ಮುದ್ರಾ ಲೋನ್ ನೀಡುವ ನೆಪದಲ್ಲಿ ವ್ಯಕ್ತಿಯೊಬ್ಬರಿಗೆ ಲಕ್ಷಾಂತರ ರೂಪಾಯಿ ವಂಚಿಸಿದ ಘಟನೆ ಉಡುಪಿಯ ವ್ಯಕ್ತಿಯೊಬ್ಬರಿಗೆ ನಡೆದಿದೆ. ಉಡುಪಿಯ ಮಹಿಳೆಯೊಬ್ಬರು ಮುದ್ರಾ ಯೋಜನೆಯಡಿ ಸಾಲ ನೀಡುವ ಕುರಿತ ಸಾಮಾಜಿಕ ಜಾಲತಾಣದಲ್ಲಿ ಬಂದ ಜಾಹೀರಾತನ್ನು ನಂಬಿದ್ದಾರೆ. ಆ ಸಂಖ್ಯೆಗೆ ಕರೆ ಮಾಡಿದಾಗ ವ್ಯಕ್ತಿಯು ತಾನು ಮುದ್ರಾ ಲೋನ್ ಕೊಡಿಸುವ ಏಜಂಟ್ ಎಂದು ಹೇಳಿದ್ದಾರೆ. ಬಳಿಕ ಮಹಿಳೆಯಿಂದ ಲೋನ್ ಗೆ ಸಂಬಂಧಿಸಿದ ದಾಖಲೆ ಪಡೆದಿದ್ದು, ರಿಜಿಸ್ಟ್ರೇಶನ್ ಶುಲ್ಕ 18,786 ರೂ ಜಮೆ ಮಾಡುವಂತೆ ಗೂಗಪ್ ಪೇ ಐಡಿ ನೀಡಿದ್ದಾನೆ. ಅದಕ್ಕೆ ಮಹಿಳೆ ಹಣ ಜಮೆ ಮಾಡಿದ್ದಾರೆ. ಬಳಿಕ ಎನ್.ಒ.ಸಿ. ಮತ್ತಿತರ ಖರ್ಚುಗಳಿವೆ ಎಂದು ಹೇಳಿ ವಿವಿಧ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಹಣ ಒಟ್ಟು 9,15,450 ರೂ ವಸೂಲು ಮಾಡಿದ್ದಾನೆ. ಇದೀಗ ಮಹಿಳೆ ಸೆನ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ತನಿಖೆ ಸಾಗಿದೆ.
Be the first to comment on "ಮುದ್ರಾ ಲೋನ್ ನೆಪದಲ್ಲಿ ಲಕ್ಷಾಂತರ ರೂಪಾಯಿ ವಂಚನೆ"