ಮಹಿಳೆಯರು ಜಾಗೃತರಾದರೆ, ಮನೆ ಬೆಳಗಿದಂತೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಂನ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದ್ದಾರೆ.
ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ಶ್ರೀ ವೀರಮಾರುತಿ ವ್ಯಾಯಮ ಶಾಲೆ ಟ್ರಸ್ಟ್ (ರಿ.)ಮಾರುತಿನಗರ ನರಿಕೊಂಬು ವತಿಯಿಂದ ನೂತನವಾಗಿ ನಿರ್ಮಿಸಿದ ವ್ಯಾಯಮಶಾಲೆ ಹಾಗೂ ಸಭಾಭವನ ಲೋಕಾರ್ಪಣೆ ನೆರವೇರಿಸಿ ಅವರು ಮಾತನಾಡಿದರು.
ನಮ್ಮಲ್ಲಿ ಮಾನವೀಯತೆ ಗುಣದ ಕೊರತೆ ಎದ್ದು ಕಾಣುತ್ತದೆ. ನಾವು ನಮ್ಮದು ಎನ್ನುವುದೇ ನಿಜವಾದ ಭಾರತೀಯತೆ, ಧಾರ್ಮಿಕ ಶ್ರದ್ಧಾ ಕೇಂದ್ರಗಳು ಉತ್ತಮ ಸಂಸ್ಕಾರ ಕಲಿಸುವ ತಾಣಗಳಾಗಲಿ ಎಂದರು.
ಅಧ್ಯಕ್ಷತೆಯನ್ನು ಉದ್ಯಮಿ ಜಿತೇ೦ದ್ರ ಎಸ್ ಕೊಟ್ಟಾರಿ ವಹಿಸಿದ್ದು, ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಸಮುದಾಯ ಭವನ ವನ್ನು ವೇದಮೂರ್ತಿ ಜನಾರ್ಧನ ವಾಸುದೇವ ಭಟ್ ಉದ್ಘಾಟಿಸಿದರು. ಎರಕಳ ದಿವಂಗತ ಬಿ. ಗಣೇಶ ಸೋಮಯಾಜಿ ವೇದಿಕೆಯನ್ನು ಶ್ರೀ ಭಯಂಕೇಶ್ವರ ಸದಾಶಿವ ದೇವಸ್ಥಾನ ಪಾಣೆಮಂಗಳೂರಿನ ಆಡಳಿತ ಮುಖ್ಯಸ್ಥರಾದ ಬಿ ರಘುನಾಥ ಸೋಮಯಾಜಿ ಅನಾವರಣಗೊಳಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಾಜಿ ಸಚಿವ ಬಿ ರಮಾನಾಥ ರೈ ಮಾತನಾಡಿ ವರ್ತಮಾನದ ಸಮಾಜದಲ್ಲಿ ಕೃತಜ್ಞತೆ ಮುಖ್ಯ ಎಂದರು.
ವ್ಯಾಯಾಮ ಶಾಲೆಯ ಅಭಿವೃದ್ಧಿಗೆ ದುಡಿದ ಹಿರಿಯ ಸದಸ್ಯರಾದ ಆನಂದ ನಾಯ್ಕ್ ಮಾರುತಿನಗರ, ಅಶೋಕ್ ಟೈಲರ್ ಕರ್ಬೇಟ್ಟು, ಬಾಬು ಪೂಜಾರಿ ಕೋಡಿಮಾಜಲ್, ಕೃಷ್ಣಪ್ಪ ಡ್ರೈವರ್ ಮಾರುತಿನಗರ, ಮೋಹನ್ ಆಚಾರ್ಯ ಮಾರುತಿನಗರ, ಮಂಜುನಾಥ ನಾಯ್ಕ್ ಮಾರುತಿನಗರ, ಸುಖೀರ್ತಿ ಜೈನ್ ಮಾಣಿಮಜಲ್, ಜಯಾನಂದ ಸಫಲ್ಯ ಬಂಟ್ವಾಳ, ಪುರುಷೋತಮ ಎಸ್ ಮಣಿಮಜಲ್, ಸದಾನಂದ ಪೂಜಾರಿ ಕೋಡಿಮಜಲ್, ಪದ್ಮನಾಭ ಸಫಲ್ಯ ಮಾರುತಿನಗರ, ಪ್ರಭಾಕರ ಪೂಜಾರಿ ಕೋಡಿಮಜಲ್, ಸುಬ್ಬಣ್ಣ ನಾಯ್ಕ್ ಮಾರುತಿನಗರ, ಹಾಗೂ ಕ್ರೀಡಾಪಟು ಸಂತೋಷ್ ಮಣಿಮಜಲ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ನರಿಕೊಂಬು ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್ ಕುಮಾರ್, ಪ್ರಮುಖರಾದ ಜಗನಾಥ್ ಬಂಗೇರ ನಿರ್ಮಾಲ್, ಪದ್ಮನಾಭ ಮಯ್ಯ, ಮಾಧವ ಗೌಡ, ಹರೀಶ್ ಪುತ್ರೂಟ್ಟಿಬೈಲು, ಪಂಚಾಯತ್ ಸದಸ್ಯರುಗಳಾದ ಪ್ರಕಾಶ್ ಕೋಡಿಮಜಲು, ಶುಭ ಶಶಿಧರ್, ವೀರಮಾರುತಿ ವ್ಯಾಯಮ ಶಾಲೆ ಟ್ರಸ್ಟ್ ಅಧ್ಯಕ್ಷ ಚಂದ್ರಹಾಸ ಕೋಡಿಮಜಲು, ಮಹಿಳಾ ಮಂಡಳಿ ಆದ್ಯೆಕ್ಷೆ ಅನಿತಾ ಜೆ,ಮೊದಲದವರು ಉಪಸ್ಥಿತರಿದ್ದರು.
ಕಟ್ಟಡ ನಿರ್ಮಾಣ ಸಮಿತಿಯ ಉಪಾಧ್ಯಕ್ಷ ಬಾಲಕೃಷ್ಣ ಮಣಿಮಜಲ್ ಸ್ವಾಗತಿಸಿ, ಕೋಶಾಧಿಕಾರಿ ಯಾದವ ಕುಲಾಲ್ ಪ್ರಾಸ್ತಾವಿಕ ಮಾತನಾಡಿದರು. ನಯನ ಯಾದವ್ ವಂದಿಸಿದರು. ರಾಜೇಶ್ ಕೊಟ್ಟರಿ ಕಲ್ಲಡ್ಕ ಕಾರ್ಯಕ್ರಮ ನಿರೂಪಿಸಿದರು.
Be the first to comment on "ನರಿಕೊಂಬು ಗ್ರಾಮದ ಶ್ರೀ ವೀರಮಾರುತಿ ವ್ಯಾಯಮ ಶಾಲೆ ಟ್ರಸ್ಟ್ (ರಿ.)ಮಾರುತಿನಗರ ನರಿಕೊಂಬು ವತಿಯಿಂದ ನೂತನವಾಗಿ ನಿರ್ಮಿಸಿದ ವ್ಯಾಯಮಶಾಲೆ ಹಾಗೂ ಸಭಾಭವನ ಲೋಕಾರ್ಪಣೆ"