ಮುಂದಿನ ಲೋಕಸಭೆ ಚುನಾವಣೆಯಲ್ಲಿ ಮತ್ತೊಮ್ಮೆ ನರೇಂದ್ರ ಮೋದಿಯವರನ್ನು ಪ್ರಧಾನಿಯನ್ನಾಗಿ ಮಾಡುವ ಸಂಕಲ್ಪದೊಂದಿಗೆ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಗೋಡೆ ಬರಹ ಕಾರ್ಯಕ್ರಮಕ್ಕೆ ಕ್ಷೇತ್ರ ಬಿಜೆಪಿ ಅಧ್ಯಕ್ಷರಾದ ದೇವಪ್ಪ ಪೂಜಾರಿ ಉಪಸ್ಥಿತಿಯಲ್ಲಿ ಬಿ ಸಿ ರೋಡು ನಗರ ಪ್ರದೇಶದಲ್ಲಿ ಚಾಲನೆ ನೀಡಲಾಯಿತು.
ಈ ಸಂಧರ್ಭ ಕ್ಷೇತ್ರ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವೀಶ್ ಶೆಟ್ಟಿ ಕರ್ಕಳ, ಜಿಲ್ಲಾ ಗೋಡೆ ಬರಹ ಅಭಿಯಾನದ ಸಹ ಸಂಚಾಲಕರಾದ ರಮಾನಾಥ ರಾಯಿ ಕ್ಷೇತ್ರ ಗೋಡೆ ಬರಹ ಸಂಚಾಲಕರಾದ ಯಶೋಧರ ಕರ್ಬೆಟ್ಟು, ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸುದರ್ಶನ್ ಬಜ, ಹಾಗೂ ಪ್ರಮುಖರಾದ ರೋನಾಲ್ಡ್ ಡಿ ಸೋಜಾ, ಪುರುಷೋತ್ತಮ ಸಾಲ್ಯಾನ್, ಪ್ರಣಾಮ್ ರಾಜ್, ಭಾಸ್ಕರ್ ಟೈಲರ್, ಸುರೇಶ್ ಕುಮಾರ್, ಮಹೇಶ್ ಶೆಟ್ಟಿ, ಕಿಶೋರ್ ಶೆಟ್ಟಿ, ನಾರಾಯಣ ಪೂಜಾರಿ, ನಾರಾಯಣ ಕೇದಿಗೆ, ಕಾರ್ತಿಕ್ ಬಳ್ಳಾಲ್, ಶೋಭಾ ಶೆಟ್ಟಿ,ನವೀನ್ ಶೆಟ್ಟಿ, ಸುರೇಶ್ ಕೋಟ್ಯಾನ್, ರವಿ ಅಂಚನ್, ರಾಧಾಕೃಷ್ಣ ತಂತ್ರಿ ಮುಂತಾದ ಪ್ರಮುಖರು ಉಪಸ್ಥಿತರಿದ್ದರು.
Be the first to comment on "ಮತ್ತೊಮ್ಮೆ ನರೇಂದ್ರ ಮೋದಿ: ಬಂಟ್ವಾಳ ಬಿಜೆಪಿಯಿಂದ ಗೋಡೆ ಬರಹ ಅಭಿಯಾನ"