ಜಮೀಯ್ಯತುಲ್ ಫಲಾಹ್ ಬಂಟ್ವಾಳ ಘಟಕ ಹಮ್ಮಿಕೊಂಡ ಉಚಿತ ಕೃತಕ ಕೈ ಕಾಲು ಜೋಡಣಾ ಶಿಬಿರ ಜಿಲ್ಲೆಯಲ್ಲೇ ಮಾದರಿ ಕಾರ್ಯಕ್ರಮವಾಗಿದೆ ಎಂದು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅಭಿಪ್ರಾಯಪಟ್ಟರು.
ಬಂಟ್ವಾಳದ ಲಯನ್ಸ್ ಸೇವಾ ಮಂದಿರದಲ್ಲಿ ಭಾನುವಾರ ಜಮೀಯ್ಯತುಲ್ ಫಲಾಹ್ ಬಂಟ್ವಾಳ ತಾಲೂಕು ಘಟಕ ಹಾಗೂ ಬೆಂಗಳೂರಿನ ಕರ್ನಾಟಕ ಮಾರ್ವಾಡಿ ಯೂತ್ ಫೆಡರೇಶನ್ ವತಿಯಿಂದ ಕೈ ಕಾಲುಗಳಿಲ್ಲದ ಬಡ ಅಶಕ್ತರಿಗೆ ಉಚಿತ ಕೃತಕ ಕೈ- ಕಾಲುಗಳ ಜೋಡಣಾ ಶಿಬಿರದ ಎರಡನೇ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಮಾಜದ ಆಸಕ್ತರ ನೋವುಗಳಿಗೆ ಸ್ಪಂದಿಸುವ ಮೂಲಕ ಮಾನವೀಯ ಮೌಲ್ಯಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಂಡಾಗ ದೇಶದ ಪ್ರಗತಿಯ ಜೊತೆಗೆ ಸಾಮಾಜಿಕ ಸಮತೋಲನ ಸಾಧ್ಯ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ ಜಮೀಯ್ಯತುಲ್ ಫಲಾಹ್ ಸಂಸ್ಥೆಯು ಹಲವಾರು ವರ್ಷಗಳಿಂದ ಯಾವುದೇ ರೀತಿಯ ಸ್ವಯಂ ಪ್ರತಿಫಲಾಪೇಕ್ಷೆ ಇಲ್ಲದೆ ನಡೆಸಿಕೊಂಡು ಬರುತ್ತಿರುವ ಶೈಕ್ಷಣಿಕ, ಸಾಮಾಜಿಕ ಸೇವೆಯು ಪ್ರಶಂಸನೀಯ ಎಂದರು.
ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಮಾತನಾಡಿ ಜಾತಿ ಮತ ಭೇದವಿಲ್ಲದೆ ಪರಸ್ಪರ ಮಾನವೀಯತೆಯನ್ನು ಬೆಸೆದು ಅಂತಃಕರಣದ ಪರಿವರ್ತನೆಗೆ ಈ ಶಿಬಿರ ಪೂರಕ ಕಾರ್ಯಕ್ರಮ ಎಂದರು.
ಜಮೀಯ್ಯತುಲ್ ಫಲಾಹ್ ಬಂಟ್ವಾಳ ತಾಲೂಕು ಅಧ್ಯಕ್ಷ ರಶೀದ್ ವಿಟ್ಲ ಅಧ್ಯಕ್ಷತೆ ವಹಿಸಿದ್ದರು. ಹಾಸನ ಜನಪ್ರಿಯ ಫೌಂಡೇಶನ್ ಅದ್ಯಕ್ಷ ಡಾ. ವಿ.ಕೆ.ಅಬ್ದುಲ್ ಬಶೀರ್, ಮಂಗಳೂರು ಕೋಸ್ಟಲ್ ಫ್ರೆಂಡ್ಸ್ ಸ್ಥಾಪಕ ಸಿರಾಜ್ ಪರ್ಲಡ್ಕ, ಮಂಗಳೂರು ಭಾರತ್ ಕನ್ ಸ್ಟ್ರಕ್ಷನ್ ಮಾಲಕ ಮುಸ್ತಫಾ ಅತಿಥಿಗಳಾಗಿ ಭಾಗವಹಿಸಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಇದೇ ವೇಳೆ ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಇದರ ಅಧ್ಯಕ್ಷ ಅರ್ಜುನ್ ಭಂಡಾರ್ಕರ್ ಹಾಗೂ
ಬೆಂಗಳೂರಿನ ಕರ್ನಾಟಕ ಮಾರ್ವಾಡಿ ಯೂತ್ ಫೆಡರೇಶನ್ ಇದರ ಲಿಂಬ್ ಸೆಂಟರ್ ನ ಚೀಫ್ ಟೆಕ್ನಿಷಿಯನ್ ಮುರಳಿ ಅವರನ್ನು ಸನ್ಮಾನಿಸಲಾಯಿತು. ಸಿಬ್ಬಂದಿಗಳಾದ ವೆಂಕಟ್ರಾಮಯ್ಯ, ಗಣೇಶ್, ನಾರಾಯಣ ರಾವ್, ಡ್ಯಾನಿಯಲ್ ಪಿಂಟೋ ಅವರನ್ನು ಗೌರವಿಸಲಾಯಿತು.
ಜಮೀಯ್ಯತುಲ್ ಫಲಾಹ್ ದ.ಕ. ಮತ್ತು ಉಡುಪಿ ಜಿಲ್ಲಾದ್ಯಕ್ಷ ಕೆ.ಕೆ.ಸಾಹುಲ್ ಹಮೀದ್, ಪೂರ್ವಾದ್ಯಕ್ಷ ಹಾಗೂ ಹಿದಾಯ ಫೌಂಡೇಶನ್ ಅದ್ಯಕ್ಷ ಹನೀಫ್ ಹಾಜಿ ಗೋಳ್ತಮಜಲು, ತುಂಬೆ ಗ್ರಾಮ ಪಂಚಾಯತ್ ಅಧ್ಯಕ್ಷ ಗಣೇಶ್ ಪೂಜಾರಿ, ಜಮೀಯ್ಯತುಲ್ ಫಲಾಹ್ ಕೋಶಾಧಿಕಾರಿ ಎಂ.ಎಚ್. ಇಕ್ಬಾಲ್, ಉಪಾಧ್ಯಕ್ಷ ಶೇಖ್ ರಹ್ಮತುಲ್ಲಾ ಕಾವಳಕಟ್ಟೆ, ಅಜೀವ ಸದಸ್ಯರುಗಳಾದ ಹಂಝ ಆನಿಯಾ ದರ್ಬಾರ್, ಅಬೂಬಕ್ಕರ್ ಪುತ್ತು ಉಪ್ಪಿನಂಗಡಿ , ಡಿ.ಪಿ.ಸಿದ್ದೀಕ್ ಹಾಜಿ, ಮುಹಮ್ಮದ್ ಸಾಗರ್, ಕಾರ್ಯಕ್ರಮ ಸಂಯೋಜಕ ಹಕೀಂ ಕಲಾಯಿ ಉಪಸ್ಥಿತರಿದ್ದರು.
ಜಮೀಯ್ಯತುಲ್ ಫಲಾಹ್ ನ ಪ್ರಮುಖರಾದ ಬಿ.ಎಂ.ಅಬ್ಬಾಸ್ ಅಲಿ, ಎಫ್.ಎಂ. ಬಶೀರ್ ಫರಂಗಿಪೇಟೆ, ಪಿ. ಮುಹಮ್ಮದ್ ಪಾಣೆಮಂಗಳೂರು, ಬಿ.ಎಂ.ತುಂಬೆ, ಮುಹಮ್ಮದ್ ನಾರಂಕೋಡಿ, ಸುಲೈಮಾನ್ ಸೂರಿಕುಮೇರು, ಆಶಿಕ್ ಕುಕ್ಕಾಜೆ, ಉಬೈದುಲ್ಲಾ ವಿಟ್ಲ ಬಝಾರ್, ಎಸ್.ಎಂ.ಮಹಮ್ಮದ್ ಅಲಿ ಶಾಂತಿಅಂಗಡಿ, ಬಿ.ಎ. ಮುಹಮ್ಮದ್ ಬಂಟ್ವಾಳ, ತೌಫೀಕ್ ರಫೀಕ್ ಹಾಜಿ ಆಲಡ್ಕ, ಶಾಕಿರ್ ಅಳಕೆಮಜಲು ಮೊದಲಾದವರು ಭಾಗವಹಿಸಿದ್ದರು .
ಉಪನ್ಯಾಸಕ ಅಬ್ದುಲ್ ರಝಾಕ್ ಅನಂತಾಡಿ ಸ್ವಾಗತಿಸಿ, ಆಶಿಕ್ ಕುಕ್ಕಾಜೆ ಕಿರಾಅತ್ ಪಠಿಸಿದರು. ಜಮೀಯ್ಯತುಲ್ ಫಲಾಹ್ ಬಂಟ್ವಾಳ ಘಟಕದ ಪೂರ್ವಾದ್ಯಕ್ಷ ಆಶಿಫ್ ಇಕ್ಬಾಲ್ ಕುಂಪನಮಜಲು ವಂದಿಸಿದರು. ಉಪಾಧ್ಯಕ್ಷ ಲತೀಫ್ ನೇರಳಕಟ್ಟೆ ಕಾರ್ಯಕ್ರಮ ನಿರೂಪಿಸಿದರು.
Be the first to comment on "ಜಮೀಯತುಲ್ ಫಲಾಹ್ ನಿಂದ ಜಿಲ್ಲೆಯಲ್ಲೇ ಮಾದರಿ ಕಾರ್ಯ: ಯು.ಟಿ.ಖಾದರ್"