ಕಲ್ಲಡ್ಕ ಮ್ಯೂಸಿಯಂನ ಮಹಮ್ಮದ್ ಯಾಸೀರ್ ಅವರಿಂದ ಮಜಿ ಶಾಲೆಗೆ ಸ್ಮಾರ್ಟ್ ಟಿವಿ ಹಸ್ತಾಂತರ
ಕಲ್ಲಡ್ಕ ಮ್ಯೂಸಿಯಂ ಖ್ಯಾತಿಯ ಉದ್ಯಮಿ ಮಹಮ್ಮದ್ ಯಾಸೀರ್ ಅವರು ಬಂಟ್ವಾಳ ತಾಲೂಕಿನ ಮಜಿ ವೀರಕಂಭದ ಸರಕಾರಿ ಶಾಲೆಗೆ ಸ್ಮಾರ್ಟ್ ಟಿವಿ ಹಸ್ತಾಂತರ ಮಾಡಿದರು. ಈ ಸಂದರ್ಭ ಅವರನ್ನು ಅಭಿನಂದಿಸಿ ಮಾತನಾಡಿದ ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಜಿ.ಮಂಜುನಾಥನ್, ಯಾವುದೇ ಅಭಿಲಾಷೆ ಇಲ್ಲದೆ ವಿದ್ಯೆಗೆ ಮಾಡುವ ಸಹಾಯ ದೇವರು ಮೆಚ್ಚುತ್ತಾನೆ ಎಂದರು. ವೀರಕಂಭ ಗ್ರಾಮ ಪಂಚಾಯತ್ ಅಧ್ಯಕ್ಷ ಲಲಿತಾ, ಉಪಾಧ್ಯಕ್ಷ ಜನಾರ್ದನ ಪೂಜಾರಿ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಕೊರಗಪ್ಪ ನಾಯ್ಕ್, ವಿಟ್ಲ ಶಿಶು ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ರೂಪಕಲಾ, ಕಲ್ಲಡ್ಕ ಕ್ಲಸ್ಟರ್ ಸಿ ಅರ್ ಪಿ ಜ್ಯೋತಿ, ಗೋಳ್ತಮಜಲು ಸರಕಾರಿ ಪ್ರೌಢಶಾಲಾ ಶಿಕ್ಷಕ ಸತ್ಯಶಂಕರ್ ಮೊದಲಾದವರು ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ ಬೆನಡಿಕ್ಟಾ ಸ್ವಾಗತಿಸಿದರು. ಸಹ ಶಿಕ್ಷಕಿ ಸಂಗೀತಾ ಶರ್ಮ ಪಿ ಜಿ ವಂದಿಸಿದರು
Be the first to comment on "ಕಲ್ಲಡ್ಕ ಮ್ಯೂಸಿಯಂನ ಮಹಮ್ಮದ್ ಯಾಸೀರ್ ಅವರಿಂದ ಮಜಿ ಶಾಲೆಗೆ ಸ್ಮಾರ್ಟ್ ಟಿವಿ ಹಸ್ತಾಂತರ"