ಚಿತ್ರದ ಟ್ರೇಲರ್ ಗಾಗಿ ಈ ಲಿಂಕ್ ಕ್ಲಿಕ್ ಮಾಡಿರಿ: https://www.youtube.com/watch?v=VMtPPvaPxtA
ಜನವರಿ 26 ರಂದು ಕನ್ನಡದಲ್ಲಿ ಎರಡು ಕಲಾತ್ಮಕ ಸಿನಿಮಾ ಬಿಡುಗಡೆಗೆ ತಯಾರಾಗಿದೆ. ಎರಡು ಪ್ರತ್ಯೇಕ ಪ್ರೊಡಕ್ಷನ್ ಹೌಸ್ ನಿಂದ ಪ್ರತ್ಯೇಕ ನಿರ್ದೇಶಕರುಗಳಿಂದ ನಿರ್ಮಾಣವಾದ ಈ ಸಿನಿಮಾ ಒಂದೇ ದಿನ ಬಿಡುಗಡೆಯಾಗುತ್ತಿದೆ. ಈ ಸಿನಿಮಾದ ಪ್ರಚಾರವನ್ನು ಎರಡು ಸಿನಿಮಾ ತಂಡಗಳು ಒಟ್ಟೊಟ್ಟಿಗೆ ಮಾಡುತ್ತಿರುವುದು ವಿಶೇಷ.
ಚಂಪಾ.ಪಿ. ಶೆಟ್ಟಿ ನಿರ್ದೇಶನದ “ಕೋಳಿ ಎಸ್ರು” ಹಾಗೂ ಪೃಥ್ವಿ ಕೊಣನೂರು ನಿರ್ದೇಶಿಸಿರುವ “ಹದಿನೇಳೆಂಟು” ಚಿತ್ರಗಳು ಈ ವರ್ಷ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡಕ್ಕೆ ಹೆಸರು ತಂದು ಕೊಟ್ಟಿರುವಂತಹ ಎರಡು ಚಿತ್ರಗಳು. ಜನವರಿ 26 ರಂದು ಈ ಎರಡೂ ಚಿತ್ರಗಳು ಕರ್ನಾಟಕದಾದ್ಯಂತ ಎಲ್ಲಾ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಚಂಪಾ ಶೆಟ್ಟಿ ಅವರು ಹಿಂದೆ “ಅಮ್ಮಚ್ಚಿಯೆಂಬ ನೆನಪು” ಚಿತ್ರವನ್ನು ಪೃಥ್ವಿ ಕೋಣನೂರು ಅವರು “ರೈಲ್ವೆ ಚಿನ್” ಹಾಗೂ “ಪಿಂಕಿ ಎಲ್ಲಿ ‘ಚಿತ್ರಗಳನ್ನು ನಿರ್ದೇಶಿಸಿದ್ದರು.
‘ಕೋಳಿ ಎಸ್ರು’ ಮತ್ತು ‘ಹದಿನೇಳೆಂಟು’ ಚಲನಚಿತ್ರಗಳು, “ಬುಸಾನ್ ಅಂತರಾಷ್ಟ್ರೀಯ ಚಲನಚಿತ್ರೋತ್ಸವ”, “MAMI”,
“ಹಾಂಗ್ ಕಾಂಗ್ ಅಂತರಾಷ್ಟ್ರೀಯ ಚಲನಚಿತ್ರೋತ್ಸವ”, “ಕೋಲ್ಕತ್ತಾ ಅಂತರಾಷ್ಟ್ರೀಯ ಚಲನಚಿತ್ರೋತ್ಸವ”, “ಕೇರಳದ ಅಂತರಾಷ್ಟ್ರೀಯ ಚಲನಚಿತ್ರೋತ್ಸವ”, “TIFF ಕಿಡ್ಸ್”, “Zlin ಚಲನಚಿತ್ರೋತ್ಸವ”, “ಮಲೋರ್ನ್ ಫಿಲ್ಡ್ ಫಸ್ಸಿವಲ್” “IFFI ಗೋವಾ”, “ಪ್ರೇಗ್ ಅಂತರಾಷ್ಟ್ರೀಯ ಚಲನಚಿತ್ರೋತ್ಸವ”, “ನ್ಯೂಯಾರ್ಕ್ ಇಂಡಿಯನ್ ಫಿಲ್ಡ್ ಫೆಸ್ಟಿವಲ್ ” “ಒಟ್ಟಾವ ಇಂಡಿಯನ್ ಫಿಲ್ಡ್ ಫೆಸ್ಟಿವಲ್” ಮುಂತಾದ ಹಲವು
ಪ್ರತಿಷ್ಠಿತ ಚಿತ್ರೋತ್ಸವಗಳಿಗೆ ಆಯ್ಕೆ ಆಗಿದ್ದು ಮಾತ್ರವಲ್ಲ ಸುಮಾರು 40 ಕ್ಕೂ ಹೆಚ್ಚು ಪ್ರಶಸ್ತಿಗಳಿಗೆ ನಾಮ ನಿರ್ದೇಶನ ಗೊಂಡು ಸುಮಾರು 24ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಗಳಿಸಿ ಪ್ರೇಕ್ಷಕರಿಂದ ಹಾಗೂ ವಿಮರ್ಶಕರಿಂದ ಮೆಚ್ಚುಗೆ ಪಡೆದಿವೆ.
ಕಾ.ತ. ಚಿಕ್ಕಣ್ಣನವರ ಕತೆಯಾಧಾರಿತ “ಕೋಳಿ ಎಸ್ರು” ಚಿತ್ರದ ಕತೆ ಮೈಸೂರಿನ ಗ್ರಾಮೀಣ ಭಾಗದಾಗಿದ್ದು, ಚಿತ್ರದ ಶೂಟಿಂಗ್ ಕೂಡಾ ಟಿ. ನರಸಿಪರದ ಸುತ್ತಮುತ್ತಲೇ ಆಗಿದೆ. ಚಿತ್ರದಲ್ಲಿ ಟಿ ನರಸೀಪುರ, ಚಾಮರಾಜನಗರ ಭಾಷೆಯನ್ನು ಬಳಸಲಾಗಿದೆ.
ನೂರಕ್ಕೆ ನೂರು ಭಾಗ ಕಲಾವಿದರು ಮೈಸೂರು, ಮಂಡ್ಯದ ಗ್ರಾಮೀಣ ಕಲಾವಿದರೇ ಎಂಬುದು ವಿಶೇಷ.
“ಹದಿನೇಳೆಂಟು” ಚಿತ್ರ ಕಾಲೇಜಿನಲ್ಲಿ ನಡೆಯುವ ಒಂದು ವಿಡಿಯೋ ವೈರಲ್, ಹಾಗೂ ಅದರ ಸುತ್ತ ನಡೆಯುವ ಘಟನೆಗಳನ್ನು ಆಧರಿಸಿದ ಸಿನೆಮಾ. ಇಂದಿನ ಮಕ್ಕಳು ಹಾಗೂ ಪೋಷಕರು ನೋಡಲೇ ಬೇಕಾದ ಚಿತ್ರವಾಗಿದೆ. ಎರಡೂ ಚಿತ್ರಗಳ ಟ್ರೈಲರ್ ಗಳು ಪಿ ಆರ್ ಕೆ ಆಡಿಯೋದಲ್ಲಿ ರಿಲೀಸ್ ಆಗಿ ಜನರಿಂದ ಮೆಚ್ಚುಗೆ ಪಡೆದಿದೆ.
ಹೊಸ ಪ್ರಯೋಗ
ಈ ಎರಡೂ ಚಿತ್ರಗಳೂ ಕೇವಲ ಚಿತ್ರೋತ್ಸವಕ್ಕೆ ಸೀಮಿತವಾಗದೆ, ಸಾಮಾನ್ಯ ಪ್ರೇಕ್ಷಕರಿಗೂ ತಲುಪಬೇಕೆಂಬ ಉದ್ದೇಶದಿಂದ
ಎರಡೂ ತಂಡ ಒಟ್ಟಾಗಿ ಸೇರಿ ತಮ್ಮ ಚಿತ್ರಗಳ ಬಿಡುಗಡೆಗೆ ಹೊಸ ಯೋಜನೆ ಹಾಕಿಕೊಂಡಿದೆ. ಎರಡೂ ತಂಡಗಳೂ ಸೇರಿ ಪರಸ್ಪರ. ಲೈವ್ ಎಂಬ ವೆಬ್ ಸೈಟ್ ಮೂಲಕ ಈಗಾಗಲೇ ಟಿಕೆಟ್ ಕೊಂಡುಕೊಳ್ಳುವ ಯೋಜನೆ ರೂಪಿಸಿಕೊಂಡಿದೆ. ದೊಡ್ಡ ಬ್ಯಾನರ್ ಸಿನಿಮಾ ಹೊರತುಪಡಿಸಿ ಮಲ್ಟಿಪ್ಲೆಕ್ಸ್ ಗಳಲ್ಲಿ ಸಿನಿಮಾಗಳು ಬಿಡುಗಡೆಯಾಗುವ ಒಂದೆರಡು ದಿನದ ಮೊದಲಷ್ಟೆ ಸಿನಿಮಾ ಪ್ರಿಯರಿಗೆ ಟಿಕೆಟ್ ಬುಕ್ ಮಾಡಲು ಸಾಧ್ಯ. ಆದರೆ ಅಷ್ಟು ಕಡಿಮೆ ಅವಧಿಯಲ್ಲಿ ಸಿನಿ ಪ್ರಿಯರನ್ನು ತಲುಪುವುದು ಬಹಳ ಕಷ್ಟಕರ. ಇದಕ್ಕಾಗಿ ಪರಸ್ಪರ .ಲೈವ್ ಎಂಬುದನ್ನು ಆರಂಭಿಸಿ ಅದರಲ್ಲಿ ಟಿಕೆಟ್ ಕಾದಿರಿಸಬಹುದು. ಇದು ನೇರವಾಗಿ ಟಿಕೆಟ್ ಬುಕ್ ಮಾಡುವುದಿಲ್ಲ. ಇಲ್ಲಿ ಟಿಕೆಟ್ ಕಾದಿರಿಸಿದರೆ ಸಿನಿಮಾ ತಂಡಕ್ಕೆ ಇಷ್ಟು ಮಂದಿ ಸಿನಿಮಾ ನೋಡಲು ಆಸಕ್ತರಾಗಿದ್ದಾರೆ ಎಂದು ತಿಳಿಯುತ್ತದೆ. ಈ ಎರಡು ಸಿನಿಮಾವನ್ನು ಪರಸ್ಪರ.ಲೈವ್ ನಲ್ಲಿ ಬುಕ್ ಮಾಡಿದ ಗ್ರಾಹಕರಿಗೆ ಸಿನಿಮಾ ತಂಡವೆ ಪೋನ್ ಮಾಡಿ ಯಾವ ಥಿಯೇಟರ್ ನಲ್ಲಿ ಸಿನಿಮಾ ನೋಡಲು ಆಸಕ್ತಿ ಎಂಬುದನ್ನು ತಿಳಿದು ಟಿಕೆಟ್ ನೀಡುತ್ತದೆ. ಇದು ಹೊಸ ಪ್ರಯೋಗವಾಗಿದೆ.
ಈ ಬಗ್ಗೆ ಮಾತನಾಡಿದ ಕೋಳಿ ಎಸ್ರು ಸಿನಿಮಾ ನಿರ್ದೇಶಕಿ ಚಂಪಾ ಪಿ ಶೆಟ್ಟಿ ಈ ಎರಡು ಚಿತ್ರಗಳು ಜ.26 ರಂದು ಬಿಡುಗಡೆಯಾಗುತ್ತಿದೆ. ಎರಡು ಚಿತ್ರಗಳು ಕಮರ್ಷಿಯಲ್ ಸಿನಿಮಾಕ್ಕಿಂತ ಭಿನ್ನವಾದ ಚಿತ್ರಗಳು. ಎರಡು ಚಿತ್ರಗಳು ಅಂತರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಪ್ರಶಸ್ತಿ ಪಡೆದ ಚಿತ್ರಗಳು. ಕನ್ನಡಕ್ಕೆ ಹೆಮ್ಮೆ ತಂದುಕೊಟ್ಟ ಈ ಚಿತ್ರಗಳನ್ನು ನೋಡಿ ಹಾರೈಸಿ ಎನ್ನುತ್ತಾರೆ.
ಹದಿನೇಳೆಂಟು ಚಿತ್ರದ ನಿರ್ದೇಶಕ ಪೃಥ್ವಿ ಕೊಣನೂರು ಮಾತನಾಡಿ ಈ ಎರಡು ಚಿತ್ರಗಳನ್ನು ಒಟ್ಟಿಗೆ ಬಿಡುಗಡೆ ಮಾಡುತ್ತಿದ್ದೇವೆ. ಹೊಸ ಪ್ರಯತ್ನವಾಗಿ ಪರಸ್ಪರ.ಲೈವ್ ಮೂಲಕ ಎರಡು ಸಿನಿಮಾಗೆ ಒಟ್ಟಿಗೆ ಕಾದಿರಿಸುವ ವ್ಯವಸ್ಥೆ ಮಾಡಲಾಗಿದೆ ಎನ್ನುತ್ತಾರೆ.
Be the first to comment on "‘ಕೋಳಿ ಎಸ್ರು’ ಮತ್ತು ‘ಹದಿನೇಳೆಂಟು’ — ಸಿನಿಮಾ ರಿಲೀಸ್ ಗೆ ಹೊಸ ಪ್ರಯೋಗ"