ಚಿಕ್ಕಮಗಳೂರಿನಲ್ಲಿ ಯುವ ವಕೀಲರಾದ ಪ್ರೀತಮ್ ಎಂ ಟಿ ಅವರಿಗೆ ಪೊಲೀಸ್ ದೌರ್ಜನ್ಯವಾಗಿದೆ ಎಂದು ಆರೋಪಿಸಿ, ಬಂಟ್ವಾಳದ ವಕೀಲರ ಸಂಘದ ವತಿಯಿಂದ ಸೋಮವಾರ ಜೆ ಎಂ ಎಫ್ ಸಿ ನ್ಯಾಯಾಲಯ ಎದುರು ಪ್ರತಿಭಟನೆ ನಡೆಯಿತು. ಬಳಿಕ ಬಂಟ್ವಾಳ ತಹಸೀಲ್ದಾರ್ ಮೂಲಕ ಗೃಹಸಚಿವರಿಗೆ ಮನವಿ ಸಲ್ಲಿಸಲಾಯಿತು. ಆರೋಪಿ ಪೋಲೀಸರನ್ನು ತಕ್ಷಣ ಬಂಧಿಸಬೇಕು ಮತ್ತು ಅವರ ವಿರುದ್ದ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕು ಮತ್ತು ತಕ್ಷಣ ಸರಕಾರ ವಕೀಲರ ರಕ್ಷಣಾ ಕಾಯಿದೆ ಜಾರಿಗೊಳಿಸಬೇಕು ಎಂದು ಈ ಸಂದರ್ಭ ಪ್ರತಿಭಟನಾಕಾರರು ಒತ್ತಾಯಿಸಿದರು.
ವಕೀಲರ ಸಂಘದ ಮಾಜಿ ಅಧ್ಯಕ್ಷ ಉಮೇಶ್ ಕುಮಾರ್ ವೈ ಮಾತನಾಡಿ, ದೌರ್ಜನ್ಯ ಕಾನೂನುಬಾಹಿರವಾಗಿದ್ದು, ಆರೋಪಿಗಳ ವಿರುದ್ದ ಎಫ.ಐ.ಆರ್. ದಾಖಲೆ ಆದರೂ ಈ ವರೆಗೂ ಬಂದಿಸದೆ ಇರುವ ವಿಳಂಬ ದೋರಣೆ ಸರಿಯಲ್ಲ ಎಂದರು.
ವಕೀಲರಾದ ಮೋಹನ್ ಕಡೇಶಿವಾಲ್ಯ ಮಾತನಾಡಿ ನಿರಂತರವಾಗಿ ಯುವ ವಕೀಲರ ಮೇಲಿನ ದೌರ್ಜನ್ಯ ಖoಡನೀಯ . ನ್ಯಾಯಾಲಯ ಈ ಬಗ್ಗೆ ತಕ್ಷಣ ಮದ್ಯಪ್ರವೇಶಬೇಕು ಎಂದು ಒತ್ತಾಯಿಸಿದರು. ಬಂಟ್ವಾಳ ವಕೀಲರ ಸಂಘದ ಅಧ್ಯಕ್ಷ ರಿಚರ್ಡ್ ಕೋಸ್ತಾ ಮಾತನಾಡಿ, ಹಲ್ಲೆಗೊಳಗಾದ ವಕೀಲರ ಬೆಂಬಲವಾಗಿ ವಕೀಲರ ಸಂಘ ಬಂಟ್ವಾಳ ಸದಾ ಜೊತೆಗಿರುತ್ತದೆ ಎಂಬ ಭರವಸೆ ನೀಡಿದರು. ಬಂಟ್ವಾಳ ವಕೀಲರ ಸಂಘದ ಪದಾಧಿಕಾರಿಗಳು ಈ ಸಂದರ್ಭ ಹಾಜರಿದ್ದರು,
Be the first to comment on "ಚಿಕ್ಕಮಗಳೂರಿನ ಘಟನೆ: ಬಂಟ್ವಾಳದಲ್ಲಿ ವಕೀಲರ ಪ್ರತಿಭಟನೆ"