ಜನವರಿ 7ರಂದು ಭಾನುವಾರ ಬಂಟ್ವಾಳದ ಸ್ಪರ್ಶ ಕಲಾ ಮಂದಿರದಲ್ಲಿ ಪುತ್ತೂರಿನ ಶ್ರೀದೇವಿ ನೃತ್ಯಾರಾಧನಾ ಕಲಾಕೇಂದ್ರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ನೃತ್ಯಧಾರಾ ಮತ್ತು ಕಲಾನಯನ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಏರ್ಪಡಿಸಿದೆ.
ಸಂಜೆ 4 ಗಂಟೆಗೆ ದೀಪಪ್ರಜ್ವಲನ, 4.15ಕ್ಕೆ ನೃತ್ಯಧಾರಾ ಕಾರ್ಯಕ್ರಮ, 6.30ಕ್ಕೆ ಸಭಾ ಕಾರ್ಯಕ್ರಮಗಳು ನಡೆಯಲಿವೆ ಎಂದು ನೃತ್ಯನಿರ್ದೇಶಕಿ ರೋಹಿಣಿ ಉದಯ್ ಮತ್ತು ಸಂಚಾಲಕ ಉದಯ ವೆಂಕಟೇಶ ಭಟ್ ತಿಳಿಸಿದ್ದಾರೆ.
ಅಧ್ಯಕ್ಷತೆಯನ್ನು ವಿದ್ವಾನ್ ಕೆ.ಚಂದ್ರಶೇಖರ ನಾವಡ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಉದ್ಯಮಿ ಪ್ರಭು ರೈ ಭಾಗವಹಿಸುವರು. ಖ್ಯಾತ ಯಕ್ಷಗಾನ ಕಲಾವಿದ ದಿ.ನಯನಕುಮಾರ್ ಸ್ಮರಣಾರ್ಥ ಕಲಾನಯನ ಪ್ರಶಸ್ತಿಯನ್ನು ಚರ್ಮವಾದ್ಯ ತಯಾರಕ ಹಾಗೂ ಕೊಳಲು ವಾದಕ ರಾಜರತ್ನಂ ದೇವಾಡಿಗ ಅವರಿಗೆ ನೀಡಲಾಗುವುದು. ಈ ಸಂದರ್ಭ ವಸ್ತ್ರವಿನ್ಯಾಸಕ ಸುನಿಲ್ ಉಚ್ಚಿಲ ದಂಪತಿಯನ್ನು ಸನ್ಮಾನಿಸಲಾಗುವುದು. ಬಳಿಕ ನೃತ್ಯ ಕಾರ್ಯಕ್ರಮಗಳು ನಡೆಯಲಿವೆ ಎಂದವರು ತಿಳಿಸಿದ್ದಾರೆ.
Be the first to comment on "ಜ.7ರಂದು ನೃತ್ಯಧಾರಾ, ಕಲಾನಯನ ಪ್ರಶಸ್ತಿ ಪ್ರದಾನ"