು ಬಳಸಿ ಜೀವಾಮೃತ ತಯಾರಿಸುವ ಕುರಿತು ಪದ್ದತಿ ಪ್ರಾತ್ಯಕ್ಷಿಕೆ ಮುಖಾಂತರ ತರಬೇತಿಯನ್ನು ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಮಂಗಳೂರಿನ ಕೃಷಿ ವಿಜ್ಞಾನ ಕೇಂದ್ರ ಹಿರಿಯ ವಿಜ್ಞಾನಿಗಳು ಹಾಗೂ ಮುಖ್ಯಸ್ಥರಾದ ಡಾ. ಟಿ. ಜೆ. ರಮೇಶ ಹಾಗೂ ತಾಂತ್ರಿಕ ಅಧಿಕಾರಿಯಾದ ಸತೀಶ್ ನಾಯ್ಕ ಇವರು ಭಾಗವಹಿಸಿದರು. ಪ್ರಗತಿಪರ ಕೃಷಿಕ ಕೃಷ ನಾಯ್ಕ್ ಹಾಗೂ ಗ್ರಾಮದ ಸುಮಾರು 15 ಜನ ರೈತ ಭಾಂದವರು ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
Be the first to comment on "ನೈಸರ್ಗಿಕ ಕೃಷಿ ಕುರಿತು ರೈತರಿಗೆ ತರಬೇತಿ"