ಸರ್ಕಾರಿ ಪಾಲಿಟೆಕ್ನಿಕ್ ಬಂಟ್ವಾಳ ಕಾಲೇಜಿನ ಎನ್ ಎಸ್ ಎಸ್ ಘಟಕದ ವಾರ್ಷಿಕ ವಿಶೇಷ ಶಿಬಿರ ಮಹತೋಭಾರ ಶ್ರೀ ಕಾರಿಂಜೇಶ್ವರ ದೇವಾಲಯದಲ್ಲಿ ನಡೆಯುತ್ತಿದ್ದು,ಇಂದು ವಿಶೇಷ ಶಿಬಿರದ ಶ್ರಮದಾನದ ಅಂಗವಾಗಿ ಕೊಡ್ಯಮಲೆ ರಕ್ಷಿತಾರಣ್ಯದಲ್ಲಿ ಸ್ವಚ್ಛತಾ ಅಭಿಯಾನವನ್ನು ಅರಣ್ಯ ಇಲಾಖೆ ಸಹಯೋಗದೊಂದಿಗೆ ನಡೆಸಲಾಯಿತು.
ಅಭಿಯಾನದಲ್ಲಿ ಎನ್ ಎಸ್ ಎಸ್ ಶಿಬಿರಾರ್ಥಿಗಳು ಹಾಗು ಅರಣ್ಯ ಇಲಾಖೆ ಸಿಬಂಧಿಗಳು ಸಕ್ರೀಯವಾಗಿ ಪಾಲ್ಗೊಂಡರು.ಈ ಸಂದರ್ಭದಲ್ಲಿ ಬಂಟ್ವಾಳ ವಲಯ ಅರಣ್ಯ ಅಧಿಕಾರಿ ಆದ ಪ್ರಪುಲ್ ಶೆಟ್ಟಿ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು ಅರಣ್ಯ ಹಾಗೂ ಪರಿಸರದ ಮಹತ್ವವನ್ನು ತಿಳಿಸಿದರು.
ಉಪವಲಯ ಅರಣ್ಯಾಧಿಕಾರಿ ಅನಿಲ್ ಹಾಗು ಗ್ರಾಮ ಅರಣ್ಯ ಅಭಿವೃದ್ದಿ ಸಮಿತಿಯಾ ಅದ್ಯಕ್ಷ ಉದಯ ಕುಮಾರ್, ಸ್ನೇಕ್ ಕಿರಣ್, ಎನ್ ಎಸ್ ಎಸ್ ಶಿಬಿರದ ಶಿಬಿರಾಧಿಕಾರಿ ,ಸರ್ಕಾರಿ ಪಾಲಿಟೆಕ್ನಿಕ್ ಬಂಟ್ವಾಳದ ಉಪನ್ಯಾಸಕ ಮೋಹನ ಎನ್, ಸಹಾಯಕ ಶಿಬಿರಾ ಧಿಕಾರಿಗಳಾದ ರಶ್ಮಿ ಎಂ ಸಿ, ಶ್ವೇತಾ ಎನ್ ಕೆ ಹಾಗೂ ಭಾಸ್ಕರ ಎಲ್ ಭಾಗವಹಿಸಿದರು.
Be the first to comment on "ಕೊಡ್ಯಮಲೆ ರಕ್ಷಿತಾರಣ್ಯ ಸುತ್ತಮುತ್ತ ಸ್ವಚ್ಛತಾ ಅಭಿಯಾನ ನಡೆಸಿದ ಸರ್ಕಾರಿ ಪಾಲಿಟೆಕ್ನಿಕ್ ಎನ್ನೆಸ್ಸೆಸ್ ವಿದ್ಯಾರ್ಥಿಗಳು"