ಬಂಟ್ವಾಳ: ಉಜಿರೆ ಎಸ್.ಡಿ.ಎಂ. ಕಾಲೇಜಿನಲ್ಲಿ ನಡೆದ ಜಿಲ್ಲಾ ಮಟ್ಟದ ದೈಹಿಕ ಶಿಕ್ಷಣ ಶಿಕ್ಷಕರ ಕ್ರೀಡಾಕೂಟದಲ್ಲಿ ಬಂಟ್ವಾಳ ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ತಂಡ ವಾಲಿಬಾಲ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದೆ.ಒಟ್ಟು ಎಂಟು ತಂಡಗಳು ಭಾಗವಹಿಸಿದ ಈ ಪಂದ್ಯಾಟದಲ್ಲಿ ಬೆಳ್ತಂಗಡಿ ತಂಡವು ದ್ವಿತೀಯ ಪ್ರಶಸ್ತಿಯನ್ನು ಪಡೆದಿರುತ್ತದೆ. ಸತತ ಹದಿನೈದು ವರ್ಷಗಳಿಂದ ಬಂಟ್ವಾಳ ತಂಡ ಚಾಂಪಿಯನ್ನಾಗಿ ಮೂಡಿಬಂದಿರುತ್ತದೆ, ತಂಡದಲ್ಲಿ ಕಪ್ತಾನ ರಫೀಕ್ ನಾರ್ಶಾ. ಪ್ರಶಾಂತ್ ಜೆಮ್ ,ಚಂದ್ರಹಾಸ ಎಸ್.ವಿ.ಎಸ್, ರಾಘವೇಂದ್ರ ಸಾಲೆತ್ತೂರು, ಮಿಥುನ್ ಮೊಡಂಕಾಪು, ಜಗದೀಶ್ ತುಂಬೆ, ಸುರೇಶ್ ಕಾರ್ಮೆಲ್, ಅಜಿತ್ ಶಾರದಾ, ನಿಖಿಲ್ ಕೈರಂಗಳ, ದೀಪಕ್ ಬುಡೋಳಿ, ತಿರುಮಲೇಶ್ ಹೋರಿಜಾನ್, ಪದ್ಮನಾಭ ಲೋರೆಟ್ಟು, ಸಫ್ವನ್ ಜೆನಿತ್ ಭಾಗವಹಿಸಿದ್ದರು. ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ವಿಷ್ಣುನಾರಾಯಣ ಹೆಬ್ಬಾರ್, ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರಾದ ರಾಜೇಂದ್ರ ರೈ ಅಳಿಕೆ ಮತ್ತು ಬಂಟ್ವಾಳ ತಾಲೂಕು ವಾಲಿಬಾಲ್ ಅಸೋಶಿಯೇಶನ್ ಅಧ್ಯಕ್ಷ ಸುಪ್ರೀತ್ ಆಳ್ವಾ ಅಭಿನಂದಿಸಿದರು.
Be the first to comment on "ವಾಲಿಬಾಲ್ ವಿಭಾಗದಲ್ಲಿ ಬಂಟ್ವಾಳ ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ತಂಡ ಪ್ರಥಮ"