2024ರ ಜುಲೈ ತಿಂಗಳಲ್ಲಿ ಅಜಿಲಮೊಗರು ಕಡೇಶಿವಾಲಯ ಸಂಪರ್ಕಿಸುವ ಸೌಹಾರ್ದ ಸೇತುವೆ ಕಾಮಗಾರಿ ಪೂರ್ಣವಾಗಿ ಲೋಕಾರ್ಪಣೆಯಾಗಬಹುದು ಎಂದು ಅಧಿಕಾರಿಗಳು ಮಾಜಿ ಸಚಿವ ಬಿ.ರಮಾನಾಥ ರೈ ಅವರಿಗೆ ಭರವಸೆ ನೀಡಿದ್ದಾರೆ ಕಾಮಗಾರಿಯು ಪುನರ್ ಪ್ರಾರಂಭಿಸಲು ಮಾಜಿ ಸಚಿವ ಬಿ. ರಮಾನಾಥ ರೈ ಕೆ.ಆರ್.ಡಿ.ಸಿ.ಎಲ್. ಮುಖ್ಯ ಅಧಿಕಾರಿಗಳ ತಂಡದ ಜೊತೆ ಸ್ಥಳಕ್ಕೆ ಭೇಟಿ ನೀಡಿ ವೀಕ್ಷಿಸಿ ಅಲ್ಪ ಸಮಯದಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ತಿಳಿಸಿದರು. ಈ ಸಂದರ್ಭ ಅಧಿಕಾರಿಗಳು 2024ರ ಜುಲೈ ತಿಂಗಳಿನಲ್ಲಿ ಸೌಹಾರ್ದ ಸೇತುವೆಯ ಕಾಮಗಾರಿ ಪೂರ್ಣಗೊಳಿಸಿ ಲೋಕಾರ್ಪಣೆಯ ಭರವಸೆ ನೀಡಿದರು.
ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಪದ್ಮಶೇಖರ್ ಜೈನ್, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಪ್ರಮುಖರಾದ ಅಬ್ಬಾಸ್ ಅಲಿ, ಸಂಪತ್ ಕುಮಾರ್ ಶೆಟ್ಟಿ , ಶಿವಪ್ಪ ಪೂಜಾರಿ, ಕಾಂಚಲಕ್ಷಿ, ವಿಮಲಾ, ಇಕ್ರ ಖದರ್, ಅಬ್ದುಲ್ ಹಮೀದ್ ಯಾನೆ ಚೇರಿಮೋನು, ಸುರೇಶ್ ಪೂಜಾರಿ, ದಾವೂದ್, ಈಶ್ವರ ಪೂಜಾರಿ, ಹರಿಶ್ಚಂದ್ರ ಕಾಡಬೆಟ್ಟು, ಸಂಜೀವ ಕಡೇಶಿವಾಲಯ,ಸಂಜೀವ ಪೂಜಾರಿ ದಾಸಕೋಡಿ, ಫಾರೂಕ್, ಗೀತಾ, ಸಂಜೀವ ಪೂಜಾರಿ ಕಟ್ಟಡದೆ, ದಿನೇಶ್ ಭಟ್, ಪುವಪ್ಪ ಪೂಜಾರಿ ಆಗಚರಕೋಡಿ, ವಿಜಯ ಕುಮಾರ್ ಎಸ್, ಶೀನಾ ನಾಯ್ಕ, ನಳಿನಾಕ್ಷಿ, ರತ್ನಾಕರ ನಾಯ್ಕ, ಪುರುಷೋತ್ತಮ ಶೆಟ್ಟಿ, ಸಲೀಂ, ಪೂವಪ್ಪ ಮೊದಲಾದವರು ಉಪಸ್ಥಿತರಿದ್ದರು.
Be the first to comment on "ಸೌಹಾರ್ದ ಸೇತುವೆ ಕಾಮಗಾರಿ ಶೀಘ್ರ ಪೂರ್ಣ: ಅಧಿಕಾರಿಗಳಿಂದ ರಮಾನಾಥ ರೈ ಅವರಿಗೆ ಭರವಸೆ"