ಬಂಟ್ವಾಳ: ದ್ವಿಚಕ್ರವಾಹನಕ್ಕೆ ಲಾರಿ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಘಟನೆ ಇಂದು ಬಿಸಿರೋಡಿನ ಕೈಕಂಬ ಎಂಬಲ್ಲಿ ನಡೆದಿದೆ.
ಆಲಡ್ಕ ನಿವಾಸಿ ಆಶ್ರಫ್ (32) ಮೃತಪಟ್ಟ ಯುವಕ.
ಸ್ನೇಹಿತನಿಗೆ ಸಹಾಯಮಾಡಲು ಹೋದ ವ್ಯಕ್ತಿ ಪ್ರಾಣಕ್ಕೆ ಕುತ್ತು ತಂದಿದೆ. ಆಲಡ್ಕ ನಿವಾಸಿ ತನ್ವೀರ್ ಆಶ್ರಫ್ ಅವರ ಸ್ನೇಹಿತರಾಗಿದ್ದು, ತರಕಾರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿರುವ ಸ್ನೇಹಿತನಿಗೆ ಡ್ರಾಫ್ ಕೊಡುವ ಉದ್ದೇಶದಿಂದ ತನ್ನ ಸ್ಕೂಟರ್ ನಲ್ಲಿ ಬಿಸಿರೋಡಿಗೆ ತೆರಳಿದ್ದರು.
ಬೆಳಿಗ್ಗೆ ಸುಮಾರು 5.30 ರ ವೇಳೆ ಆಶ್ರಫ್ ಅವರು ಕೈಕಂಬದಲ್ಲಿರುವ ತರಕಾರಿ ಅಂಗಡಿಗೆ ಇನ್ನೇನು ಸ್ನೇಹಿತ ತನ್ವೀರ್ ನ್ನು ಇಳಿಸಬೇಕು ಎನ್ನುವಷ್ಟರಲ್ಲಿ ಅದೇ ಅಂಗಡಿಗೆ ತರಕಾರಿ ತಂದು ಖಾಲಿ ಮಾಡಿ ವಾಪಾಸು ಹೋಗುವ ಲಾರಿಯ ಚಾಲಕ ಲಾರಿಯನ್ನು ಅಜಾಗರೂಕತೆಯಿಂದ ಹಿಂಬದಿಗೆ ಚಲಿಸಿ ಸ್ಕೂಟರ್ ಗೆ ಡಿಕ್ಕಿ ಹೊಡೆದಿದ್ದಾಗಿ ಆರೋಪಿಸಲಾಗಿದೆ.
ಘಟನೆಯಿಂದ ಇಬ್ಬರಿಗೂ ಗಾಯವಾಗಿದ್ದು, ಗಂಭೀರವಾಗಿ ಗಾಯಗೊಂಡ ಆಶ್ರಫ್ ನನ್ನು ಕೂಡಲೇ ಆಸ್ಪತ್ರೆಗೆ ಮಂಗಳೂರಿನ ಯುನಿಟಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
Be the first to comment on "ಬಿ.ಸಿ.ರೋಡ್ ನಲ್ಲಿ ರಸ್ತೆ ಅಪಘಾತಕ್ಕೆ ಯುವಕ ಬಲಿ"