ಬಂಟ್ವಾಳ ತಾಲೂಕು ಗಣರಾಜ್ಯೋತ್ಸವ ಸಮಿತಿ ವತಿಯಿಂದ ಬಿಸಿರೋಡಿನ ಆಡಳಿತ ಸೌಧದ ಮುಂಭಾಗ ಗಣರಾಜೋತ್ಸವ ಅಂಗವಾಗಿ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಉಪಸ್ಥಿತಿಯಲ್ಲಿ ತಹಶಿಲ್ದಾರ್ ಬಿಎಸ್.ಕೂಡಲಗಿ ಧ್ವಜಾರೋಹಣ ಮಾಡಿದರು.
ಧ್ವಜಾರೋಹಣಕ್ಕೂ ಮುನ್ನ ಪೊಲೀಸ್, ಶಾಲಾ ವಿದ್ಯಾರ್ಥಿಗಳು ಹಾಗೂ ಬಂಟ್ವಾಳ ತಾಲೂಕಿನ ನಿವೃತ್ತ ಸೈನಿಕರ ಸಂಘ ವತಿಯಿಂದ ಆಕರ್ಷಕ ಪಥಸಂಚಲನ ಗಮನ ಸೆಳೆಯಿತು.
ಬಳಿಕ ನೂತನವಾಗಿ ಉದ್ಘಾಟನೆಗೊಂಡ ಅಂಬೇಡ್ಕರ್ ಭವನದಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಸಭಾಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ರಾಜೇಶ್ ನಾಯ್ಕ್, ಸಂವಿಧಾನಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹೆಸರಲ್ಲಿರುವ ಭವನದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮ ಈ ಬಾರಿ ನಡೆಸಲಾಗುತ್ತಿರುವುದು ಮತ್ತಷ್ಟು ಸಂಭ್ರಮಪಡುವಂತಾಗಿದೆ. ಸಂವಿಧಾನದ ಅರಿವು ಎಲ್ಲರಲ್ಲೂ ಮೂಡುವಂತಾಗಲಿ ಎಂದು ಶುಭ ಹಾರೈಸಿದರು.
ಗಣರಾಜ್ಯೋತ್ಸವದ ಸಂದೇಶವನ್ನು ಶಿಕ್ಷಣ ಸಂಯೋಜಕಿ ಸುಜಾತಾಕುಮಾರಿ ಮಾಡಿದರು. ಈ ಸಂದರ್ಭ ನಿವೃತ್ತ ಸೈನಿಕರಾದ ವೆಂಕಪ್ಪ ಗೌಡ, ಬಾಲಕೃಷ್ಣ ರೈ ಒಕ್ಕೆತ್ತೂರು, ಕರಿಬಸಪ್ಪ, ಮೋನಪ್ಪ ಪೂಜಾರಿ ನರಿಕೊಂಬು ಮತ್ತು ಕರುಣಾಕರ ಎಸ್ ಅವರನ್ನು ಗೌರವಿಸಲಾಯಿತು. ನಾನಾ ಕ್ಷೇತ್ರಗಳ ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಬಂಟ್ವಾಳ ತಹಸೀಲ್ದಾರ್ ಎಸ್.ಬಿ.ಕೂಡಲಗಿ ಗಣರಾಜ್ಯೋತ್ಸವ ಸಂದೇಶವನ್ನು ನೀಡಿದರು. ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಜೋ ಪ್ರದೀಪ್ ಡಿಸೋಜ, ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್ ಎಂ.ಜಿ. ಉಪಸ್ಥಿತರಿದ್ದ ಕಾರ್ಯಕ್ರಮದಲ್ಲಿ ಉಪತಹಸೀಲ್ದಾರ್ ನವೀನ್ ಬೆಂಜನಪದವು ಮತ್ತು ಸಿಬಂದಿ ಶ್ರೀಕಲಾ ಕಾರಂತ ಕಾರ್ಯಕ್ರಮ ನಿರೂಪಣೆ ಮಾಡಿದರು.
Be the first to comment on "ಬಂಟ್ವಾಳದಲ್ಲಿ ತಾಲೂಕು ಮಟ್ಟದ ಗಣರಾಜ್ಯೋತ್ಸವ"