ಅನ್ನಪೂರ್ಣೇಶ್ವರಿ ದೇವಸ್ಥಾನ ಬ್ರಹ್ಮಕಲಶೋತ್ಸವ: ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆಯ ಚಿತ್ರಗಳು ಮತ್ತು ವರದಿ ಇಲ್ಲಿದೆ.
ಬಂಟ್ವಾಳ ತಾಲೂಕಿನ ಬಿ.ಸಿ.ರೋಡಿನ ಪೊಲೀಸ್ ಲೇನ್ ನಲ್ಲಿರುವ ಶ್ರೀ ಅನ್ನಪೂರ್ಣೇಶ್ವರಿ ನಾಗದೇವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ಶುಕ್ರವಾರ ಬಿ.ಸಿ.ರೋಡ್ ಪೊಳಲಿ ದ್ವಾರದಿಂದ ಕ್ಷೇತ್ರದವರೆಗೆ ನಡೆಯಿತು.
ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕ ಚೈತನ್ಯಾನಂದಜಿ ಅವರು ದಿವ್ಯ ಉಪಸ್ಥಿತಿಯಲ್ಲಿ ಉದ್ಯಮಿ ರಘು ಸಪಲ್ಯ ಅವರು ಮೆರವಣಿಗೆಯನ್ನು ಉದ್ಘಾಟಿಸಿದರು. ಬಳಿಕ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿವಿಧ ಕಲಾತಂಡಗಳೊಂದಿಗೆ ಮೆರವಣಿಗೆಯು ಶ್ರೀ ಅನ್ನಪೂಣೇಶ್ವರೀ ಕ್ಷೇತ್ರಕ್ಕೆ ಸಾಗಿತು.
ಬಿ.ಸಿ.ರೋಡು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಆಕರ್ಷಕ ಮೆರವಣಿಗೆಯಲ್ಲಿ ಅಕ್ಕಿ, ತೆಂಗಿನಕಾಯಿ, ತರಕಾರಿ, ಬಾಳೆ ಎಲೆ, ಅಡಿಕೆ, ಸೀಯಾಳ, ಸಹಿತ ವಿವಿಧ ಅಡುಗೆ ಸಾಮಾಗ್ರಿಗಳನ್ನು ಭಕ್ತರು ಸಮರ್ಪಿಸಿದರು. ಚೆಂಡೆ ಮತ್ತು ಬ್ಯಾಂಡು ವಾದ್ಯ ಸಹಿತ ಗೊಂಬೆ ಕುಣಿತ, ಬಣ್ಣದ ಕೊಡೆ, ಕಲಶಹೊತ್ತ ಸಮಸವ್ತ್ರಧಾರಿ ಮಹಿಳೆಯರು ಹಾಗೂ ನೃತ್ಯ ಭಜನೆ ತಂಡ ಮೆರವಣಿಗೆಗೆ ವಿಶೇಷ ಮೆರುಗು ನೀಡಿತು.
ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಗೌರವಾಧ್ಯಕ್ಷ ಜಗನ್ನಾಥ ಚೌಟ ಬದಿಗುಡ್ಡೆ, ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪ್ರಕಾಶ್ ಕಾರಂತ, ಜೀರ್ಣೊದ್ಧಾರ ಸಮಿತಿ ಗೌರವಾಧ್ಯಕ್ಷ ಅಶ್ವನಿಕುಮಾರ್ ರೈ, ಅಧ್ಯಕ್ಷ ಚಂದ್ರಹಾಸ ಡಿ.ಶೆಟ್ಟಿ, ಕಾರ್ಯಾಧ್ಯಕ್ಷ ಸಂಜೀವ ಪೂಜಾರಿ ಬಿ,, ವ್ಯವಸ್ಥಾಪನಾ ಸಮಿತಿ ಉಪಾಧ್ಯಕ್ಷರಾದ ಆನಂದ ಕೆ, ಕೇಪುಗೌಡ, ಪ್ರಧಾನ ಕಾರ್ಯದರ್ಶಿ ಜಗನ್ನಾಥ ಶೆಟ್ಟಿ, ಜತೆ ಕಾರ್ಯದರ್ಶಿ ದಿನೇಶ್‌ಕುಮಾರ್, ಕೋಶಾಧಿಕಾರಿ ಮುರುಗೇಶ್, ಕಾನೂನು ಸಲಹೆಗಾರರಾದ ಉಮೇಶ್‌ಕುಮಾರ್ ವೈ, ನರೇಂದ್ರನಾಥ ಭಂಡಾರಿ, ಬಂಟ್ವಾಳ ಡಿವೈಎಸ್‌ಪಿ ಎಸ್.ವಿಜಯಪ್ರಸಾದ್, ಇನ್ಸ್ ಪೆ ಪೆಕ್ಟರ್‌ಗಳಾದ ಅನಂತಪದ್ಮನಾಭ, ಶಿವಕುಮಾರ್, ಹೊರೆಕಾಣಿಕೆ ಸಮಿತಿ ಸಂಚಾಲಕರಾದ ಬಿ.ದೇವದಾಸ್ ಶೆಟ್ಟಿ, ಬೇಬಿ ಕುಂದರ್, ವಿವಿಧ ಸಮಿತಿಗಳ ಪ್ರಮುಖರಾದ ಚಂದ್ರಹಾಸ ಪಲ್ಲಿಪ್ಪಾಡಿ, ಮಹಾಬಲ ಶೆಟ್ಟಿ ಬೋಳಂತೂರುಗುತ್ತು, ನಾಗೇಶ್ ಸಾಲ್ಯಾನ್, ಅಶೋಕ ಕುಮಾರ್, ಐತಪ್ಪ ಪೂಜಾರಿ, ಕೆ.ನಾರಾಯಣ ಹೆಗ್ಡೆ, ಸದಾನಂದ ಡಿ.ಶೆಟ್ಟಿ, ಐತ್ತಪ್ಪ ಆಳ್ವ ಸುಜೀರು, ಲೋಕನಾಥ ಶೆಟ್ಟಿ, ಡಾ. ಶಿವಪ್ರಸಾದ್ ಶೆಟ್ಟಿ, ರಾಜೇಶ್ ಸುವರ್ಣ, ಯತಿನ್ ಕಲ್ಲಡ್ಕ, ಚಿತ್ತರಂಜನ್ ಶೆಟ್ಟಿ ಬೊಂಡಾಲ, ರಾಜೇಶ್ ಭಂಡಾರಿ, ಸತೀಶ್ ಬಿ.ಸಿ.ರೋಡು, ಪ್ರಸಾದ್‌ಕುಮಾರ್ ರೈ, ಸದಾಶಿವ ಬಂಗೇರ, ಸದಾಶಿವ ಕೈಕಂಬ, ಸರಪಾಡಿ ಅಶೋಕ ಶೆಟ್ಟಿ, ಮೋಹನದಾಸ ಕೊಟ್ಟಾರಿ, ರಾಜೇಶ್ ಅಜ್ಜಿಬೆಟ್ಟು, ರಾಮಕೃಷ್ಣ ಆಳ್ವ, ಆಶಾ ಪಿ. ರೈ, ಇಂದಿರೇಶ್ ಬಿ.ಸಿ.ರೋಡು, ಬಿ.ಮೋಹನ್, ವಿಶ್ವನಾಥ ಬಿ. , ಕೃಷ್ಣ ಕುಲಾಲ್, ಪದ್ಮನಾಭ ಗೌಡ, ಮಚ್ಚೇಂದ್ರ ಸಾಲ್ಯಾನ್, ರೊನಾಲ್ಡ್ ಡಿಸೋಜ ಸಹಿತ ವಿವಿಧ ಸಮಿತಿಗಳ ಪದಾಧಿಕಾರಿಗಳು, ಸದಸ್ಯರು ಹಾಗೂ ಊರ ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.
Be the first to comment on "ಅನ್ನಪೂರ್ಣೇಶ್ವರಿ ದೇವಸ್ಥಾನ ಬ್ರಹ್ಮಕಲಶೋತ್ಸವ: ಹೊರೆಕಾಣಿಕೆ ಮೆರವಣಿಗೆ ಸಂಪನ್ನ, 23ರವರೆಗೆ ದಿನವಿಡೀ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ"